ವಾಸಿಷ್ಠ ಕೃಷ್ಣ ವಿಠಲ | ನೀ ಸಲಹೊ ಇವನಾ ಪ
ಮೇಶ ಮಧ್ವೇಶ ನಿನ್ನಡಿಯ | ದಾಸ್ಯವನುಆಶಿಸುವ ಭಕ್ತಗೆ ಪ | ರಾಶರಾತ್ಮಜ ಒಲಿದೂ ಅ.ಪ.
ವೇದವ್ಯಾಸನೆ ನಿನ್ನ ಆದರದಿ ಧಾನಿಸುತಮೋದದಲಿ ಶ್ರುತತತ್ವ | ಪಾದಾರ್ಪಣೆನ್ನೇ |ನೀದಯದಿ ಮರೆಯಾಗಿ | ತೋರ್ದೆ ಗುರು ಬಿಂಬವನುವೇದಾಂತ ವೇದ್ಯ ಹರಿ | ಹೃದಯ ಗಹ್ವರದೀ 1
ಕ್ಲೇಶಗಳ ದಹಿಸಿ ಸ | ರ್ವೇಶ ಸದ್ಭೋದಗಳಲೇಸಾಗಿ ಅರುಹುತಲಿ | ಶ್ರೀತ ಕೈ ಪಿಡಿಯೋ |ತೋಷ ಕ್ಲೇಶಂಗಳು ರ | ಮೇಶ ನಿನ್ನಿಂದೆಂಬಭಾಸುರದ ಜ್ಞಾನ ಪ್ರ | ಕಾಶ ಕೊಡು ಇವಗೆ 2
ಮೋದ ಅದ್ವೈತ ಪಾದ ನಂಬಿಹನೋ 3
ಪರಿ ಲೀಲೆಗಳ ತೋರಿ ಇವನಲ್ಲೀಪರಿಹರಿಸೊ ಭವಬಂಧ | ಮರುತಾಂತರಾತ್ಮಕನೆಎರಗಿ ತವ ಪದದಲ್ಲಿ | ಮೊರೆಯ ಬಿದ್ದವಗೇ 4
ಸಾವಧಾನದಿ ಧ್ಯಾನ | ಭಾವ ವೃದ್ಧಿಯಗೈಸಿದೇವ ತವ ರೂಪವನು | ಆವ ಹೃದ್ಗುಹಡೀಓವಿ ಕಾಂಬುವ ಹದನ | ನೀವೊಲಿದು ಪಾಲಿಪುದುಗೋವುಗಳ ಪಾಲ ಗುರು ಗೋವಿಂದ ವಿಠಲಾ 5