ಅತ್ತಿಗೇ ನಿನ್ನ ಹಾಡಿಗೆ ನಾ ಪ್ರತ್ಯುತ್ತರ ಕೊಡುತಿಹೆನೆ ಪ
ನೀವ್ ಕತ್ತೆ ಸಮಾನರು ಅ.ಪ
ಎಣ್ಣೆ ಸಾಸುವೆ ಅರದಿಟ್ಟಿಹ ಚಿತ್ರಾನ್ನದ ರಾಶಿಗಳು
ಪಲ್ಯ ಹಲಸಿನ ಕಾಯ್ ಪಲ್ಯ
ಸಣ್ಣ ಗೆಣಸು ಗೆಡ್ಡೆಯ ಪಲ್ಯಗಳ ಸಾಸುವೆ ಹುಳಿ ಪಳಿದ್ಯಾ
ಮಾಡಿಸಿ ಹಾಕುವೆನೂ 1
ನೇಮವಾದ ನೆಲಗಡಲೆ ಕಾಯೆಣ್ಣೆಯ ಕರಿಗಡುಬುಗಳೂ
ತರಿಸಿ ಹಾಕುವೆ 2
ಫಲವು ಮುಲ್ಲಂಗೀ
ಕಡು ಹರುಷದಿ ಕೊಂಬೀ
ಇಂಥಾ ಶತವರಟಾದ ಬೀಗರ ನಾನೆಲ್ಲೂ ಕಾಣಲಿಲ್ಲಾ
ಮಾಡದವರಿಗೆ ಇವು ಬಲು ಪ್ರಿಯ್ಯಾ 3