ಭವ | ಭಂಗವಾಗುವದು ಅಂಗವಯ್ಯೋ ಪ
ಅಗ್ಗವಾದರು ಸಂತರು ಲಾಭವನು | ಮುಗ್ಗು ಜೋಳವ ಕೊಟ್ಟಿತು | ಗೊಗ್ಗಯ್ಯನೆಂಬರೇ ಕಡೆಯಲ್ಲಿ ನಿನಗೆ ಅಗ್ಗಳವದಕಿಂತ ಒಂದುಂಟು ಗಂಟು 1
ಸಕಲ ಶಾಸ್ತ್ರಗಳ ಬಲ್ಲೆ | ಮಿಕ್ಕ ಕಾಪುರುಷರಂತೇನು ಕಲ್ಲೇ | ಪ್ರಕಟಿಸುವರಾರಿಲ್ಲೆ ನಿನಗಿನ್ನು ಶಿವ ಶಿವಾನುಭವ ನೀನ್ಯಾಕ ಒಲ್ಲೆ ಇಲ್ಲೇ 2
ಹುಚ್ಚರೇ ಭವತಾರಕನ ಭಕ್ತರು ? ನೆಚ್ಚುವರೆ ಸಂಸಾರವ ? ಮೆಚ್ಚುವರೆ ಶ್ರುತಿಯುತರು ಈ ಮಾತಿಗೇ ? ಎಚ್ಚರಿಕೆ ಇನ್ನಾರ ಹಿಡಿಯೊ ಬೇಗ ಈಗ 3