ಉತ್ತಮೋತ್ತಮ ದೈವ ನಿತ್ಯನೀನಾಗಿರಲಿಕ್ಕೆ
ಮತ್ತೆ ಅನ್ಯ ದೈವನಾರಿಸಲ್ಯಾತಕೆ ಧ್ರುವ
ಸತ್ಯಸನಾತನನೆಂದು ಶ್ರುತಿಸಾರುತಿರಲಿಕ್ಕೆ
ಎತ್ತ ನೋಡಿದರತ್ತ ಪ್ರತ್ಯಕ್ಷ ನೀ ದೋರಲಿಕ್ಕೆ
ಮತ್ತೆ ಆವ್ಹಾನ ವಿಸರ್ಜನವ್ಯಾತಕೆ 1
ವಾಸವಾಗಿ ಎನ್ನಾತ್ಮದೊಳು ನೀನೆ ಇರಲಿಕ್ಕೆ
ವಾಸುವೇವನೆ ನೀನೆ ಎನ್ನ ಈಶನಾಗಿರಲಿಕ್ಕೆ
ಸೋಶಿಲೆ ಅನೇಕ ವೇಷ ದೋರುವದ್ಯಾತಕೆ 2
ಭಾನುಕೋಟಿತೇಜ ಎನ್ನೊಡಿಯನಾಗಿರಲಿಕ್ಕೆ
ಬಿನುಗುದೈವದ್ಹಂಗು ತಾಇನ್ನೊಂದು ಯಾತಕೆ
ಮನದ ಮಂಗಳಾಗಿ ನೀ ಮಹಿಪತಿಗೆ ಭಾಸುತಿರಲಿಕ್ಕೆ
ಅನುಭವಕ್ಕನುಮಾನ ಮಾಡುವುದ್ಯಾತಕೆ3