ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣದಿ ರಕ್ಷಿಸು ಎನ್ನನು ಪುಲಿ ಗಿರಿಲೋಲ ನಂಬಿದೆ ನಿನ್ನನು ಪ ಕರುಣದಿ ರಕ್ಷಿಸು ಚರಣಸೇವಕಭಯ ಚರಣಯುಗಳದಿ ಶರಣು ಹೊಕ್ಕೆನು ಅ.ಪ ಗತಿ ತಾಳ ಲಯ ಬಂಧ ತಿಳಿಯದ ಶ್ರುತಿಗಳ ಮಹಿಮೆಯ ಕೇಳದ ಶ್ರುತಿಗೋಚರ ನಿಮ್ಮ ಸ್ತುತಿಯ ಅನುಭವವಿತ್ತು ಪತಿತಪಾವನ ಪುಲಿಗಿರೀಶನೆ ಪತಿತನುದ್ಧರಿಪಂತೆ ಗತಿವಿಹೀನಗೆ ಪಥವ ತೋರಿಸಿ ಸದ್ಗತಿಯ ಪಾಲಿಸುವಂತೆ ಪತಿತನೆನ್ನನು ಭವಜಲಧಿ ಮಧ್ಯದಿ 1 ಗುರುದ್ರೋಣ ಕೃಪರ ಮುಂದಡೆಯಲ್ಲಿ ದುರುಳ ದುಶ್ಯಾಸನನ ಕೈಯಲ್ಲಿ ಪರಮಾತ್ಮ ಪರಿಪೂರ್ಣ ಕರುಣಾಳು ನಿನ್ನನೇ ಮರೆಹೊಕ್ಕೆ ಪೊರೆಯೆಂದು ಮೊರೆಯಿಡಲಾಕ್ಷಣ ಶರಣಜನ ಸಂಸಾರ ಶ್ರೀಹರಿ 2 ನರಳಿ ಸಾವಿರವರುಷ ಜಲದೊಳು ಸ್ಮರಣೆ ಮಾಡುತ ದೃಢಮನದೊಳು ಕರಿ ಮೊರೆಯಿಡಲಾ ಕರುಣದಿಂ ಮೊರೆ ಕೇಳಿ ಗರುಡನ ಪೆಗಲೇರಿ ಸಾರಿ ಕರಿಯಪೊರೆದಾ ವರದವಿಠಲ 3
--------------
ವೆಂಕಟವರದಾರ್ಯರು