ಏನೆಂದ್ಹೇಳಲಿ ಸ್ವಾನಂದ ಘನ ಸುಖವು ಧ್ರುವ
ಮಾತಿನಂತಲ್ಲ ಜ್ಯೋತಿರ್ಮಯದ ಸುಖ
ನೇತಿ ನೆÉೀತಿವೆಂಬುದು ಶ್ರುತಿವಚನ 1
ಹೋಲಿಕೆಯ ಮಾತಿಗಿದು ಕೇಳು ಸಿಲುಕುವುದಿಲ್ಲ
ಮೂಲ ತಿಳಿದವನೆ ಬಲ್ಲ ಮ್ಯಾಲೆ ಮಂದಿರದ 2
ಅಂಜನೆ ಇಟ್ಟ ಗುರು ಕೃಪೆಯಿಂದ ನಿಜ
ಗುರುತು ಕಂಡವನೆ ಬಲ್ಲ ಹರಿಮಹಿಮೆಯ 3
ಸ್ವಾನುಭವದ ಸುಖಜ್ಞಾನಿಗಳಿಗಲ್ಲದೆ
ನೀನು ನಾನೆಂಬವರಿಗೆ ಖೂನ ತಿಳಿಯದು 4
ಮನಕರಿಗಿ ಮಹಿಪತಿ ಘನ ಬೆರೆದ ಗುರುತ
ಏನೋ ಎಂತೋ ತಿಳಿ ಮಾತ ಆನಂದಭರಿತ 5