ಶಶಿಮುಖಿ ಜಾನಕಿ ರಮಣ
ವಸುಧೆಯೊಳಗೆ ನಿಮ್ಮ ಭಜನೆಯ ಮಾಡುವರ
ಶಿಶುವುಯೆಂದು ತಿಳಿದು ಶೀಘ್ರದಿ ರಕ್ಷಿಸೊ ಪ
ಪಶುಪತಿ ರಕ್ಷಕ ಪಾವನ ಮೂರ್ತಿ
ಪಶುಪಾಲಕನಾದ ಪರಮಾತ್ಮ
ಕುಸುಮಜನನು ಅತಿಕರುಣದಿ ನೀನು
ಕುಶಲದಿ ಪಡೆದ ಗುಣವಂತಾ
ಹಸ ಮೀರಿನಡೆವಂತ ಅನೇಕ ದುಷ್ಟ
ಅಸುರರ ಛೇದಿಸಿದ ಬಲವಂತಾ
ದಶದಿಕ್ಕಿನೊಳಗೆ ದಾರನು ಕಾಣೆನೊ
ದಶವಂತನು ನಿನಗಾರು ಸರಿಹಾರೊ 1
ಪಿತೃವಾಕ್ಯ ಪರಿಪಾಲನೆ ಮಾಡಿದ
ಪುತ್ರನು ಅನಿಸಿದ ಪುಣ್ಯನಿಧಿ
ಪತಿ ಧರ್ಮವ ಸರ್ವದಾ ನಡೆಸುವ
ಸತ್ಯಮೂರ್ತಿ ಸೌಭಾಗ್ಯನಿಧಿ
ಶತದ್ರೋಹಿಯಾಗಿ ಸೀತೆಯ ಒಯ್ದನ
ಶತಮುಖನಯ್ಯನ ಸಂಹರಿಸಿದಿ
ಸತತ ವಿಭೀಷಣ ಭಕ್ತಿಯಿಟ್ಟ
ಸಲುವಾಗಿ ಲಂಕೆಯ ಧಾರೆಯನೆರದೀ 2
ಯಾದವ ಕುಲಪತಿ ಯಶೋದೆನಂದನ
ವ್ಯಾಧನ ರಕ್ಷಿಸಿದಿ ವಿಶ್ವೇಶ
ಬಾಧಕ್ಕೆ ಒಳಗಾಗಿ ಕರಿಕೂಗಲು ಮಕರಿ
ಬಾಧೆಯ ತಪ್ಪಿಸಿದ ಪರಮೇಶಾ
ಸಾಧು ಸಜ್ಜನ ಸರ್ವರ ಸಲಹುವ
ಸಾಧು ಗುಣಾನಂದ ಸರ್ವೇಶಾ
ಮಾಧವ `ಸಿರಿಹೆನ್ನೆ ವಿಠಲ' ನಿನ್ನಯ
ಮೋದವ ತೋರೋ ಜಗದೀಶಾ 3