ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊಡಲಾಗದಿದ್ದರೆ ನುಡಿಯುವರೇನಣ್ಣ ಕಡೆಯಿಂದ ಬಾರೆಂದು ಜಡಿದಿಂದು ಪ. ದುಡುಕಿದೆವೆನ್ನುತ ಮಿಡುಕದಿರಣ್ಣಯ್ಯ ಕಡುಮುದದಿಂದಾವು ನಡೆದೇವು ಕೋಲೇಕೋಲೆ ಮುತ್ತಿನ ಕೋಲೆ ಅ.ಪ ಗುಣಯುತರೆನಿಸುವ ಹಿರಿಯ ವಂದಿಸ ಲೆನಂತಲೈ ತಂದೆವು ಮಣಿದೆವು ಹಣಗಾರರರೆಂದಲ್ಲಿ ಮಣಿಯಲು ಬರಲಿಲ್ಲ ಹಣದಾಸೆ ನಮಗಿಲ್ಲ ಕೇಳೀಸೊಲ್ಲ ||ಕೋಲೇ|| 1 ಅಣ್ಣಯ್ಯ ನಿಮಗೀ ಘನತೆಯು ಸಲ್ವುದು ಗಣ್ಯರಾದಿರಿ ನೀವು ಜಗದೊಳು ಪುಣ್ಯವಂತೆಯು ನಿಮ್ಮ ಪಡೆದಾಮಾತೆಯು ಧನ್ಯರಾದಿರಿ ನಿಮ್ಮೀಗುಣದಿಂದ ಕೋಲೆ 2 ದೋಷರಹಿತ ಶ್ರೀಶೇಷಗಿರೀಶನಾ ಕೇಶವನೊಲವೊಂದೆಮಗಿರಲಿ ಭಾಷೆಯ ಕೊಡುವೆವು ದೇಶಸೇವಕರಾವು ಲೇಸಾಗಲಿಳೆಗೆಂದು ಮನದಂದು ||ಕೋಲೆ||3
--------------
ನಂಜನಗೂಡು ತಿರುಮಲಾಂಬಾ
ಭಜಿಸಿ ಬದುಕೆಲೋ ಮಾನವ ಶ್ರೀಹರಿನಾಮ ತಾರಕಮಂತ್ರವ ಪ. ದುರಿತಕೋಟಿಗಳಂ ಪರಿಹರಿಸಿ ನಿಜಪದ ಸರಸೀರುಹದೊಳಗಿರಿಸಿ ಪೊರೆವನ 1 ದುರ್ಜನ ನಿಂದೆಗೆ ಲಜ್ಜಿತನಾಗದೆ ದುರ್ಜನ ದಮನನ ಧ್ಯಾನದೇ ನೀಂ 2 ಪೊಗಳಲು ಹಿಗ್ಗದೆ ತೆಗಳಲು ತಗ್ಗದೆ ಬಗೆಕುಂದದೆ ಸಮ್ಮೋದದೇ ನೀಂ 3 ಅಷ್ಟಮದಂಗಳ ಕಟ್ಟುತೆ ದೃಢದಿ ದೃಷ್ಟಿನಿಲ್ಲಿಸಿ ನಿಷ್ಠೆಯೋಳ್ ನೀಂ4 ದೋಷರಹಿತ ಶ್ರೀಶೇಷಗಿರೀಶನ ದಾಸರವಾಸನೆನ್ನಿಸಿ ಸಂತತಂ 5
--------------
ನಂಜನಗೂಡು ತಿರುಮಲಾಂಬಾ