ಮನಮುಟ್ಟಿ ಮಾಡುವದೆ ಭಕ್ತಿಗಳು
ಶ್ರುತದೃಷ್ಟನು ಮನದಿಂದ ಮಾಡುವ ನೇಮನಿತ್ಯಗಳು
ಮಹಾ ಧರ್ಮಶಾಸ್ತ್ರಗಳು
ಯತಿ ಕುಲದೀಪಗಳು 1
ತ್ರಿವೇಣಿ ಸಂಗಮ ಸ್ನಾನಗಳು
ಮಹಾದಿವ್ಯ ಮಡಿಯಗಳು
ಇಟ್ಟಿಹ ದ್ವಾದಶ ನಾಮಗಳು
ಮನಗಂಡಿಹದೇ ಶ್ರೀಮುದ್ರೆಗಳು 2
ಸ್ಮರಣೆಯೊಳಿಹುದೆ ಸಂಧ್ಯಾನಗಳು
ಜಪಸರ ಮಾಲೆಗಳು
ಜಪತಪ ಧ್ಯಾನವೆ ಮೌನಗಳು
ನಿರ್ಧಾರದಿ ಗುರುಪಾದ ನಿಶ್ಚೈಸಿಹ ವ್ರತ ಆಚಾರವೇ ನಿಷ್ಠೆಗಳು 3
ಮಾಡುವುದೇ ದೇವಪೂಜೆಗಳು
ಅಂತ:ಕರಣದಿ ಗುರುಚರಣದ ಅಭಿಷೇಕಜ್ಞಾನ
ಭಾಗೀರಥಿ ತೀರ್ಥಗಳು
ಚಿತ್ತಚಿಂತನದಿ ದಿವ್ಯ ವಸ್ತ್ರಗಳು
ಪರಿಮಳಪುಷ್ಪಗಳು 4
ಅನಿಮಿಷ ನೇತ್ರದಿ ನೋಡುವ ಘನ ಚಿತ್ಪ್ರಕಾಶವೆ ಸದಾನಂದದ
ಮೊದಲಾದ ಸತ್ವರಜತಮ
ಏಕಾರ್ತಿಗಳು ಸದ್ಭಾವನಿ ತಾಂಬೂಲಗಳಿಂದಲಿ ರತಿಮನ ಘನ
ಮಂಗಳಾರ್ಚನಿ ಪಂಚ ಪ್ರಕಾಶಗಳು 5
ಶ್ರೀಗುರು ಸೇವೆ ಸತ್ಕಾರಗಳು
ಜಯ ಲಕ್ಷ್ಮಿಯ ಷೋಡಶ ಉಪಚಾರಗಳಿಂದಲಿ ಮಹಾದಿವ್ಯ
ಪೂಜೆಗಳು ತಲ್ಲೀನವು ಅಗಿಹ ಗುರುಪಾದದಿ ಪ್ರದಕ್ಷಿಣೆವೆ
ಗುರುನಾಮವೇ ಸದ್ಗತಿ ಮುಕ್ತಿಗಳು 6
ಆತ್ಮಾನುಭವ ಗುರುದಾಸರಿಗಲ್ಲದೆ ಬಲ್ಲವೇನು ಪಶುಪ್ರಾಣಿಗಳು
ಸಾಕ್ಷಾತ್ಕಾರಗಳು
ಭಾಸ್ಕರ ಸ್ವಾಮಿಗಳು
ತ್ರಾಹಿ ಜೀವನಮುಕ್ತಿಗಳು 7