ಒಟ್ಟು 8 ಕಡೆಗಳಲ್ಲಿ , 5 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂತು ಜನಕ ಶ್ರೀಕಾಂತನ ಸ್ತುತಿಸಲ ನಂತನಿಗಸದಳವೈ ಪ ದಂತಿಚರ್ಮಧರಾಧ್ಯರು ಈತನ ಅಂತುಗಾಣದಲೆ ಚಿಂತಿಪರೈ ಅ.ಪ ಮಾವನ ಮಥಿನಿದ ಮಾವನಿಗೊಲಿದ ಮಹರಾಯನವನು | ಮಾವನ ಮಗನ ಮೋಹದ ಮಗಳಿಗೆ ಮಾವನೆನಿಸಿದವನು ಮಾವನ ತಮ್ಮಗೆ ತನ್ನಯ ಭಕುತನ ಮಹಿಮೆ ತೋರಿಸಿದನು || ಪರಿ ಪರಿ ಪೊರೆದನು ಉ ಮಾವಲ್ಲಭನುತ ನಗಧರನಿವನು 1 ಸತಿಯ ಪಿತನ ಪೆತ್ತನ ಮಾತೆಗೆ ಪತಿಯಾದವ ನಿವನು | ಸತಿಯಳ ಪಿಡಿದೊಯ್ದಾತನ ಭ್ರಾತನ ಸುತನ ಪಾಲಿಸಿದನು ಸತಿಯ ಪಡೆದವಳ ಸುತನ ಮರ್ದಿಸಿ ಸತಿಯರ ಕೂಡಿದನು | ಸತಿಗೆ ಕೊಟ್ಟ ವರ ಹಿತದಿ ನೀಡಲು ಸತಿಯನ್ನಗಲಿದ ಶತಕ್ರತು ವಂದ್ಯನು 2 ಕಾಲುರಹಿತ ಕೈಕಾಲು ಮುದುರುವ ಕೋಲರೂಪಿ ಇವನು ಕಾಲನಂತೆ ಘನ ಕೋಪಿಯಾಗಿ ನದಿ ಕಾಲಲಿ ಪಡೆದವನು ಕಾಲಕ್ಷತ್ರಿಯರ ತಾ ಬಾಲೆಯ ಸಲಹಿದನು ಕಾಳಿವೈರಿ ಶ್ರೀ ಶಾಮಸುಂದರ ನಖ ಸಖ ಕಲಿ ಭಂಜನನು 3
--------------
ಶಾಮಸುಂದರ ವಿಠಲ
ಗುರವೆ ಪೊರೆಯೊ ಯನ್ನ | ಆವಗುಣಮರೆದು ರಾಘವೇಂದ್ರಾ ಪ ನೆರೆನಂಬಿದರ ಸುರತರುವೇ ಹೇಪುರಟ ಕಶಿಪುಜ ಗರುಡವಹನ ಪ್ರೀಯ ಅ.ಪ. ಸುಜನ ವತ್ಸಲ | ಗೆಲುವ ಕಾಣೆನೊ ಕರ್ಮನಿರ್ವಹದಿಜಲಜನಾಭನ ಚರಣ ಪುಷ್ಕರ | ಸುಲಭ ಷಟ್ಟದ ಸೆನಿಸೊ ಗುರುವರ 1 ಯತಿಕುಲ ಸಾರ್ವಭೌಮ | ನಿಮ್ಮಯ ನಾಮಾಮೃತವನುಣಿಸಲು ನಿಸ್ಸೀಮಾ ||ಪತಿತ ಪಾವನ ಹರಿಯ | ಸತತದಿ ನುತಿಸುವಮತಿಯಿತ್ತು ಪಾಲಿಸೊ | ಶತಕ್ರತು ಪಿತ ಪಿತನೆ ||ರತಿಪತಿಯ ಪತನೆನಿಸಿದಾತನ | ನತಿಸಿ ನುತಿಸುತ ಕರೆಯುತಲಿ ಗತಿ ಪ್ರದಾಯಕ ಹರಿಯ ವ್ಯಾಪ್ತಿಯ | ಪಿತಗೆ ತೋರಿದ ಅತುಳ ಮಹಿಮಾ 2 ಮಂತ್ರ ನಿಕೇತನನೆ ಯತಿಕುಲರನ್ನ ಮಂತ್ರಾರ್ಥ ರಚಿಸಿದನೇ ||ಗ್ರಂಥೀಯ ಹರಿಸೂವ | ತಂತ್ರವ ತೋರೋ ಅತಂತ್ರವಾಗಿದೆಯನ್ನ | ಮಂತ್ರ ಸಾಧನವೂ || ಪ್ರಾಂತಗಾಣದೆ ಚಿಂತಿಸುವೆ ಸರ್ವಸ್ವ | ತಂತ್ರ ಗುರುಗೋವಿಂದ ವಿಠಲನ ಅಂತರಂಗದಿ ತೋರಿ ಸಲಹೋ | ಕ್ರಾಂತನಾಗುವೆ ನಿಮ್ಮ ಪದಕೇ3
--------------
ಗುರುಗೋವಿಂದವಿಠಲರು
ಬಾರೆ ಭಾಗ್ಯದ ನಿಧಿಯೆ | ಬಾರೆ ಜಾನಕಿಯೆ ಪ ಚಕೋರ ಸುಖಾಗ್ರಣೆ ಸೇರಿದೆ ತವಪದ ವಾರಿಜ ನಿಲಯೆ ಅ.ಪ ಕೃತಿ ಶಾಂತಿ ಜಯ ಮಾಯೆ ಕ್ಷಿತಿಜಕೋಮಲ ಕಾಯೆ ಶಿತಕಳೆವರ ವಿಧಿಶತಕ್ರತು ಸುಮನಸ ತತಿನುತೆ ಪಾವನೆ ರತಿಪತಿ ತಾಯೆ 1 ಮಂಗಳೆ ಮುದ ಭರಿತೆ ಇಂಗಡಲಜೆ ಕೃಪಾಂಗಿಯೆ ಎನ್ನಂತ ಮಾನವ ಸಿಂಗನ ತೋರೆ 2 ಶಾಮಸುಂದರ ರಾಣಿ ವಾಮಾಕ್ಷಿ ಕಾಲ್ಯಾಣಿ ಕಾಮಿನಿ ಮಣಿ ಸತ್ಯಭಾಮೆ ರುಕ್ಮಿಣಿ ಗೋಮಿನಿ ರಮೆ ಶುಭನಾಮ ಲಲಾಮೆ 3
--------------
ಶಾಮಸುಂದರ ವಿಠಲ
ಭಾಗವತ 342 ಆಗಮದಸಾರ ಶಾಸ್ತ್ರವಿಚಾರ ಪೌರಾಣ ಯೋಗತತ್ವಗಳ ಶೃಂಗಾರವೆನಿಸುತಿಹ ಶ್ರೀ ಭಾಗವತಮಂ ಪೇಳ್ವೆಸಂಕ್ಷೇಪದಿಂದ ಹನ್ನೆರಡು ಪದ್ಯಂಗಳಾಗಿ ಗುರುಸುತನ ಬಾಣದುಪಹತಿಗೆ ಮೊರೆಯಿಡುವಉ ತ್ತರೆಯ ಗರ್ಭವ ಶೌರಿರಕ್ಷಿಸಲ್ ಬಳಿಕಧರೆ ರಾಜ್ಯವಾಳುತಿರೆವಿಷ್ಣುರಾತಂ ವರಶಮೀಕಾತ್ಮಜನ ಶಾಪಬರೆತಾಕೇಳಿ ಪರಮವೈರಾಗ್ಯದಿ ಕುಶಾಸ್ತರಣದೊಳಿರಲ್ ಪ್ರಥಮಸ್ಕಂಧದೋಳ್ ತಿಳಿವುದು 1 ಸಾರವಾಗಿಹ ಭಕ್ತಿಯೋಗಮಂ ಪೂರ್ವದೋಳ್ ನಾರದಗೆ ವಿಧಿವೇಳ್ದ ಸೃಷ್ಟಿಯಕ್ರಮಂ ಪ್ರಳಯ ತನ್ನಪುರಮಂ ತೋರಿಸಿ ಚಾರುಭಾಗವತ ತತ್ವೋಪದೇಶದಿ ಸೃಷ್ಟಿ ಗಾರಂಭ ಮಾಡಿಸಿದನೆಂದು ಶುಕಮುನಿವರಂ ತಿಳಿವುದು 2 ವಿದುರ ಮೈತ್ರೇಯ ಸಂವಾದಮಂ ಸೃಷ್ಟಿಯ ಭ್ಯುದಯವಂ ಸ್ವಾಯಂಭುವಿನಜ ನನವಹರೂ ಪದ ಹರಿಯಚರಿತ ಸನಕಾದಿಗಳ್ ಜಯವಿಜಯರಿಗೆ ಕೊಟ್ಟ ಶಾಪತೆರನು ಉದಿಸಿದಂಹರಿಕರ್ದಮಂಗೆ ಕಪಿಲಾಖ್ಯದಿಂ ವಿದಿತವಾಗಲ್ ತಾಯಿಗರುಹಿದಂಸಾಖ್ಯಯೋ ತೃತೀಯಸ್ಕಂಧದೋಳ್ ತಿಳಿವದು 3 ಶಿವನ ವೈರದಿನಕ್ಷಯಾಗವಂ ಮಾಳ್ಪುದಂ ತವಕದಿಂ ಕೆಡಿಸಿ ಶಂಕರನು ಕರುಣಿಸುವದಂ ಧೃವಚರಿತಮಂಗವೇನರಚರಿತ್ರೆಗಳ್ ಪೃಥುಚಕ್ರವರ್ತಿ ಜನನ ಅವನಿಗೋರೂಪಿಯಾಗುತ ಸಕಲವಸ್ತುಸಾ ರವಕೊಡುವದುಂ ಪ್ರಚÉೀತಸರುಪಾಖ್ಯಾನಮಂ ತವೆಪುರಂಜನನುಪಾಖ್ಯಾನಮಂ ಯಿದುಚತುರ್ಥ ಸ್ಕಂಧದೋಳ್ ತಿಳಿವದು 4 ವರಪ್ರಿಯ ವ್ರತಚರಿತೆಯಾಗ್ನೀಧ್ರಚರಿತೆಯುಂ ಹರಿಯ ಋಷಭಾವತಾರದ ಮಹಾಮಹಿಮೆಯಂ ಭೂಗೋಳವಿಸ್ತಾರವು ಎರಡನೆ ಖಗೋಳದೋಳ್ ವಾಯ್ವಾದಿಮಂಡಲವಿ ವರಗಳುಂ ನರಕಾದಿ ವರ್ಣನೆಯ ಸಂಖ್ಯೆಯುಂ ಯಿದುಪಂಚಮಸ್ಕಂಧದೋಳ್ ತಿಳಿವದು 5 ಯರ ಜನನಮಂ ವಿಶ್ವರೂಪಾಖ್ಯಭೂಸುರಂ ವೃತ್ರಾಸುರನ ಕೊಲ್ವುದುಂ ಭರದಿ ಬೆನ್ಹತ್ತಿಬಹ ಬ್ರಹ್ಮಹತ್ಯವ ಸುರಪ ಧರಣಿಜಲ ವೃಕ್ಷಸ್ತ್ರೀಯರಿಗೆ ಭಾಗಿಸಿದುದಂ ತಿಳಿವದೂ 6 ವಿಧಿಯವರದಿ ಹಿರಣ್ಯಕಶ್ಯಪನು ಗರ್ವದಿವಿ ಬುಧರಂ ಜಯಿಸುವದುಂ ತರಳ ಪ್ರಹ್ಲಾದನ ನರಸಿಂಹನಾಗಿ ಹರಿಯು ಮದಮುಖನ ಸೀಳ್ವುದಂಪ್ರಹ್ಲಾದನೃಪನಜಗ ರದಮುಖದಿ ವರ್ಣಾಶ್ರಮದ ಧರ್ಮಕೇಳ್ವುದಂ ತಿಳಿವದು 7 ಮನುಗಳ ಚರಿತ್ರೆಗಳ್ ಗಜರಾಜ ಮೋಕ್ಷವಂ ದನುಜ ದಿವಿಜರು ಶರಧಿಯಂಮಥಿಸೆವಿಷವರು ಹರಿಸುರರಿಗೀಯ್ಯೆ ಅನಿಮಿಷರ ಗೆದ್ದು ಬಲಿ ಶತಕ್ರತುವಮಾಳ್ಪುದಂ ವನಜಾಕ್ಷ ವಟುವೇಷದಿಂ ದವಗೆಲ್ವುದಂ ತಿಳಿವದು 8 ಇನವಂಶ ರಾಜರಚರಿತ್ರೆಯೋಳಂಬರೀ ಷನ ಮಹಿಮೆ ಯಿಕ್ಷಾ ್ವಕುರಾಜನಚರಿತ್ರ ರಾ ಚಂದ್ರವಂಶಾನುಚರಿತಂ ವನಿತೆಯುಂ ಪುರುಷನಾಗಿದ್ದಿಳನ ಚರಿತಶು ಕ್ರನ ಮಗಳ ಶರ್ಮಿಷ್ಠೆಯರಚರಿತೆಯದುವೂರು ನವಮಸ್ಕಂಧದೋಳ್ ತಿಳಿವದು 9 ಹರಿ ದೇವಕೀ ಪುತ್ರನಾಗಿ ಗೋಕುಲದಿ ಪರಿ ಪರಿಲೀಲೆಗಳತೋರಿ ದುಷ್ಟರಂಸದೆದುತಾಂ ಪಿತೃಮಾತೃಗಳಸೆರೆಯಬಿಡಿಸಿ ವರವುಗ್ರಸೇನಂಗೆ ಪಟ್ಟಮಂಗಟ್ಟಿಸಾ ಗರದಿ ಪುರವಂರಚಿಸಿ ಬಲುತರುಣಿಯರ ಕೂಡಿ ತಿಳಿವದು 10 ನೆಸಗಿದಂ ಯದುಕುಲಕೆ ಹರಿಯಸಂಕಲ್ಪದಿಂ ಪರಮಾತ್ಮತತ್ವಬೋಧೆಯನರುಪಿದಂ ಮುಸಲದಿಂ ಯಾದವರಕ್ಷಯವೈದಲನ್ನೆಗಂ ಬಿಸಜನಾಭಂ ರಾಮನೊಡನೆ ತಾತೆರಳಿದಂ ಕರೆದೊಯಿದನೇಕಾದಶಸ್ಕಂಧದೊಳ್ 11 ಪರೀಕ್ಷಿತ ಮಹಿಪಾಲತಾಂ ಕೇಳಿದಂ ಶುಕನಿಂದಸಕಲಮುಂ ಕಲಿಕಾಲ ಸೂತಶೌನಕಾದಿಗಳಿಗಿದನು ಪೇಳಿದಂ ಬಾದರಾಯಣನ ಕೃಪೆಯಿಂದಲಿದ್ವಿ ಜಾಳಿ ಹರುಷದ ಕಡಲೊಳೀಜಾಡಿದುದುರಮಾ ಲೋಲನ ಮಹಾಲೀಲೆಯವತಾರಮದ್ಭುತಂ- -ದ್ವಾದಶಸ್ಕಂಧವಿದುವೆ 12 ಇಂತೀ ಪರಿಭಾಗವತ ಶಾಸ್ತ್ರಮಂ ಸಂತರಡಿಗಳಿಗೆರಗಿ ಪೇಳ್ದೆ ಸಂಕ್ಷೇಪದಿಂ ಕಂತುಪಿತಗÀುರುರಾಮವಿಠಲತಾಂಹೃದಯದೋಳ್- -ನಿಂತುನುಡಿಸಿದತರದೊಳು ಸ್ವಾಂತನಿರ್ಮಲರಾಗಿ ಪಠಿಸುವರಿಗನುದಿನಂ ಚಿಂತಿತಾರ್ಥಂಗಳಿಹಪರಸೌಖ್ಯವಿತ್ತುಶ್ರೀ ಕಾಂತ ಗುರುರಾಮವಿಠಲ ಪೊರೆವಜಯ- -ಜಯಮನಂತಮಹಿಮಂಗೆನಿರತಂ 13
--------------
ಗುರುರಾಮವಿಠಲ
