ಏನು ರಾಗವ ಮಾಡಲ್ಯಾ ನಾನು ಬ್ಯಾಗನೆ
ಸಾನುರಾಗದಿ ಹರಿಯು ತಾನೇ ಮಾಡಿಸುವಾ ಪ
ದಾನವ ದ್ವಿಪ ವೃಂದ ಮಾನನದಿ ಕರ್ಚಿದ
ಮಾನನಿಧಿ ಕೇಸರಿಯೋ ಶ್ರೀಹರಿಯೋ ಅ.ಪ.
ಅಜ್ಞಾನ ತಮದೊಳಗೆ ಸುಜ್ಞಾನಿಗಳು ಬಳಲೆ
ತಜ್ಞಾನಪೂರ್ಣ ಸರ್ವಜ್ಞರವತರಿಸಿ
ಅಜ್ಞಾನದಿಂದ ಗತಿಯಕ್ಕುದೆಂದರುಹಿಸಿದ
ಸುಜ್ಞಾನ ದರ್ಪಣವೋ ಶ್ರೀ ಧನವೊ 1
ಕರ್ಮದಿಂದಲೆ ಭಕ್ತಿ ವೈರಾಗ್ಯ ವಿಜ್ಞಾನ
ಧರ್ಮವರಿಯಲು ಮುಕ್ತಿಪಥಕೆ ಸೋಪಾನ
ಮರ್ಮವರಿಯದೆ ವಿಷಯ ಕಾನನದಿ ಚರಿಸುವ
ನರರಿಗೆ.... ಶ್ರೀವರನೊ 2
ವನರುಹಭವಾಂಡದೊಳು ಕುನರ ಸಸಿಗಳು ಬೆಳೆದು
ಸುನರ ಕಮಲವು ತೋರದಂತೆ ಮುಸುಕೆ
ವನಜದಂದವ ತೋರೆ ನರಸಿಂಹವಿಠಲಾಖ್ಯ
ಮುನಿದು ಸದೆ ಬಡೆÉದಗದವೋ ಶ್ರೀ ಮುದವೊ 3