ಹಮ್ಮನಳಿದು ನಮ್ಮ ಮತವ-
ನೆಮ್ಮ ಜಯಮುನೀಂದ್ರ ಕೃತಿಯ
ರಮ್ಯರಸವ ಸವಿದು ಸವಿದು
ನಿಮ್ಮ ದುರ್ಮತಗಳನೆ ಬಿಡಿರೊ ಪ.
ಸುಖಮುನಿ ಚತುರ್ಮುಖರು ಕುಮತ
ನಿಕರವ ನೋಡಿ ಮನಕೆ ತಂದು
ಪಾದ ತೊಳೆಯಲು
ಭಕುತಿಭರದಿ ಗಿರೀಶಮುಖ್ಯ
ಸುರರು ಶಿರದ ಮೇಲೆ
ಲಕುಮಿ ಆತ್ಮಕರಾಗಿ ಧರಿಸಿ
ಸುಖಿಸಿದ ಕಥೆ ಸ್ಮøತಿಯೊಳಿರಲು 1
ಯೋಗಿ ಜಯಮುನೀಂದ್ರ ಕೃಪಾ-
ಸಾಗರನಾಗಿ ಧರೆಗೆ ಬಂದು
ಈ ಗುರುಕೃತಿಗಂಗೆಯ
ಬೇಗ ತಾನು ತುತಿಸಿ ಮೈಯ
ಯಾಗಗೊಳಿಸಿ ಸಹಸ್ರ ಮುಖದಿ
ಭಾಗವತರೆಂಬ ಬುಧರಿಗಿತ್ತ
ಭಾಗ್ಯವ ನೀವೆಲ್ಲ ನೋಡಿರೊ 2
ಶ್ರುತಿಮಯವಾದ ಬಹಳ ಬಲು ಯು
ಕುತಿಯನೆ ಅಳವಡಿಸಿ ಸು-
ಮಂದರ ಹೂಡಿ
ಮಥಿಸಿ ಮಧ್ವಮತಾಬ್ಧಿಯ
ಯತಿಶಿರೋಮಣಿ ಜಯಮುನಿ ಶ್ರೀ-
ಪತಿ ಹಯವದನ್ನ ಬಲದಿ
ಶ್ರುತಿಯಮೃತವ ರಚಿಸಿದ ನಮ್ಮ
ಕ್ಷಿತಿಸುರರೆ ಕುಡಿದು ನೋಡಿರೋ3