ಯತಿವರೇಣ್ಯರ ಮನುಜ ಸತತ ಭಜಿಸೆಲೊ ಪ
ಸತತ ವಿಮಲ ಚರಿತ ಸತ್ಯವತಿಯ ಸುತರ ಮನವರಿತ ಅ.ಪ
ಅಜಜನಕನ ಮಹಿಮೆ ಮರೆತು ಸುಜನರೆಲ್ಲ ಬಳಲುತಲಿರೆ
ಭುಜಗಶಯನನಾಜ್ಞೆಯಿಂದ ರಜತಪುರದೊಳವತರಿಸಿದ 1
ವಾಸುದೇವ ನಾಮದಿಂದ
ಶೈಶವವನು ಕಳೆದು ತುರಿಯ ಆಶ್ರಮವನು ಸ್ವೀಕರಿಸಿದ 2
ಜೀರ್ಣವಾದ ನಿಗಮಾರ್ಥಗಳ ನಿರ್ಣಯಿಸಿದ ಜ್ಞಾನಾನಂದ
ಪೂರ್ಣವ್ಯಾಸರೊಳ್ ಶ್ರವಣಮಾಡಿ ಪೂರ್ಣಪ್ರಜ್ಞರಾಗಿ ಮೆರೆದ3
ನರಿಯುತಕುತಿಗಳಿಂದ ಬೋಧಿಪ
ದುರುಳವಾದಗಳನು ಮುರಿದು ಹರಿಸರ್ವೋತ್ತಮನೆಂದರುಹಿದ4
ಶುಕ್ತಿರಜತ ಜ್ಞಾನದಂತೆ ವಿಶ್ವವೆಲ್ಲ ಮಿಥ್ಯಾವೆಂಬೊ
ಯುಕ್ತಿಗಳನೆ ಖಂಡಿಸಿ ಜಗತ್ ಸತ್ಯವೆಂದು ದೃಢದಿ ತೋರಿದ 5
ಬ್ರಹ್ಮನು ಗುಣಶೂನ್ಯನೆಂದು ದುರ್ಮತಗಳ ಹರಡುವವರ
ಹಮ್ಮು ಮುರಿದು ಜಗದಿ ಶಾಸ್ತ್ರ ಮರ್ಮಗಳನು ವಿವರಿಸಿದ 6
ದೂಷ್ಯವಾದ ಇಪ್ಪತ್ತೊಂದು ಭಾಷ್ಯಗಳನು ಮುರಿದು ಶುದ್ಧ
ಸಾರ ಪೇಳಿದ 7
ಶ್ರವಣ ಮನನ ಧ್ಯಾನಗಳಿಂ ಸಿರಿರಮಣನ ಜ್ಞಾನ ಪೊಂದಿ
ವರ ಕರುಣವ ಪಡೆಯುವುದೇ ನಿರತ ಸುಖಕೆ ಪಥವೆಂದರುಹಿದ 8
ಹನುಮ ಭೀಮ ಮಧ್ವ ರೂಪದಿ ರಾಮ ಕೃಷ್ಣ ವೇದವ್ಯಾಸರ
ನಿರತ ಸೇವೆ ಮಾಡಿ ಶ್ರೀಹರಿಯೊಲಿಮೆಯಿಂದ ಪ್ರಸನ್ನರಾದ 9