ಶ್ರೀ ಮಹಿದೇವಿಯರು ಸತ್ಯಭಾಮಾ ರುಕ್ಮಿಣಿಯರೆಂಬ
ನಾಮಗೊಂಡು ನಮ್ಮ ಕೃಷ್ಣ ಸ್ವಾಮಿಯನ್ನು ಸೇವೆ ಮಾಳ್ಪ
ಕರವ ಪಿಡಿಯಲಾ ಮಹಾರುಂಧತಿಯ ಕೂಡಿ
ಭಾಮೆಯರೆಲ್ಲ ನಲಿವುತ 1
ನೀಲ ಖಚಿತ ನಿರ್ಮಲಾರತಿಗಳನೆತ್ತಿ
ಸಾಮಗಾನಲೋಲಗೆ ಶ್ರುತಿಗಳರ್ಥವರಿತು ಪುಣ್ಯ
ನಾಮನ ಹರಿಸಿ ನುಡಿದರು 2
ವೇದ ತಂದು ಮಂದರಾಖ್ಯ ಭೂಧರವ ನೆಗಹಿ ಧರೆಯ
ಕಾದು ಕುಂಭದಿಂದಲುದಿಸಿ ಸಾಧುತನದಿ ಬಲಿಯ ಗೆದ್ದು
ಕ್ರೋಧದಿಂದ ಕೊಡಲಿ ಪಿಡಿದು ಕಪಿಗಳನ್ನು ಕೂಡೆ ಕುಬ್ಜೆ
ನೋಡಿ ಕಾಪಾಡಿ ಒಡನಾಡಿ 3
ಮೂಢಜನರ ಮೋಹಿಸಿ ಮುಂದೋಡಿ ಮ್ಲೇಚ್ಛ ಜನರ ಮಡುಹಿ
ಆಡುವ ಬಾಲಕರ ತೆರೆವ ಮಾಡಿ ಮೋದದಿಂದ ಲಕ್ಷ್ಮಿ
ಕೂಡಿ ಕ್ರೀಡಿಸುತ ಸುಖಿಯಾಗು 4
ಕಲಿಯ ಕಾಲದಲ್ಲಿ ಬಹಳ ಬಳಲುವ ಸಜ್ಜನರೆಲ್ಲ
ಸುಲಭದಿಂದ ಸಲಹಿ ಖ್ಯಾತಿ ಗೊಳುವೆನೆಂದು ವೆಂಕಟಾದ್ರಿ
ಕುಲವೆಲ್ಲ ಕರಸಿ ಚೆಲುವೆ ಪದ್ಮಜಾತೆಯನ್ನು
ಒಲಿಸಿ ನಂಬಿದವರ ಸೌಖ್ಯ ಜಲಧಿಯೊಳ್ಯೋಲಾಡಿಸುತ
ಫಲವನೀವನೆಂಬ ಕೀರ್ತಿಬಲವಾಗಿ ಪಡದು ಸುಖಿಯಾಗು 5