ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಹಯವದನ ಪ್ರಾರ್ಥನೆ) ಹಾರುತ ಬಂದಿಹ ಹಯಮುಖ ಮೂರುತಿಯನು ನೋಡಿ ಮಾರುತ ವಂದಿತ ಮಹಿಮೆಯ ತೋರುವ ಕಾಪಾಡಿ ಪ. ವೇದವ ಕದ್ದ್ಯೊದಸುರನ ಹಾದಿಯೊಳಡ್ಡಗಟ್ಟಿ ಮೇದಿನಿಗೊರಗಿಸಿ ಶ್ರುತಿಯನು ಕಾದನು ಜಗಜಟ್ಟಿ ವೇಧಗೆ ಪರತತ್ವಂಗಳ ಬೋಧಿಸಿ ಮನಮುಟ್ಟಿ ಶ್ರೀಧರ ದುರ್ಜನರೆದೆಗಳ ಭೇದಿಸುವನು ಮೆಟ್ಟಿ1 ವಾದಿನೃಪ ಯತೀಂದ್ರ ಮನೋಲ್ಲಾಸದಿ ಪದಾಂಭೋಜ ಸಾಧಿಸುವನು ಸಕಲಾರ್ಥನ ಸ್ವಜನಕೆ ಸುರರಾಜ ಸ್ವೋದರಗತ ವಿಶ್ವಂಭರ ಶಮಿತದುರಿತ ಬೀಜ ವ್ಯಾಧಿಯ ಹರಸುವ ವಿಭವಾಸಾದಿತ ಗಜರಾಜ 2 ಹೇಷಾ ನಿಭೃತಾಶಾನತ ಕೋಶಾಸ್ಪದ ರೂಪ ದೋಷಾಂಬುಧಿಶೋಷಾದ್ಭುತ ವೇಷಾಸುರ ತಾಪ ವೀಶಾಹಿ ಗಣೇಶಾದ್ಯಮರೇಶಾರ್ಚಿತ ಪಾದ ಶೇಷಾಚಲ ಭೂಷಾಗಮ ಭಾಷಾಮಿತವಾದ 3
--------------
ತುಪಾಕಿ ವೆಂಕಟರಮಣಾಚಾರ್ಯ
ಚರಣಕಮಲವನು ನೆನೆವೆ ನಾ ನಿನ್ನ ಪ. ಚರಣಕಮಲವನು ನೆನೆವೆ ನಾ ದುರಿತರಾಶಿಗಳ ಸಂಹರಿಪನ ಅ.ಪ. ಶ್ರುತಿಯನುದ್ಧರಿಸಿದುದಾರನ ಸಿಂಧು- ಮಥನಕೊದಗಿದ ಗಂಭೀರನ ಕ್ಷಿತಿಯನೆತ್ತಿದ ಬಲುಧೀರನ ಶಿಶು ಸ್ತುತಿಸೆ ಕಂಬದಿ ಬಂದ ವೀರನ 1 ಇಂದ್ರನ ಧಾರೆಯ ನಿಲಿಸಿದನ್ನ ತನ್ನ ತÀಂದೆಯ ಮಾತು ಸಲಿಸಿದನ್ನ ಕಂದರದಶನ ಸೋಲಿಸಿದನ್ನ ವ್ರಜ- ದಿಂದುಮುಖಿಯರ ಪಾಲಿಸಿದನ್ನ 2 ವಧುಗಳ ವ್ರತವ ಖಂಡಿಸಿದನ್ನ ದುಷ್ಟ ರುದಿಸಲು ತುದಿಯ ತುಂಡಿಸಿದನ್ನ ಇದಿರಾದ ಖಳರ ಖಂಡಿಸಿದನ್ನ ಹಯ ವದನಪೆಸರ ಕೊಂಡುದಿಸಿದನ್ನ 3
--------------
ವಾದಿರಾಜ
