ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂದಾನ ಬಾಧೆಗೆ ಮನಿ ಮಂದಿ ನಾವು ಸಹಿತ ಬೆಂದು ಬೇಸರ ಗೊಂಡು ಬಳಲು ತೇವು ಹರಿ ತಂದಿ ಬೇಗದಿ ಬಂದು ದಯಮಾಡಿ ಸಲಹೋ ಗೋವಿಂದಾ ಕೃಪಾಳು ಶ್ರೀ ಕರುಣಾಂಬುಧಿಯೆ ಪ ಕೃಷ್ಣಾ ರೌದ್ರಾಂತಕನ ಕ್ರೂರದೃಷ್ಟಿ ಮುಖ ಹಲಾ ತ್ಕøಷ್ಠವಾಗಿ ಎನ್ನ ಕಾಡುತಿರಲು ನಿಷ್ಠೆ ನೇಮಗಳೆಲ್ಲ ಜರಿದು ಮತಿ ಭೃಷ್ಟನಾಗಿ ಕಷ್ಟಕ್ಕೆ ಒಳಗಾದೆ ಕಡೆಹಾಯಿಸೊ ಧೊರಿಯೆ ಇಷ್ಟದಾಯಕ ನಿನ್ನಲ್ಲಿನ ಮಾಯವೆ ಆಡುದು (ಅಹುದು) ಕೃಷ್ಣಮೂರುತಿ ಬೇಗ ಕೈಹಿಡಿ ಇನ್ನಾ ಸೃಷ್ಟಿಗೊಡೆಯ ಶ್ರೀನಿವಾಸಕೇಶವ ಎನ್ನ ಕಷ್ಟವು ಪರಿಹರಿಸಿ ಕಾಯೋ ಸಂಪೂರ್ಣ 1 ಸೂರ್ಯಾನ ಪುತ್ರನ ಕಾರ್ಯಾವು ಎಮ್ಮ ಮೇಲೆ ಭಾರಿ ಕಾಣುತಲಿದೆ ಪರಮಾತ್ಮನೆ ------- ಘಟಗಳಿಗುಪದ್ರಕಾರನಾಗಿ ವ್ಯಾಧಿ ಖಂಡಿಸೋ ವೇಳೆ ಆರು ಈ ಗ್ರಹಕರ್ತರಾಗಿರಲು ದೇವರಿನ್ನು ಧಾರುಣಿಯೊಳು ಹರಿ ದನುಜಾಂತಕಾ ವಾರಿಜಾನಾಭಾ ಶ್ರೀ ವೈದೇಹಿ ಪತಿರಾಮಾ ಸಾರನೆ ಗಡ ಬಂದು ಸಲಹೋ ತಂದೆ 2 ಗರ್ಭಾದಿ ಮುದನಿಂ ಸುಖಭ್ರೂಣ ಭಯವೆಂಬ ದೆಬ್ಬಿಗೆ ತಾಳದೆ ತಲ್ಲಣಿಸುವೆ ಅರ್ಭಕ ನಾನೊಂದು ಅರಿತು ಅರಿಯೆ ದೇವ ಸಭ್ಯಾ ನೀ ನಂದ ಸರ್ವೋತ್ತುಮಾ ನಿರ್ಭಯನನು ಮಾಡಿ ನೀನೆ ರಕ್ಷಿಸದಿರೆ ದಾರು ಮನಸು----ಳಗೆ ದರ್ಭಶಯನ ರಾಮನ-----'ಹೊನ್ನ ವಿಠ್ಠಲ’ ಸಾಕಾರ ನೀ ಎನ್ನ ತ್ವರದಿ ಪೊರೆಯೊ 3
--------------
ಹೆನ್ನೆರಂಗದಾಸರು
ಶ್ರೀ ಪಂಚಾಕ್ಷರ ಶಿವ75ಮಂಗಳಾತ್ಮಕ ಶಿವ ಗಂಗಾಧರ ನಮೋ ಪಾಲಯಮಾಂ ಕಪುರಂದರಗುರುವರಂ ಧ್ಯೇಯೋರುದ್ರಂಶರಣಮುಮೇಶ ಜನಾರ್ಧನ ಪ್ರಿಯತರಂವಿದ್ಯುತ್ ಶುಭ್ರಂ ಕೃಷ್ಣಂ ರತ್ನಂ ಶ್ಯಾಮಂ ಏನಂಪಂಚ ಮುಖೋಹಿ 2ಜಟಾಮಕುಟ ಫಟಕಾಮಲಕಾಂತಿಮಾನ್ಉಡುಪಕಲಾಧರ ಪಾಲಯಮಾಂ 3ಉರಗಭೂಷಣತ್ವಂ ಗಿರುಜಾಯುಕ್ತಂಹರ ಮಮ ಪಾಪಂ ಕೃಪಯಾ ಸತತಂ 4ಕುಸುಮಸಂಭವಪಿತ ಪ್ರಸನ್ನ ಶ್ರೀನಿವಾಸಕೇಶವ ಶಿವಪ್ರಿಯ ಶಿವ ತೇ ನಮೋ ನಮೋ 5
--------------
ಪ್ರಸನ್ನ ಶ್ರೀನಿವಾಸದಾಸರು