ಅನಂತಗಿರಿವಿಠಲ | ಪಾಲಿಸೋ ಇವಳಾ ಪ
ಗುಣಪೂರ್ಣ ಶ್ರೀಹರಿಯೆ | ಬೇಡುವೆನು ಧೊರೆಯೇ ಅ.ಪ.
ಸಿದ್ಧಿಸುತ ಶಿಷ್ಯತ್ವ | ಶುದ್ಧ ಸ್ವಪ್ನದೊಳೀಕೆಉದ್ಧಾರಕೆಂದೆನುತ | ಪ್ರಾರ್ಥಿಸುತ್ತಿಹಳೋ |ಮಧ್ವರಮಣನೆ ದೇವ | ಸಿದ್ದಾಂತ ಸಾರವನುಬುದ್ದಿಗೇ ನಿಲುಕಿಸೋ | ಭದ್ರಮೂರುತಿಯೆ 1
ಪ್ರಾಚೀನ ದುಷ್ಕರ್ಮ | ಮೋಚನೆಗೆ ಮನಮಾಡೋವಾಚಾಮ ಗೋಚರನೆ | ಖಚರಾರಿ ವಂದ್ಯನೀಚೊಚ್ಚ ತರತಮವ | ವಾಚಿಸುತ ಕರ್ಮಗಳಪಾಚಿಯನೆ ಕಳೆಸವ್ಯ | ಸಾಚಿ ಸಖದೇವಾ 2
ಹರಿಪಾದ ರತಿ ಕೊಟ್ಟು | ಹರಿ ಗುರು ಸೇವೆಗಳನಿರುತಗೈಯುವ ಮನವೆ | ಪರಿಪಾಲಿಸ್ಹರಿಯೇಅರವಿಂದನಾಭಹರಿ ಸರ್ವ ಸತ್ಸಾಧನವನೆರವೇರಿಸೆಂದೆನುತ | ಪ್ರಾರ್ಥಿಸುವೆ ಹರಿಯೇ 3
ಜ್ಞಾನಾನು ಸಂಧಾನ | ಮಾಣದಲೆ ಇತ್ತಿವಳಧ್ಯಾನ ಮಾರ್ಗಕೆ ತಂದು | ಮೌನಿ ಜನ ವಂದ್ಯಾಸಾನುರಾಗದಿ ನಿನ್ನ | ಹೃದಯ ಗಹ್ವರದಲ್ಲಿಕಾಣುವ ಸುಸಾಧನವ | ನೀನೇ ಮಾಡಿಸೊ ಹರಿಯೇ 4
ಸರ್ವಾಂತರಾತ್ಮಕನೆ | ದುರ್ವಿ ಭಾವ್ಯನೆ ದೇವಸರ್ವಕರ್ಮದಿ ನಿನ್ನ | ಸಂಸ್ಕøತಿಯ ನಿತ್ತುದರ್ವಿಜೀವಿಯ ಕಾಯೋ ಸರ್ವೇಶ ಶ್ರೀಹರಿಯೆಶರ್ವನೊಡೆಯನೆ ಗುರು | ಗೋವಿಂದ ವಿಠಲಾ 5