ಮೊರೆ ಕೇಳು ನೀನೆನ್ನ ಕರುಣದಿ ತವಪಾದ
ಪರಮಭಕ್ತಗಗೊಲಿಸದಿರು ದೇವ
ಚರಣದಾಸರ ಕಾವ ಸಿರಿಯ ಸಖಜೀವ ಪ
ಕ್ಷಿತಿಯೊಳು ಸತಿಸುತರತಿ ಮೋಹರತಿಯೊಳು
ಮತಿಶೂನ್ಯನೆನಿಸಧೋಗತಿಗೆಳೆಸದೆ
ಪತಿತಪಾವನ ನಿಮ್ಮ ಶ್ರುತಿಭೋದ್ವ್ಯಾಕ್ಯದಭಿ
ರತಿಯನೆನ್ನೊಡಲೊಳು ನೆಲೆಸೀಶಾ
ಹತಕಂಸ ಸುರತೋಷಾದ್ವಿತಿ ಪಂಚಶಿರ ನಾಶ 1
ವಿಷಯ ವಾಸನದೇಳಸ್ವಿಷಮ ಸಂಸಾರವೆಂಬ
ಮುಸುಕಿದ ಮಡುವಿನೊಳ್ಮುಳುಗಿಸಿದೆ
ವಸುಧೆಯೊಳಸೆವ ಆ ಅಸಮಹಿಮನ ಪಾದ
ದಾಸರ ಸಂಗ ನೀಡ್ವಿಮಲಾಂಗ
ಭಂಗ ಕುಸುಮಾಕ್ಷ ಕೃಪಾಂಗ 2
ಮದನಕದನದಿ ಮುದಸುಖವಿಧಿಸಗ
ಲ್ಹೋದ ಸುದತಿಯಳ ನೆನೆವಂತೆ
ಪಾದ ಸದುಭಕ್ತಿ ಹಂಬಲ ಅಗ
ಲದಿರಿಸು ರಘುಕುಲಸೋಮ
ಸದುಭಕ್ತರ ಪ್ರೇಮ ಸುದಯನೆ ಶ್ರೀರಾಮ3