ರಂಗವಲಿದರಾಯಾ ನೀ ಸತ್ಸಂಗ ಪಾಲಿಸಯ್ಯಾ ಪ ಮಂಗಳಪ್ರದ ಪ್ರಥಮಾಂಗಾ ಪ್ರಥಮಾಂಗ ಮತಾಂಬುಧಿ ಕವಿ ಜಂಗುಳಿಗೆ ಅ.ಪ ಬುಧಜನನುತ ಮನುಜಾ ಪಂಚವದಾನಾರ್ಯರ ತನುಜಾ ಪಾದ ಪದುಮವ ಭಜಿಸದೆ ಅಧಮನಾದೆ ನಾ ಸದಮಲ ಕಾಯಾ1 ಕ್ಷಿತಿಯೊಳು ಪೂರ್ವದಿ ಪತಿತರ ಸಲಹಲು ಶತಕ್ರತುರಾಯರ ಸುತನೆನಿಸಿದ ಗುರು 2 ವೃಂದಾರಕ ಸ್ತೋಮಾ ವಂದಿತ ನಂದನಂದನ ಶಾಮ ಸ್ತಂಬ ಸು ಮಂದಿರದೊಳು ಘನ ಸಿಂದು ಮೆರೆವ ಗುರು 3
--------------
ಶಾಮಸುಂದರ ವಿಠಲ
ವಿಠ್ಠಲ ವಿಮಲಶೀಲ ಬಾಲಗೋಪಾಲ ದಿಟ್ಟ ಮೂರುತಿ ಶ್ರೀಲೋಲ ಪ ಗೊಟ್ಟು ಸಲಹೊ ಜಗಜಟ್ಟಿ ಪಂಢರಿರಾಯ ಅಪ ಯದುವಂಶೋದ್ಭವ ಕೇಶವ ಹೇ ಏಕಮೇವ ಮಧುವೈರಿ ಮಹಾವೈಭವ ಸದಮರಾನಂದ ಸ್ವಭಾವ ಮತ್ಕುಲ ದೈವ ಇನ ಬಾಂಧವ ವಿಧಿನದಿಪಿತ ನಾರದ ಮುನಿ ಸನ್ನುತ ವೈರಿ ಸದಮಲಗಾತುರ ಪದೆ ಪದೆಗೆ ಸಂಪದವಿಯ ಬಯಸುವ ಮೃದು ಮನದೊಳು ನಿಲ್ಲು ಪದುಮಿನಿ ವಲ್ಲಭ1 ನಿತ್ಯ ಪ್ರಭಾವ ಪತಿತಪಾವನ ಸುರ ಜೀವ ಅತಿಶಯ ಲೀಲಾಮಾನವ ನರಕಂಠೀರವ ಚ್ಯುತಿ ಪೂರಾನಾದಿ ಗುರುಗೋವ ರತಿಪತಿಪಿತ ಶತಕ್ರತು ಸುತ ಸಾರಥಿ ಪಥ ಹಿತವಾಗಿ ತೋರೊ ಮಾ- ರುತ ಮತ ಶ್ರಿತಜನ ಚತುರರ ಸತತ ಸಂ - ದಿತಿಸುತ ಮಥನ 2 ಶರಣು ಶರಣು ಸರ್ವೇಶ ಇಟ್ಟಿಗೆವಾಸ ದುರುಳರ ಸಂಗ ವಿನಾಶ ಪರಮ ಪುರುಷ ವಿಲಾಸ ನಿರವಕಾಶ ವರಪ್ರದ ಪೂರ್ಣಪ್ರಕಾಶ ಮೊರೆಹೊಕ್ಕೆನೊ ನಿನ್ನ ಚರಣ ಸರಸಿಜವ ಹರಿಯನ್ನೊಳಗಿಪ್ಪ ಮರಪೆ ಕಳೆದು ನಿನ್ನ ಸ್ಮರಣೆ ಮಾಡುವಂತೆ ಕರುಣದಿಂದಲಿ ನೋಡುಧೊರೆ ವಿಜಯವಿಠ್ಠಲ ಪುರಂದರಪ್ರಿಯ 3
--------------
ವಿಜಯದಾಸ
