(ಶ್ರೀ ವೇದವ್ಯಾಸರನ್ನು ನೆನೆದು)
ವ್ಯಾಸರೂಪಿಯಾದ ಶ್ರೀನಿವಾಸನ ನಂಬಿ ಪ.
ದ್ವಾಪರಾಂತದಿ ದೈತ್ಯಜನರ ಪ್ರತಾಪದಿಂದಲಿ ಜ್ಞಾನತತ್ವ ಪ್ರ-
ದೀಪ ಮಾಲಿನ್ಯವನು ಪೊಂದಿರಲು ಕ್ಷೀರಾಬ್ಧಿ ತಡಿಯಲಿ
ಅಜ ಬಂದು ಸ್ತುತಿಸಲು
ತಾಪ ಶಮಿಸುವೆನೆಂಬಭಯವಿತ್ತಾಪರಾಶಗೊಲಿದು ಕರುಣಿಸಿ
ಕೃಪಾಪಯೋನಿಧಿರೂಪ ತೋರಿದ 1
ಮಹಾಭಾರತಾಮೃತ ಸಹಿತ ವಿರಚಿಸಿ
ತೋರ್ಪಂತೆ ಬಹು ಗಂ-
ಭೀರ ಸಾರವನಿಟ್ಟು ಪರಿಜನವಾ ತತ್ವೋಕ್ತಿಯಿಂದ ಪ-
ರೋರು ಭಾವವ ತಿಳಿಸಿ ದೈತ್ಯರ ಗಾರಗೊಳಿಸುತ ಅನವರತ ಸಂ-
ಸಾರ ಚಕ್ರದಿ ತಿರುಗುವವರ ವಿಚಾರ ಭ್ರಮೆಗೊಂಬಂತೆ ತಿಳಿಸಿದ 2
ಶುದ್ಧ ಸಾತ್ವಿಕರಾದ ಜೀವರನುದ್ಧರಿಸಬೇಕೆಂದು ಶ್ರುತಿಗಣ
ಬದ್ಧ ಸೂತ್ರವ ನಿರ್ಮಿಸುತ್ತದನು ಸಿದ್ಧಾಂತ ಮಾಡಲು
ಮಧ್ವಮುನಿವರಗಿತ್ತು ನಿಯಮವನು ನಿರ್ನೈಸಿ ತಿಳಿಸುತ
ಪಾತಾಳಕೆ ಸುರೋತ್ತಮ
ಸಿದ್ಧ ಸೇವಿತ ಶೇಷಗಿರಿಯೊಳಗಿದ್ದು ಭಜಕರನುದ್ಧರಿಸುತಿಹ 3