ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ವಿನಾಯಕ ಚತುರ್ಥಿಯಂದು ಶರ್ವಿನ ಗಣಪತಿಯನ್ನು ನೆನೆದು) ಗಣಪತೀ ಕೊಡು ನಮಗೆ ಶ್ರೀಶನಲಿ ಮತಿ ಪ. ತನು ಮನದಲಿ ಶ್ರೀವಿನಿಯನ ಸ್ಮರಿಸಲು ವುಣಿಸುವ ಸುಖ ಸಂದಣಿಗಣ ನಿರವಧಿ 1 ವಿಘ್ನ ಸಮೂಹವ ವೋಡಿಸಿ ಭವಭಯ ಭಗ್ನಗೈಸಿ ನಿರ್ವಿಘ್ನದಿ ಕರುಣಿಸು 2 ಪರಶು ಪಾಶಾಂಕುಶಧರ ಕರುಣಾಕರ ಸಿರಿವರ ವೆಂಕಟವರ ವಲಿವಂದದಿ 3 ಶ್ರೀಹರಿ ಸಂಕೀರ್ತನ ; ನಾಮ ಮಹಾತ್ಮೆ
--------------
ತುಪಾಕಿ ವೆಂಕಟರಮಣಾಚಾರ್ಯ
ಕಾವವನೆ ಕರ್ಮಜಯ ಬಳಿಕಂ ಸಾವವನೆ ಉಣ್ಣುವರು ಜನರು ಭಾವವನೆ ಅರಿದಿರಿಸು ಜೀವರ ನಿನ್ನಂಘ್ರಿಯಲಿ ಪ ದಾಸವೃಂದವು ತೋಷದಿಂದಲೆ ಪೂಶರಯ್ಯನ ವಿಡಿದು ಘನ ಸಂ- ಸುಕೃತ ಫಲವಿಹುದೋ ಶ್ರೀಶನಲಿ ನಿಜದಾಸ ಭಕುತಿಯ ಮೀಸಲಿರಿಸೀ ಮನವ ಮೋಹದೆ ಆಶೆ ಗಳಿಸದೆ ಶ್ರೀಹರಿಯ ನಿಜವಾಸ ಕೈಯ್ಯುವರು 1 ಮೃಗಜಲಕೆ ನೀರೆಂದು ಭಾವಿಸಿ ಪೊಗಲೆಳಿಸುವೆರಳೆಗಳ ಪರಿಯಲಿ ಮೃಗನಯನೇರತಿ ಚೆಲ್ವಿಕೆಗೆ ಜಗವೆಳಸಿ ಬಳಲುವದು ಮಿಗಿಲಾಗಿದ ವಿಷಯಲನಲದಿ ಧಗಧಗಿಸಿ ಜನಗಳು ಪೋಪರಲ್ಲದೆ ಖಗಪತೀ ವಾಹನನ ನೆನೆಯರು ಜಗವ ಪಾವನನು 2 ನೀರಜಾಸನ ಪಿತನೆ ಅಕ್ಷಯ ಶ್ರೀ ರಮಾವಲ್ಲಭನೆ ತವ ಪರಿ ವಾರವಲ್ಲದೆ ಸತಿಸುತರು ಮೇಣ್ ದೇಹ ಬಾಂಧವರು ಸಾರಸುಮತಿಯನಿತ್ತೆಮಗೆ ಹರೆ ಸೇರಿಸೆಮ್ಮನು ನಿನ್ನ ಅಡಿಯಲಿ ಧೀರ ಶ್ರೀ ನರಸಿಂಹವಿಠ್ಠಲ ಪಾರಗಾಣಿಪುದು 3
--------------
ನರಸಿಂಹವಿಠಲರು