ಶ್ರೀ ನರಸಿಂಹ ದೇವರು ರಕ್ಷಿಸೆನ್ನನು ನಿರುತ ನರಮೃತನಾಥ ಪ ರಕ್ಷಿಸೆನ್ನ ಜಗತ್ಕುಕ್ಷಿಯೆ ಕರುಣಾಕ ಟಾಕ್ಷದಿಂದೀಕ್ಷಿಸಿ ತ್ರ್ಯಕ್ಷಾಂತರ್ಗತದೇವ ಅ.ಪ ಪತಿತಪಾವನ ಪರಶತ ಮೋದಗತ ಬೇದ ಚತುರ್ವೇದ ಪಾಲ ಶತಕ್ರತು ಕೃತಿನಾಥ || ಯತಿ ತತಿ ಮಾನಸವೃತ ತೇಜ ಭಾಸ್ಕರ ಸತತ ನಿನ್ನಯ ಪಾದವ | ಸದ್ಭಕುತಿಯಲಿ ಸ್ತುತಿಪ ದಾಸರ ಸಂಗವ | ಗರೆದು ಭವ ಮಾಧವ ನೀನೊಲಿದತಿ ಹಿತದಿಂದುಣಿಸು ನಿನ್ನ ಕಥೆ ಸುಧಾರಸವ 1 ಅರಿದರ ಗದಾಪದ್ಮಧರ ಚತುಷ್ಟಯಕರ ತಸ್ಕರ ಹರ ನರಗಾತ್ರ ಹರಿವಕ್ರ ಸುರಪಾನುಜವಟು ಪರಶುಪಾಣಿಯೆ ವಾನರ ನರಪಾಲಕವಿgಹಿÀ ತಾಂ ಬರಕಲ್ಕಿ ಶರಣ ಜನರು ಭಕ್ತಿಪರವಶದಲಿ ಕೂಗಿ ಕರೆಯಲಾಕ್ಷಣ ಓ ಎಂದು ಭರದಿ ಬಂದು ಪೊರೆವ ಪ್ರಭು ನೀ ಎಂದು ಬುಧರು ಪೇಳ್ವ ವರವಾಕ್ಯ ಮನಕೆ ತಂದು ಪ್ರಾರ್ಥಿಪೆ ನಿನ್ನ ಚರಿತೆ ಪಾಡುವ ಸುಖಗರಿಯೊ ಬಂಧು 2 ಸಿಂಧು ಶಯನ ಶಾಮ ಸುಂದರ ವಿಠಲ ಇಂದಿರಾತ್ಮಕ ತ್ರಯ ಮಂದಿರ ಕಾರ್ಪರ ಮಂದಿರ ತರುರಾಜ ಮಂದಿರ ದ್ವಿಜ ಮಧ್ಯ ಮಂದಿರಾತ್ಮಜ ಹೃ ನ್ಮಂದಿರ ಸದ್ಧಕ್ತ ಮಂದಾರ ಭೂರುಹ3
--------------
ಶಾಮಸುಂದರ ವಿಠಲ
ಯದುವೀರ ಒದಗೆನ್ನ ನಾಲಿಗೆಗೆಉದಯಾದಿ ಅಸ್ತಾಂತ ಆವಾವಾಗೆ ಪ.ನಿನ್ನ ನಾಮದ ಸ್ಮರಣೆಯೆ ಶುಭಕರ್ಮವುಉನ್ನತ ಸಂಕೀರ್ತನೆ ಶತಕ್ರತುವುಪುಣ್ಯಗಂಗಾಸ್ನಾನದ ಫಲಕಧಿಕವುಘನ್ನ ಜಪದ ಬೀಜವೆÉ ನಾಮವು 1ಬಂಗಾರದಿಳೆಯಳೆದೊಲಿದೀವ ದಾನದಿಹಿಂಗದೆ ಉಭಯಸ್ಯ ಗೋಶತದಿಶೃಂಗಾರ ಕೋಟಿ ಕನ್ಯಾದಾನಕಧಿಕವುಮಂಗಳಮಹಿಮ ಮುಕುಂದನ ನಾಮವು 2ಧರ್ಮಾರ್ಥ ಕಾಮಮೋಕ್ಷಗಳ ಮೂಲವಿದೆಂದುನಿರ್ಮಲಶ್ರುತಿಸಾರುತಾವೆಂದುಮರ್ಮವರಿತು ನಾಮ ನಂಬಿದೆ ಶೇಷಾದ್ರಿಯಹಮ್ರ್ಯನಿಲಯ ಪ್ರಸನ್ವೆಂಕಟಯ್ಯ 3
--------------
ಪ್ರಸನ್ನವೆಂಕಟದಾಸರು