ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಂದಿಸುವಾನರ ಶ್ರೇಷ್ಠಗ್ವಂದಿಸು ಪ ಕೇಸರಿ ಸುತನಾದ ಭೂತನುಜಳ ವಾರ್ತೆ ಲೇಸಾಗಿ ತಂದ ಪ್ರಾಣೇಶನ ಪಾದಕ್ಕೆ 1 ಸುಗ್ರೀವನಗ್ರಜನಾಗ್ರ(ಹ)ದಿ ಕೊಲಿಸಿದ ದ- ಶಗ್ರೀವನ ಬಲ ನೆಗ್ಗೊತ್ತಿದ್ವಾನರಗೆ 2 ಭೂಮಿಗೊಡೆಯ ಸೀತಾರಾಮಸೇವಕನಂಘ್ರಿ ಪ್ರೇಮದಿ ಭಜಿಸೋ ಭೀಮೇಶಕೃಷ್ಣನ ಭಕ್ತಗೆ3
--------------
ಹರಪನಹಳ್ಳಿಭೀಮವ್ವ
ನೀನೇ ಕಾಪಾಡಬೇಕು ನಿರುತವು ಬಿಡದೆಯ- ಜ್ಞಾನಾಬ್ಧಿಯ ದಾಟಿಸು ಸೀ- ಕಮಲ ಭೃಂಗ ಶುಭಾಂಗ 1 ಸುಗ್ರೀವನ ಮಂತ್ರಿವರ ದ- ಶಗ್ರೀವನ ಗುದ್ದಿದವನೆ ಶತ್ರುನಿಕರವಂ ಶೀಘ್ರದಿ ಗೆಲುವಂದದಲಿಯ- ನುಗ್ರಹವ ಮಾಡುತಲೆಮ್ಮ ಕೈಪಿಡಿ ಹನುಮ 2 ತ್ವರಿತವತಿ ನಿಧಾನವಲಸಿಕೆಗಳನು ಬಿಡಿಸಿ ಪಿರಿಯರು ಪೇಳಿದ ಪರಿಯಲಿ ನೆರೆನಡೆವಂದದಲಿ ಸುಮತಿಯನು ಕೊಡು ಹನುಮ3 ಹೊರಗಿನ ಶತ್ರುಗಳಂ ವಾ- ಕ್ಪೌರುಷದಿ ವೋಡಿಸಲುಬಹುದು ಒಳಗಿನ ಕಾಮ್ಯಾ ದ್ಯರ ಗೆಲುವುದಕೆ ಶಾಂತಿಯೆ ಕ್ಷುರವಹುದು ದಯಮಾಡಿ ನೀನೆ ಕರುಣಿಸು ಹನುಮ4 ಕತ್ತಿಯಲಿ ಕಡಿದೆರೆರಡಾ- ಗುತ್ತಿರುವುದು ಜಡವು ವಾಕ್‍ಕತ್ತಿಯ ದೆಸೆಯಲಿ ನೆತ್ತಿಮೊದಲು ಪಾದವರಿಗು ಕತ್ತರಿಸಿದರೀತಿಯಹುದು ಕಾಯೈ ಹನುಮ 5 ಪರಧನ ಪರಾಕಾಮಿನಿಯರಿ ಕೊರಳೊಳರಿವೆಂಬ ರಜ್ಜುವಿಂದಲಿ ವಿರಾಗ ದೊಣ್ಣೆಯನು ಕಟ್ಟಿ ಕೈಪಿಡಿ ಹನುಮ 6 ಸಂಗವು ನಿತ್ಯಾಹ್ನೀಕಕೆ ಭಂಗವು ಬರುತಿಹುದು ಸದ್ವಿಷಯವಾದರದೆ ಬಂಗಾರವು ರತ್ನವು ತಾ ಹಿಂಗದೆ ಸೇರಿಸಿದ ರೀತಿ ಹಿತವೈ ಹನುಮ 7 ನವವಿಧ ಭಕ್ತಿಯ ಕೊಡು ರಾ- ಘವನಂಘ್ರಿಪರಾಗದಲಿ ಕಡು ವಿರತಿಯನು ನೀಂ ತವಕದಲಿ ಪಾಲಿಸುತಲಿ ನಿ- ನ್ನವರಂ ಕೈಪಿಡಿವುದೆಂದಿಗೂ ಬಿಡದೆ ಹನುಮ 8 ತಾನನುದಿನದಿ ಬರುವ ಕಷ್ಟಗಳನು ಪರಿಹರಿಸುತ್ತ ಹಿಂದೆ ತಿರುಗುತಲಿರುವಂ9
--------------
ಗುರುರಾಮವಿಠಲ
