ಸಾವಧಾನವೆಂದು ಶ್ರುತಿಸಾರುತಿದೆಕೊ ಸಾವಧಾನ
ಸಾವಧಾನಾಗಿ ಸಾಧಿಸಿ ಶ್ರೀಹರಿ ಸ್ವರೂಪಜ್ಞಾನ ಧ್ರುವ
ಕಾಯದ ಕಳವಳ ಕಂಗೆಡಿಸದೆ ಮುನ್ನೆ ಸಾವಧಾನ
ಮಾಯಮೋಹದ ಭ್ರಮೆದೋರದ ಮುನ್ನೆ ಸಾವಧಾನ 1
ಕಾಮಕ್ರೋಧ ತನ್ನ ನೇಮಗೆಡಿಸಿದ್ಹಾಂಗ ಸಾವಧಾನ
ತಾಮಸದೊಳು ಕೂಡಿ ತರ್ಕಸ್ಯಾಡದ್ಹಾಂಗ ಸಾವಧಾನ 2
ಆಸನ ವ್ಯಸನ ಕೂಡಿ ಹಸನ ಕೆಡದ್ಹಾಂಗ ಸಾವಧಾನ
ವಿಷಯ ವಿಭ್ರಮದೊಳು ವಶವಗುಡದ್ಹಾಂಗ ಸಾವಧಾನ 3
ನಿದ್ರಿವೆಂಬುದು ತನ್ನ ಬುದ್ಧಿಗೆಡಿಸದ್ಹಾಂಗ ಸಾವಧಾನ
ಸದ್ಯ ತಾನಾರೆಂದು ಶುದ್ಧಿ ತಿಳುವ್ಹಾಂಗ ಸಾವಧಾನ 4
ಪಾದ ರಕ್ಷಿಸುವದರಲಿ ಸಾವಧಾನ
ನಿತ್ಯ ಸಾವಧಾನ 5