ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

2. ನಮ್ಮಾಳ್ವಾರ್ ವಕುಳಾಭರಣನೆ ಶರಣೆಂಬೆ ಸಕಲ ಬಂಧು ನೀ ಸಲಹೆಂಬ ಪ ನಿಖಿಲ ಲೋಕಿಗರ ಶಿಶುನಡೆನೂಕಿದೆ ಅಕಳಂಕನೆ ಶಠಗೋಪ ನೀನಾದೆ ಅ.ಪ ನಾಥನಾಯಕಿಯೆ ಕಾರಿಕುಮಾರ ಪೂತನೆ ಸೇನಾಪತಿಯವತಾರ ಪಾತಕಹರ ತಾಮ್ರಪರ್ಣಿತೀರ ಕೀರ್ತಿ ಪಡೆದ ಸುರಪೂಜ್ಯನುದಾರ 1 ಪದುಮ ಪವಿತ್ರನಂದದ ಪ್ರಭೆನೋಡಿ ಮಧುರಕವಿಯು ಬರೆ ಮುದಗೂಡಿ ಅದುಭುತ ಮಂತ್ರವನೊರೆದೆ ಹರಿಯಪಾಡಿ ಸದಮಲ ಸೇವಕನಲಿ ಮನೆಮಾಡಿ2 ಹದಿನಾರು ವರುಷಾಹಾರವಿಲ್ಲದೆ ಬದಿರಾಂಧ ಮೂಕನಾದ ಮುನಿ ವಿಧಿ ಪಿತನದುಭುತಧ್ಯಾನ ಮೈಗೂಡಿ ಸುಧೀಂದ್ರ ಶುಭದ ಅಮೃತಪದ 3 ನಾಥಗೊಲಿದು ತಿರುವಾಯ್ಮೊಳಿಯನು ಪ್ರೀತಿಯೊಳುಪದೇಶವ ಗೈದು ಪಾತಕ ಹರಿಸುತ ಪರಿಸರ ಪೊರೆಯುತ ದಾತಾರಂ ಸುಖದಾತಾರಂ 4 ಮಧುರಾಪೀಠವು ನೀರೊಳು ಮುಳುಗಲು ವಿಧಿಯಿಲ್ಲದೆ ಪಂಡಿತರೊರಲಿ ಅಧಿಕರಿಸುತ ತವ ಪದಗಳಿಗೆರಗೆ ಮಧುರವಾಣಿಯಿಂ ಹಾಡಿದ 5 ಹತ್ತಾಳ್ವಾರರ ಶರೀರವಾಗಿ ಪೆತ್ತಿಹ ಪರಮೌದಾರ ಮುನಿ ಎತ್ತಲು ಹರಿಗುರು ಸರ್ವೋತ್ತಮರೆನು ತುತ್ತುಮಪದವಿಯ ಮಾರ್ಗವತೋರಿದ6 ಆದಿವೈಷ್ಣವ ದೀಕ್ಷಾಚಾರ್ಯ ವೇದವ ದ್ರಾವಿಡದೊಳು ಪೇಳ್ದೆ ಶ್ರೀಧರಸನ್ನಿಧಿಯೊಳಗಿದ ಪಠಿಸಲು ಸಾದರದೊಲಿವಂ ಜಾಜೀಶಂ 7
--------------
ಶಾಮಶರ್ಮರು
ಧನುರ್ಮಾಸದ ಸೇವೆಯ ಗೀತೆ ಧನುರ್ಮಾಸದ ಸೇವೆಯ ನೋಡುವ ಬನ್ನಿ ದಾನವಾಂತಕ ರಂಗನ ಪ. ಶ್ರೇಯೋನಿಧಿಗಳಿಗೆರಗಿ ಶ್ರೀವೇದಾಂತ ಗುರುಗಳಿಗೆ ವಂದಿಸಿ ಶ್ರೀ ಭಾಷ್ಯಕಾರ ಶಠಗೋಪರಿಗೆ ವಂದಿಸಿ ಶ್ರೀರಂಗೋತ್ಸವವ ಸಂಕ್ಷೇಪದಿಂ ಪೇಳುವೆ 1 ಮಾರ್ಗಶಿರ ಮಾಸದಲಿ ಮಹಾನುಭಾವ ಶ್ರೀರಂಗನಾಥನಿಗೆ ಮಹದುತ್ಸವವನ್ನು ನಡೆಸಬೇಕೆನುತಲೆ ಮಹಾಪುರುಷರು ಸಂಕಲ್ಪವ ಮಾಡಿದರು 2 ಕೇಶವ ಮಾಸದಲಿ ಎದ್ದು ದಾಸರು ಮೂರನೆ ಜಾವದಲಿ ಭೂಸುರರಿಗೆ ಎಚ್ಚರವಾಗಬೇಕೆಂದು ಬಾ ರೀಸಿದರು ಭೇರಿ ದುಂದುಭಿ ವಾದ್ಯಗಳ 3 ಕನಕಿ ಸುಜೋತಿ ಹೇಮಾವತಿಯ ಕಪಿಲೆ ಕಾವೇರಿ ತೀರ್ಥದಲಿ ಸ್ನಾನವ ಮಾಡಿ ತೀರ್ಥವ ತಂದು ನೇಮದಿ ನೀಲವರ್ಣನಿಗಭಿಷೇಕವ ಮಾಡಿದರು 4 ಛಳಿಗೆ ಕುಲಾವಿಯನಿಟ್ಟು ಶಾಲುಗಳ ಹೊದಿಸಿ ನಳಿನನಾಭ ರಂಗಗೆ ಪರಿಪರಿ ಪುಷ್ಪದ ಸರಗಳ ಧರಿಸಿಯೆ ಶ್ರೀಮೂರ್ತಿಯ ಸರವನು ಧರಿಸಿದರಾಗ 5 ತಾಪಹರವಾದ ಸೂಕ್ಷ್ಮದ ದಿವ್ಯ ಧೂಪವನು ಬೆಳಗಿದರು ವ್ಯಾಪಿಸುವ ತಿಮಿರವ ಪರಿಹರಿಸಿ ರಂಜಿಸುವ ದೀಪವ ಬೆಳಗಿದರು ಶ್ರೀಪತಿಗೆ 6 ಋಗ್ವೇದ ಯಜುರ್ವೇದವು ಸಾ ಮವೇದ ಅಥರ್ವಣವೇದಂಗಳು ದ್ರಾವಿಡವೇದ ಪುರಾಣಶಾಸ್ತ್ರಗಳನು ಬಾಗಿ ಲಾ ವೊಳಗೆ ನಿಂತು ಭಕ್ತರು ಪೇಳಿದರು 7 ವಾರಾಂಗನೆಯರಾಗ ವೈಯ್ಯಾರದಿಂದ ಆರತಿಗಳನೆ ತಂದು ವಾರಿಜನಾಭಗೆ ನೇಮದಿಂದಲೆ ಗುಂ ಭಾರತಿಗಳನೆತ್ತಿ ನೈವೇದ್ಯವ ತಂದರು 8 ಮುದ್ಗಾನ್ನ ಘಮಘಮಿಸುವ ಪಾಯಸ ದಧ್ಯೋದನಗಳು ಪರಿಪರಿ ಶಾಕಪಾಕವು ಆ ದಿವ್ಯ ಭಕ್ಷ್ಯನೈವೇದ್ಯವ ಪರಮಪುರುಷಗೆ [ಆದ್ಯರು] ಆರೋಗಣೆ ಮಾಡಿದರು 9 ಕಳಿಯಡಿಕೆ ಬಿಳಿಯೆಲೆಯು ಕರ್ಪೂರದ ಹಿಟ್ಟಿನ ಮಂಗಳಾರತಿಯನೆತ್ತಿದರಾಗ 10 ಆ ಮಹಾ ಶ್ರೀನಿವಾಸ ರಂಗ ನೈವೇದ್ಯವ ಶ್ರೀಮಧ್ರಾಮಾನುಜರ ಮತದಿ ನೇಮದಲಿ ವಿನಿಯೋಗವ ಮಾಡಲು ಪಾವ ನಾಮಾದೆವೆಂದೆನುತ ಪೋದರು ಎಲ್ಲ 11
--------------
ಯದುಗಿರಿಯಮ್ಮ