ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾತರವ ನಾನಯ್ಯ ಇಂದಿರೇಶ ಹೋತಾಹ್ವಯನೆ ನಿನ್ನಾಧೀನ ಜಗವೆಲ್ಲ ಪ ಕಾಲಗುಣಕರ್ಮ ಸ್ವಭಾವಗಳ ಮನ ಮಾಡಿ ಶ್ರೀಲೋಲ ನೀ ಸರ್ವರೊಳಗೆ ಇದ್ದು ಲೀಲೆಗೈಯುತ ಲಿಪ್ತನಾಗದೆ ನಿರಂತರದಿ ದಿವಿಜ ದಾನವ ತತಿಯ 1 ತಿಳಿಸಿಕೊಂಬುವ ನೀನೆ ಶ್ರುತಿತತಿಗಳೊಳಗಿದ್ದು ತಿಳಿಸುವವ ನೀನೆ ಉಪದೇಶಕರೊಳು ತಿಳಿವವನು ನೀನೆ ಬುದ್ಧ್ಯಾದಿಂದ್ರಿಯಗಳೊಳು ನಿಖಿಳ ವ್ಯಾಪಾರ ಮಾಡುತಲಿಪ್ಪೆ 2 ಅಗಣಿತ ಮಹಿಮೆ ಜಗಜ್ಜನ್ಮಾದಿಕಾರಣನೆ ತ್ರಿಗುಣವರ್ಜಿತ ತ್ರಿವಿಕ್ರಮ ತ್ರಿಧಾಮಾ ವಿನುತ ಜಗನ್ನಾಥ ವಿಠ್ಠಲ ನಿನ್ನ ಪೊಗಳಿ ಹಿಗ್ಗುವ ಭಾಗ್ಯಕೊಡು ಜನ್ಮ ಜನ್ಮಕೂ 3
--------------
ಜಗನ್ನಾಥದಾಸರು