ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮತದೊಳಗೆ ಒಳ್ಳೆ ಮತ ಮಧ್ವಮತವು - ರಘು - |ಪತಿಪೂಜಾವಿಧಾನಕೆ ಪಾವನ ಮತವುಪ.ನಾರಾಯಣನ ನಾಮ ತುಂಬಿದ ಮತವೇದ - |ಪಾರಾಯಣಕೆ ಅನುಕೂಲ ಮತವು ||ತಾರತಮ್ಯದಿ ಉದ್ಧರಿಸಿ ಶ್ರುತಿಗಳನೊರೆದಧಾರಣಿಸುರರ ಸಂತೋಷದ ಮತವು 1ಅಕಲಂಕ ಶ್ರೀಹರಿಗೆ ವಜ್ರಾಂಕಿತ ಮತವು |ಸಕಲ ದೇಶಕೆ ಸನ್ಮತವಾದ ಮತವು ||ಅಕುಟಿಲಶುಕ - ಸನಕಾದಿ ಮುನೀಂದ್ರರ |ನಿಖಿಲಕ್ರಿಯ ಪದವೀವ ನಿರ್ಮಲ ಮತವು 2ಸರಸ ಸದ್ಗುಣ ಸತ್ಯಸಾತ್ತ್ವಿಕ ಮತವಿದು |ಗುರುಶಿಷ್ಯರಿಗೆ ಅನುಕೂಲ ಮತವು ||ಪರಮತ ಖಂಡಿಸಿ ಪಂಡಿತರು ಪೇಳಿದ |ಪುರಂದರವಿಠಲನ ಮತವೆ ಹನುಮನ ಮತವು 3
--------------
ಪುರಂದರದಾಸರು