ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮರೆಯದೆ ಶ್ರೀಹರಿಯಮನದಲಿ ಸ್ಮರಿಸೊ ಗುರುಹಿರಿಯರ ಅನುಗ್ರಹವನು ಗಳಿಸೊ ಪ ಇಂದಿರೆ ರಮಣನ ಅನುದಿನ ಮಂದರ ಧರನಾ 1 ಬಗೆ ಬಗೆಯಲಿ ಶ್ರೀ ಭಗವಂತನ ಪಾದ ಯುಗವನು ನೆರೆನಂಬಿಯಿ-----ಎಂದೆಂದೂ 2 ಪರಿಪರಿ ನವವಿಧ ಭಕ್ತಿಯು ಸಾಧಿಸಿ ಪರ ಬ್ರಹ್ಮ ಪರಮಾನಂದನ 3 ಶರಧಿಶಯನನ ಶಾಂತ ನಿಧಾನನ ಅರವಿಂದ ನಯನನ ಹರಿಗೋವಿಂದನಾ 4 ದಿನಕರ ಕೋಟಿತೇಜ ವಿಲಾಸನ ಮಾನವ ರಕ್ಷಕನಾ 5 ಚಿತ್ತವು ಚಲಿಸದೆ ಚಿನ್ಮಯ ರೂಪನ ನಿತ್ಯಾನಂದನ ನಿಗಮಗೋಚರನಾ 6 ಭಾವಜನಯ್ಯನ ----- ಭಾವನಕೊಲಿದ ಜನ ಹೃದಯದಿ ಕುಣಿದಾಡುವ ನಾ7 ಜ್ಞಾನಾನಂದನ ಜ್ಞಾನಿಗಳರಸನ ಧೇನು ಪಾಲಕ ಜಗದೀಶನ ಮುಕುಂದನ 8 ಮಾಧವ ಮುನಿ ಗೋವಂದ್ಯನ ಶರಣರ ಪೊರೆವಾ ಬಿರುದಿರುವ ದೇವನಾ 9 ಇನಕುಲ ಭೂಷಣನ ವಿಶ್ವಲೋಕೇಶನ ದನುಜಾಂತಕ ಶ್ರೀ ದಾಮೋದರನಾ 10 ಪಾಂಡವ ಪಕ್ಷಕನ ಪರಮಾಣು ರೂಪ ಬ್ರಹ್ಮಾಂಡನಾಯಕ ಕೋದಂಡಧರನ ಇಂದೂ 11 ವಾರಿಧಿ ಬಂಧನ ವೈದೇಹಿ ತಂದನ ಮೀರಿದ ರಕ್ಕಸರ ಮದಿಸಿದವನಾ 12 ಪನ್ನಗ ಶಯನ `ಹೆನ್ನ ವಿಠ್ಠಲನ ' ಉನ್ನತ ಚರಿತನ ಇನ್ನು ಹರುಷದಲಿ 13
--------------
ಹೆನ್ನೆರಂಗದಾಸರು