ಅಚ್ಯುತ ಅನಂತ ಗೋವಿಂದಾಯ
ಕಾಯ ಪೂಜಾ ಪ
ದ್ವಾದಶನಾಮದ ನಾರಾಯಣಾರ್ಚನೆ
ದ್ವಾದಶಬಾಧೆಯ ಕಳೆಯುವ ಕೀರ್ತನೆ ಅ.ಪ
ಕೇಶವಾಯ ನಮಃ ಓಂ ಕೇಶವಾಯ ನಮಃ
ಕ್ಲೇಶವು ಕರಗಿ ಈಶನು ಮನದಲಿ ನಿಲ್ಲುವನು 1
ಮಾಧವಾಯನಮಃ ಓಂ ಮಾಧವನೆನೆ
ಕ್ರೋಧವು ಅಳಿದು ಮೋದದಿ ಮನ ಮಿಡಿಯುವುದು 2
ವಿಷ್ಣುವೇನ್ನಮಃ ಓಂ ವಿಷ್ಣುವೆನ್ನಿರಿ ಸ-
ಕಾಯ ಕರ್ಮನಿಷ್ಠೆಯಲಿ 3
ಮಧುಸೂದನಾಯನಮಃ ಓಂ ಮಧುಸೂಧನಾಯ
ಮದಗಳೆಂದೂ ಮಥಿಸೋಡುವವು ತಿಳಿಯ 4
ತ್ರಿವಿಕ್ರಮಾಯನಮಃ ಓಂ ತ್ರಿವಿಕ್ರಮನೆನಲು
ಭವಿಯುಕಾಮಮೋಹತೊಲಗಿ ಕೋಮಲನಾಗುವನು 5
ಶ್ರೀಧರಾಯನಮಃ ಓಂ ಶ್ರೀಧರಾಯವೆನ್ನಿ
ಸೋದರತ್ವಮೂಡಿ ಮತ್ಸರ ಮರೆಯುವುದು 6
ಹೃಷಿಕೇಶಾಯನಮಃ ಓಂ ಹೃಷಿಕೇಶನೆನು
ಹುಸಿಯನಾಡದ ಲೋಭರಹಿತ ತನುವೀಯುವನು 7
ಪದ್ಮನಾಭಾಯನಮಃ ಓಂ ಪದ್ಮನಾಭನೆನಲು
ಛದ್ಮವೇಶನ ದ್ವಾದಶಾಪೇಕ್ಷೆಗಳೀಡಾಡುವವು 8
ದಾಮೋದರಾಯ ನಮ:ಓಂ ದಾಮೋದರೆಂದರೆ
ಆಮೋದದಿ ಮನ ಶ್ರೀಹರಿಪದಕೆರಗುವುದು9
ವಾಮನಾಯನಮ:ಓಂ ವಾಮನನೆಂದರೆ
ಅಮಮ! ನಿಲ್ಲುವ ಕಣ್ಮುಂದೆ ನೆಲಮುಗಿಲೊಂದಾಗಿ 10
ಆಳ್ವಾರಾಚಾರ್ಯರಾದಿ ಗುರುಗಳು ಪೇಳಿದ ಈ ಮಂತ್ರ
ಸೂತ್ರ 11
ಅನುದಿನ ಬಿಡದೆ ಮನದಲಂದರು ಸಾಕು
ಸನುಮತದಲಿ ಕಾಯ್ವ ನಮ್ಮ ಜಾಜಿಕೇಶವ 12