ವರದೇಶವಿಠಲರ ಹಾಡು ದಾಸರಾಯರ ದಿವ್ಯ ಚರಣ ಭಜಿಸಿ |ಶ್ರೀಶ ಪ್ರಾಣೇಶ ದಾಸಾರ್ಯ ಗುರುವರ್ಯ ಪ ಪಾದ ಭಜಿಪ ಸದ್ಭಕ್ತರ |ಏಸು ಜನ್ಮದ ಪಾಪರಾಶಿ ಪರಿಹರ ವೋ ||ಶ್ರೀಶನಲಿ ಸದ್ಭಕ್ತಿ ಲೇಸಾಗಿ ಪುಟ್ಟುವದು |ಲೇಶ ಸಂಶಯವಿಲ್ಲ ಆಲಸವು ಸಲ್ಲ 1 ಮರುತ ಮತ ತತ್ವಗಳ ಥೆರೆಗಳಿಂಸೂಸುತ |ಧರಣಿ ದ್ವಿಜರಿಗೆ ರಾಮನಾಮ ಮೃತ ||ನಿರುತ ಭಜಿಸಲು ಜ್ಞಾನ ವೈರಾಗ್ಯ ತರಮಣಿಯ |ಹರಿಭಕುತಿ ಧೇನುವಂ ನೀಡ್ವ ಪಾಲ್ಗಡಲೆನಿಪ 2 ಸುಜ್ಞಾನವೆಂಬಂಥ ಕಿರಣಗಳ ಪಸರಿಸುವ |ಅಜ್ಞಾನ ತಿಮಿರವನು ದೂರೋಡಿಪ |ಸೂಜ್ಞರೆಂಬುವ ತಾವರೆಗಳರಳಿಸುವಂಥ |ಅಜ್ಞ ಕುಮುದಗಳ ಬಾಡಿಸುವ ಭಾಸ್ಕರ ನೆನಿಪ 3 ನಮಿತ ಜನ ಭವತಾಪ ಕಳೆದು ಸದ್ಭಕ್ತಿಯಿಂ |ಬಮಿತ ಆಹ್ಲಾದವನು ಬೀರುವಂಥ ||ಶಮದಮಾದಿಗಳ ಚಂದ್ರಿಕೆಯಿಂದ ಶೋಭಿಸುವ |ವಿಮಲ ಹರಿಜನ ಚಕೋರಕೆ ಚಂದ್ರನೆಂದೆನಿಪ 4 ದಾಸ ಕುಲತಿಲಕ ಪ್ರಾಣೇಶರಾಯರ ಕವನ |ಶ್ರೀಶ ಕಥೆಗಳ ರಾಶಿ ಮೀಸಲಾಗಿರಲು |ಆಸು ಭಕ್ತರಿಗೆ ಸಂತೋಷಗೊಳಿಸಲು ಸರ್ವ |ದೇಶದಲಿ ಮೆರಿಸಿ ಸತ್‍ಕೀರ್ತಿಯನು ಪಡೆದಂಥ 5 ಈ ಗುರುಗಳ ಪಾದಕ್ಕೆರಗಿದ್ದ ಶಿರಧನ್ಯ |ಈ ಗುರುಗಳೀಕ್ಷಿಸಿದ ನೇತ್ರ ಧನ್ಯ ||ಈ ಗುರುಗಳ ವಾಣಿ ಕೇಳಿದ ಕಿವಿಧನ್ಯ |ಈ ಗುರುಗಳನು ಮನದಿ ನೆನೆವ ನರಧನ್ಯ 6 ರಾಗ ದ್ವೇಷಾದಿಗಳ ಗೆದ್ದು ಸದ್ಭಕ್ತಿಯಂ |ಶ್ರೀಗುರು ಪ್ರಾಣೇಶ ಭಜಕರೆನಿಪ |ನಾಗ ಪರ್ಯಂಕ ವರದೇಶ ವಿಠಲನ ಪ್ರಿಯಯೋಗಿ ವರದೇಂದ್ರ ಮುನಿಗಳ ಪಾದಭೃಂಗ 7
--------------
ಶ್ರೀಶಪ್ರಾಣೇಶವಿಠಲರು
ಭಾವಿಸಮೀರಶ್ರೀ ವಾದಿರಾಜ ಸ್ವಾಮಿ ಸ್ತೋತ್ರ108ಪಾಲಿಸೋ ಗುರುರಾಜ ಪಾಲಿಸೋಪಾಲಿಸೋಗುರುವಾದಿರಾಜ || ಪೊಗಳ-ಲಳವೇ ನಿನ್‍ಮಹಿಮೆ ಮಹೋಜ || ಅಹಹಂಸಹಯಾಸ್ಯವರಾಹಕೇಶವ ಪ್ರಿಯಹಂಸಾರೂಡ್ಯನೆ ನಮೋ ಶರಣು ಮಾಂಪಾಹಿ ಪವಾಗ್ವಿಭವನು ಗುರುವರ್ಯ || ಮಹಾಯೋಗಿವರನು ಯತಿವರ್ಯ || ಶಿರಿವಾಗೀಶಕರಪದ್ಮದುದಯ || ನಾಗಿಜಗತ್ತಲ್ಲಿ ಮಾಡಿ ದಿಗ್ವಿಜಯ || ಅಹಜಗವನಳೆದಮೂರ್ತಿತರಿಸಿ ನಿಲ್ಲಿರಿಸಿಪೊಗಳೆ ಮುಕ್ಕಣ್ಣಾದಿ ಸುರರೇಬಲ್ಲರು 1ಜೀವೋತ್ತಮವಿದ್ಯುತ್ಪತಿಯ ||ನಿತ್ಯಅವೇಶಯುತ ವ್ಯಾಸರಾಯ || ಮುನಿಸರ್ವಾಭೌಮರ ಸೇರಿ ದಿವ್ಯ || ವಾದಮಾಧ್ವ ವೈದಿಕ ಬ್ರಹ್ಮವಿದ್ಯ || ಅಹಸುವಿಚಾರ ಪ್ರವಚನರತನಾಗಿ ಭುವಿತತ್ವವಶ್ರುತಿಯುಕ್ತಿ ಯುಕ್ತದಿ ಬೋಧಿಸಿದ2ಕೂರ್ಮತೀರ್ಥವು ಧವಳಗಂಗೆ || ಅದರನಿರ್ಮಲ ಲಲಿತತರಂಗ|| ಲಿಪ್ತಚರ್ಮ ತೊಳೆದು ಪಾಪಭಂಗ || ಮಾಡಿಧರ್ಮ ಆಚರಣೆ ನಿಸ್ಸಂಗ || ಅಹ ||ಬುದ್ದಿಯ ಒದಗಿಸಿಗುರುಸೇವಾರತಿಯಿತ್ತುಮಧ್ವಾಂತರ್ಗತ ಶ್ರೀಶನಲಿ ಭಕ್ತಿ ತೋರ್ಪುದು 3ಧವಳಗಂಗೆಗೆ ಪೂರ್ವಾದೇಶ || ದಲ್ಲಿದೇವದೇವೋತ್ತಮ ವ್ಯಾಸ || ದೇವಅವಲೋಕಿಸುತ ಇಹ ಪಂಚ || ವೃಂದಾವನಮಧ್ಯದಲ್ಲಿ ಪ್ರವೇಶ || ಅಹ ||ಮಾಡಿದಿರಿ ತ್ರಿವಿಕ್ರಮನನಂತ ಗುಣಕ್ರಿಯದೃಢಧ್ಯಾನೋಪಾಸನ ಮಾಳ್ಪಮಹಂತ4ಪೂರ್ಣೇಂದು ಪೋಲುವ ಮುಖವ ||ಕಮಲಕರ್ಣಿಕೆವರ್ಣದಿ ಪೊಳೆವ ||ಗಾತ್ರಪೂರ್ಣಲಕ್ಷಣ ಸಂಯುತವ || ದಿವ್ಯಫಣಿಯಲ್ಲಿ ಪುಂಡ್ರವು ಊಧ್ರ್ವ || ಅಹಪೀತ ಸುವರ್ಣ ಸುರೇಶ್ಮಿವಸನಉಟ್ಟಪದ್ಮಜ ಪಾದಾರ್ಹನೆ ನಿನ್ನ ಕಂಡೆ ನಾ ಶರಣು 5ಗುರುವಾದಿರಾಜ ನಿನ್ ದೂತ || ವೀರಭದ್ರನೋಪಮ ಬಲವಂತ || ಬಾಧೆವಿದ್ರಾವ ಕ್ಷಣದಿ ಮಾಳ್ಪಂತ || ಅತಿಶೂರ ಅದ್ಬುತ ಶಕ್ತಿಮಂತ || ಅಹ ||ನಾರಾಯಣಾಹ್ವಯ ಭೂತರಾಜನು ಎನ್ನಸಂರಕ್ಷಿಸುವ ಗುರುರಾಜ ನಿನ್ ದಯದಿ 6ಒಡೆಯ ಶ್ರೀಪತಿಹಯವದನ || ತಾನೇಕಡಲೆ ಮಡ್ಡಿಯನ್ನು ನಿನ್ನ || ಕೈಯಿಂದಉಂಡದ್ದು ಚತುರ್ದೇಶಭುವನ|| ಖ್ಯಾತಿಈಡಿಲ್ಲ ಸ್ಮರಿಸೆಪಾವನ್ನ|| ಅಹ ||ಕುಸುಮಜಪಿತ ಉಕ್ತಅಭಯಪ್ರಸನ್ನ ಶ್ರೀನಿವಾಸನ್ನೊಲಿಸೋ ಎನಗೆ 7 ಪ
--------------
ಪ್ರಸನ್ನ ಶ್ರೀನಿವಾಸದಾಸರು