ಸತ್ಯಲೋಕೇಶನೆ ಬಳಿತ್ಥಾದಿ ಶ್ರುತಿವಿನುತ
ಸುರಪೂಜ್ಯ ಭಕುತರ ವಿ
ಪತ್ತು ಪರಹರಿಸಿ ಸಲಹಯ್ಯ 1
270 ಸತ್ಯಲೋಕವೆ ಸದನ ತತ್ವಾಭಿಮಾನಿಗಳು
ಭೃತ್ಯರೆನಿಸುವರು ಮಹಲಕ್ಷ್ಮಿ | ಮಹಲಕ್ಷ್ಮಿ ಜನನಿ ಪುರು
ಷೋತ್ತಮನೆ ಜನಕನೆನಿಸುವ 2
271ಚತುರದಶ ಲೋಕಾಧಿಪತಿಯೆಂದೆನಿಪ ನಿನಗೆ ಸರ
ಸ್ವತಿಯು ನಿಜರಾಣಿ ವಿಹಗೇಂದ್ರ | ವಿಹಗೇಂದ್ರ ಶೇಷ ಪಾ
ರ್ವತಿಪರಾತ್ಮಜರು ಎನಿಸೋರು 3
272 ಋಜುಗಣಾಧೀಶ್ವರನೆ ಅಜಪದವಿಗೋಸುಗದಿ
ಭಜಿಸಿದವನಲ್ಲ ಹರಿಪಾದ | ಹರಿಪಾದ ಸೇವೆಯು ಸ
ಹಜವೇ ಸರಿ ನಿನಗೆಂದೆಂದು 4
273 ಚತುರಾಸ್ಯ ತತ್ವ ದೇವತೆಗಳಂತರ್ಯಾಮಿ
ನತಿಸಿ ಬಿನ್ನೈಪೆ ನಿನ್ನಲ್ಲಿ | ನಿನ್ನಲ್ಲಿ ಭಕ್ತಿಶಾ
ಶ್ವತವಾಗಿರಲೋ ಹರಿಯಲ್ಲಿ 5
274 ದ್ವಿಶತ ಕಲ್ಪದಲಿ ತಪವೆಸಗಿ ಅಸುದೇವ ಪೊಂ
ಹರಿಯಿಂದ ಮಿಕ್ಕ ಸುಮ
ನಸರಿಗುಂಟೇನೊ ಈ ಭಾಗ್ಯ 6
275 ಇನಿತಿದ್ದ ಬಳಿಕ ನೀ ಸಲಹದಿಪ್ಪುದು ನಮ್ಮ
ಅನುಚಿತೋಚಿತವೊ ನೀ ಬಲ್ಲೇ | ನೀ ಬಲ್ಲೆ ಶಾರದಾ
ವನಿತೆಯ ರಮಣ ದಯವಾಗೊ 7
276 ಸತ್ವಾತ್ಮಕ ಶರೀರ ಮಿಥ್ಯಾದಿ ಮತಗಳೊಳು
ಉತ್ಪತ್ತಿ ಸಂಪತ್ತು ಕೊಡದಿರು | ಕೊಡದಿರೆನಗೆಂದು ಸಂ
ಪ್ರಾರ್ಥಿಸುವೆ ನಿನಗೆ ನಮೋ ಎಂದು 8
277 ಅಜ್ಞಾನವೆಂಬ ಧಾನ್ಯವನು ಒರಳಿಗೆ ಹಾಕಿ
ಸುಜ್ಞಾನವೆಂಬೊ ಒನಕೀಲಿ | ಒನಕೀಲಿ ಪಾಪಧಾನ್ಯಗಳ
ನುಗ್ಗು ಮಾಡಿದೆಯೊ ಘಳಿಗ್ಯಾಗೆ 9
278 ಮಾತರಿಶ್ವನೆ ನಿನ್ನ ಪ್ರೀತಿಯೊಂದೇ ಜಗ
ನ್ನಾಥವಿಠಲನ್ನ ಕರುಣಕ್ಕೆ | ಕರುಣಕ್ಕೆ ಕಾರಣವು ಯಮ
ಯಾತನವು ಬರಲು ನಾನಂಜೆ 10