ಜಯ ಜಯ ಶ್ರೀಹರಿಪ್ರಿಯೆ ಜಯಕ್ಷೀರಾಂಬುಧಿತನಯೇ
ಜಯ ಜಯ ಕೋಮಲಕಾಯೆ ಬಿಡದೆನ್ನನು ಕಾಯೆ ಪ
ಜಯ ರತ್ನಾಕರ ತನಯೆ ಕುರುಕರುಣಾಮಯಿ ಸದಯೆ
ಹರಿ ವಕ್ಷ ಸ್ಥಳ ನಿಲಯೆ ಸುರಮುಖಗೇಯೆ 1
ಜಯ ಜಯ ಪಾವನ ಚರಿತೆ ಜಯಚತುರಾನನ ಮಾತೆ
ಜಯ ಭಕುತಾಭಯ ದಾತೆ ನಮಿಸುವೆ ಭೂಜಾತೆ 2
ಜಯ ಜಯ ಕಾರ್ಪರ ಸದನೆ ಜಯನರಸಿಂಹನ ರಾಣಿ
ಸುರಸಂಶೇವಿತಚರಣೆ ಪಾಹಿಜಗಜ್ಜನನಿ 3