ಬೇಕೆಂದರೆ ಬಾರದು ಒಲ್ಲೆನೆಂದರೆ ಹೋಗದುಏಕಂಜುವಿ, ಶ್ರೀಹರಿ ಕರುಣಿಸದೆ ಒಂದೂ ಆಗದು ಪ ಸುಖವಾದಡೆ ಕಾಣುತ ಮುಖ ಕಮಲವುವಿಕಸಿತವಾಹುದು ಶ್ರೀಹರಿ ಕರುಣದಿದುಃಖವಾದಡೆ ದುಸ್ಥಿತಿಯಲಿರಲು ಅಂ-ಬಕದಲಿ ಜಲ ಪೋಗುವುದೇಕೊ ?ಸುಖದುಃಖ ದಿವ ರಾತ್ರಿಯ ತೆರವದರಿಂದಲಿ ನರರಂ-ಗಕೆ ಬಾಹುದು, ರಕ್ಷಣೆ ಮಾಡುವ ಕಾಶಿಪೀತಾಂಬರಮಕರ ಕುಂಡಲಾಭರಣನ ನೆನೆ ಮನವೆ1 ಸಿರಿ ಬಂದರೆ ಸಿರಿಗಾನಂದವ ಮಾಡುವಿರೇತಕೆ ಮನ ನಿರ್ಮಳ ಧ್ವನಿಯಲಿದರಿದ್ರವು ಬಂದರೆ ಧಾತುಗೆಟ್ಟು ದೇಹಾ-ತುರ ಹೊಂದುವಿರೇತಕೆ ದುಗುಡದಿಸಿರಿ ದಾರಿದ್ರ್ಯವು ಸುರತತಿಗಡರುವತೆರನೆಂದರಿದದರಿಂದಲಿ ಮಾನ-ವರಿಗೆ ಬಾಹುದು, ಪರಿಹರಿಸುವ ಪರಮಾತ್ಮನೆನಿಪಮುರವೈರಿಯ ಬಿಡದಿರು ಎಲೆ ಮನವೆ 2ಬಿ ಜನನವಾದರೆ ಹಾಡಿ ಹರಸಲೇತಕೆಅನುಗತಿಯನು ಹೇಳಿದರಳಲೇಕೆಜನನಮರಣವದೆಲ್ಲರಿಗೆ ಗತಿಬಾಹುದು ಏಕೆಜನನ ಮರಣವನೊಂದು ಹೊರಗೆ ಮಾಡಿ ಪರಜನದೊಳಗಿರಿಸುವ ಸುಜನೇಶ ಮುನೀಶನೆಂ-ದೆನಿಸುವ ಕಾಗಿನೆಲೆಯಾದಿಕೇಶವರಾಯನಅನುಶ್ರುತಿಯನು ಬಿಡದಿರು ಎಲೆ ಮನವೆ 3
--------------
ಕನಕದಾಸ
ಹರಿಮುಖಿ ಹರಿವಾಣಿ ಹರಿವೇಣಿ ಹರಿಣಾಕ್ಷಿಹರಿಮಧ್ಯೆ ಹರಿಗಮನೆ ಪ ಹರಿಯ ನಂದನ ಸಖನೆನಿಪ ಅಹೋಬಲದಹರಿಯ ನೀ ತಂದು ತೋರೆ ಅ ಎರವಿನ ತಲೆಯವನಣ್ಣನಯ್ಯನಪರಮ ಸಖನ ಸುತನಹಿರಿಯಣ್ಣನಯ್ಯನ ಮೊಮ್ಮನ ಮಾವನತಂದೊಟ್ಟಿದನ ಹಗೆಯಗುರುವಿನ ಮುಂದೆ ಮುಂದಿಹ ಬಾಹನಕಿರಿಯ ಮಗನ ರಾಣಿಯದುರುಳತನದಿ ಸೆಳೆದುಕೊಂಡನ ಕೊಂದನತರಳೆ ನೀ ತಂದು ತೋರೆ 1 ಸೋಮನ ಜನಕನ ಸತಿಯ ಧರಿಸಿದನರೋಮ ಕೋಟಿಯೊಳಿಟ್ಟಹನಕಾಮಿನಿ ಸತಿಯ ಕಂದನ ತಮ್ಮಗೊಲಿದನಭಾಮೆ ನೀ ತಂದು ತೋರೆ 2 ಶ್ರುತಿಯನುದ್ಧರಿಸಿ ಭೂಮಿಯ ಪೊತ್ತು ಅಡವಿಯಪಥದೊಳು ತಿರುಗಿದನ ಅತಿಶಯ ನರಹರಿ ವಾಮನ ರೂಪಿನಪಿತನ ಮೋಹದ ರಾಣಿಯ ಹತ ಮಾಡಿ ಸತ್ಯಕ್ಕೆ ನಿಂತು ನಗವ ಹೊತ್ತುಪತಿವ್ರತೆಯರ ಭಂಗಿಸಿಕ್ಷಿತಿಯೊಳು ರಾಹುತನಾದ ಬಾಡದಾದಿಕೇಶವನ ತಂದು ತೋರೆ3
--------------
ಕನಕದಾಸ