ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆ ಹರಿ ನಾನೆಂಬ ಕುಮತವ ಸುಡು ಸುಡು ದೇಹಿಯುಣವುಣದವನ ನೋಡುತಲಿಹ ಪ. ನೀರೊಳು ಬಹುಕಾಲ ಪೊಕ್ಕು ಮುಳುಗಿದವ ಭಾರದ ಗಿರಿಯನುದ್ಧರಿಸಿರುವ ಈರೇಳು ಲೋಕದ ಹೊರೆಯನೆಲ್ಲವ ಹೊತ್ತು ಹಾರುವ ಹಕ್ಕಿಯ ಹೆಗಲನೇರಿ ಬಹ 1 ಜಲಚರ ಸ್ಥಲಚರ ಯಾಚಕನೆನಿಸಿ ಮ- ತ್ತಲಸದೆ ಮಾತೃವಧೆಯ ಮಾಡಿದ ಛಲದಿಂದಸುರರ ಕೊಂದು ಸಿಂಧುವ ದಾಟಿ ಬಲುಗಳ್ಳನೆನಿಸಿ ಮಾವನ ಸೀಳ್ದವ 2 ಸತಿಯರ ವ್ರತವ ಕೆಡಿಸಿ ಕುಮಾರ್ಗವ ತೋರಿ ಕ್ಷಿತಿಯೊಳು ಯುಗದ ರಾಯರ ಕೊಲ್ಲುವ ಶ್ರುತಿನಿಷಿದ್ಧಪಥದಿ ನಡೆದು ಪಾಪಕಂಜದೆ ಯತಿಶ್ರುತಿತತಿಗಳೆಲ್ಲರ ಹೊಂದಿದ 3 ಸಾವಿರ ಫಣದ ಫಣಿಯೊಳ್ಕಟ್ಟುವಡೆದಾಗ ಹಾವಿನ ಮೈಮೇಲೆ ಒರಗಿದವ ಜೀವರೆಲ್ಲರ ಕೊಂದು ಧರೆಯನೆಲ್ಲವ ನುಂಗಿ ಸ್ಥಾವರದೊಂದೆಲೆಯನೆ ಪೊಂದಿಹ 4 ಉರಿವ ಕಿಚ್ಚ ನುಂಗಿ ಜ್ವಲಿಸುವಗ್ನಿಯೊಳು ಸ್ಥಿರವಾದ ಪ್ರಬಲದೈತ್ಯರ ವೈರವ ಸಿರಿ ಹಯವದನನ್ನ ದಾಸರ ದಾಸನು ಚರಣಸೇವಕನೆಂಬ ಮತವೆ ಲೇಸು 5
--------------
ವಾದಿರಾಜ