ಕೃತ ಕೃತ್ಯನಾದೆನಿಂದಿನ ದಿನದೊಳು
ಕ್ಷಿತಿಸುತ ವೆಂಕಟರಾಮಾರ್ಯರನ ಕಂಡು ಪ
ಭೂಮಂಡಲದೊಳುಳ್ಳ ಸಕಲ ತೀರ್ಥಸ್ನಾನ
ಹೇಮಾದ್ರಿ ಮೊದಲಾದ ಕ್ಷೇತ್ರ ಯಾತ್ರೆ
ನೇಮ ಜಪತಪ ವ್ರತಾದಿಗಳ ಮಾಡಿದ ಪುಣ್ಯ
ಈ ಮಹಾತ್ಮರ ಕಂಡ ಮಾತ್ರ ಸಮನಿಸಿತು 1
ಪರಿಯಂತ ಹರಿಮಹಿಮೆಗಳ
ಸನ್ನುತಿಯಲೀ ಶ್ರುತಿಸ್ಮøತಿಗಳಿಂದ
ಧನ್ಯರೆಂದೆನಿಸಿ ಮಹಿಯೊಳಗೆ ಪೂರಿತರಾದ
ಪುಣ್ಯಚರಿತರ ದಿವ್ಯ ಪಾದವನೆ ನಾ ಕಂಡು 2
ಹೀನ ಜನರೇ ಬಹಳ ಕ್ಷೋಣಿಯ ಮೇಲೆ ಸು
ಜ್ಞಾನಿಗಳು ದುರ್ಲಭರು ಕಲಿಯುಗದಲಿ
ಆನತೇಷ್ಟಪ್ರದ ಜಗನ್ನಾಥ ವಿಠಲ
ತಾನೆ ಕರೆತಂದು ತೋರಿ ಪುನೀತನ ಮಾಡ್ದ 3