ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡಿದ್ಯಾ ಈ ದೇಹಕೆ ಬಂದು | ನೋಡಿದ್ಯಾ ನೋಡಿದ್ಯಾ |ನೋಡದವನ ನೀ ನೋಡುವೆ ಎಂದರೆ | ನೋಡುವಿ ಎಂದಿಗೆ ನೋಡಿದ್ಯಾ ಪ ಒಬ್ಬವರ್ಯಾರೂ ತೋರುವದಲ್ಲ | ತೋರಿಸಿಕೊಂಡರದು ತಾನಲ್ಲ | ತೋರಡಗುವದಕೆ ಮೀರಿರುವದು ಎಂದು | ಸಾರುತಿಹುದು ಶ್ರುತಿಸಾರವೆಂದು 1 ರೂಪವನ್ನು ಕಲ್ಪಿಸಲಿಲ್ಲಾ | ಚಿದ್ರೂಪವನು ಸರ್ವರೊಳೆಲ್ಲಾ | ಪಾಪ ಪುಣ್ಯಕೆ ವ್ಯಾಪಕನಾದ | ದೀಪ ಪ್ರಕಾಶನ ಬೋಧಿಪ ಬಲ್ಲಾ 2 ಕರೆದರೆ ಎತ್ತೆತ್ತ ಬಾರ ಮತ್ತೆ | ಮರೆದರೆ ಎತ್ತೆತ್ತ ಹೋಗನು ದೂರ | ಗುರು ಭವತಾರಕ ಶಿರದೊಳು ಕರವಿಟ್ಟು | ವರದ್ಹೇಳಿದ ವಸ್ತು ಪರಿಪೂರ್ಣವಾಗೆ 3
--------------
ಭಾವತರಕರು