ಬೊಮ್ಮ ಗಟ್ಟಿಯಲಿದ್ದ ನಮ್ಮ ಪ್ರಾಣೇಶನು ಹ- ನುಮನೆಂಬುವ ಹರಿಭಜಕನೀತ 1 ರಮ್ಮೆರಮಣನಾದ ರಾಮಸೇವಕನಂಘ್ರಿ ಒಮ್ಮೆ ನೋಡಲು ದೋಷದೂರವಾಗ 2 ಕರ ಜೋಡಿಸಿ ಮುಗಿದು ಕೊಂ- ಡಾಡುತೀತ ನಗುವ ಮಹಿಮೆಯನು 3 ಆಡಿದ್ವಚನ ಸತ್ಯಮಾಡುವ ಭಕುತರು ಬೇಡಿದ್ವರಗಳ ಚೆಲ್ಲಾಡುವನು 4 ಹರುಷದಿಂದಲಿ ತಾ ಕಿಂಪುರುಷಖಂಡದಿ ತಪಾ- ಚರಿಸುತಿದ್ದನು ಮಹಾಪುರುಷನೀತ 5 ಅರಸರಂತಕನಾದ ಪರಶುರಾಮನ ಗೆದ್ದ ಅರಸನಂಘ್ರಿಗಳನು ಸ್ಮರಿಸಿಕೊಂಡು 6 ಸುಗ್ರೀವನಲ್ಲಿ ಪರಮನುಗ್ರ(ಹ) ಮಾಡುತಲಿ ದ- ಶಗ್ರೀವನಲ್ಲಿ ಬಂದನಾಗ್ರ(ಹ)ದಿಂದ 7 ನಖ ಶಿರದಿಂದುದ್ದವ ಮಾಡಿ ಉರಿವೀಲಂಕೆಗೆ ತಾನಂಕುರವನಿಟ್ಟ(?) 8 ಮರನಕಿತ್ತಕ್ಷಕುಮಾರನ ಮುರಿದು ತಾರ ಮರನ ಕರೆದು(?) ತಂದಮರನಾದನು 9 ವರದಿ ಬೆಳದ ಕುಂಭಕರಣನ ಕೊಂದು ಕಟ್ಟಿ ಸ್ಥಿರಪಟ್ಟವನು ವಿಭೀಷಣರಿಗಿಟ್ಟ 10 ಮಾತೆಕೊಟ್ಟಂಥ ರತ್ನರಾಕಟೆಯನ್ನು ತಂದು ಭೂತಳದೊಡೆಯಗಿಟ್ಟ ಪ್ರೀತಿಯಿಂದ 11 ಜೊತೆಮುತ್ತಿನ ಹಾರ ಕೊಡಲು ಜಾನಕಿ ರಘು- ನಾಥಗ್ವೊಲಿದು ಅಜಪದವಿನಿಟ್ಟ 12 ಸೀತಾಚೋರನ ಪ್ರಾಣಘಾತಕನು 13 ಅಂಜನಾತ್ಮಜ ದೊಡ್ಡ ಸಂಜೀವನವ ತಂದು ಕೊಂದಕಪಿಗಳ ಪ್ರಾಣ ಪಡೆದನೀತ 14 ಕಂಜಾಕ್ಷಿಯಳ ಕರೆತಂದು ಕೂಡಿಸಿ ರಾಮ- ಗಂಜದೆ ಎಡೆಯ ಕದ್ದೊಯ್ದೆಂಜಲುಂಡ 15 ರೋಮ ರೋಮಕೆ ಕೋಟಿ ಲಿಂಗ ಧರಿಸಿದ ಸು- ಜ್ಞಾನಿಗಳೊಡೆಯ ಮುಖ್ಯಪ್ರಾಣದೇವ 16 ರಾಮ ಲಕ್ಷ್ಮಣ ಸೀತಾದೇವೇರಿಂದ್ವೊಡಗೂಡಿ ಈ ಮಹಾಸ್ಥಳದಿ ನಿಂತ ಮಹಾತ್ಮನು 17 ಭೀತಿ ಇಲ್ಲದಲೆ ಭೀಮೇಶ ಕೃಷ್ಣ(ನ) ನಿಜ ದೂತನೆನಿಸಿದ ಪ್ರಖ್ಯಾತನೀತ 18
--------------
ಹರಪನಹಳ್ಳಿಭೀಮವ್ವ
ಬೊಮ್ಮಗಟ್ಟಿರಾಯ ಪಾಲಿಸೋ ನಮ್ಮ ನೀ ಮಾರಾಯ ಧರ್ಮ ಕಾಮ್ಯಾರ್ಥ ಕೊಡುವೊ ಕರುಣಾಂಬುಧಿ ಪ ನಿಗ್ರ(ಹ) ಮಾಡುತ ಪರಮಾಗ್ರ(ಹ) ದಲಿ ಸೀಗ್ರ (ಶೀಘ್ರ?) ದಿಂದಲಿ ದಶಗ್ರೀವನ ಲಂಕ- ದುರ್ಗದಲ್ಲಾಡಿದ್ಯಗ್ನಿಯ ಒಡಗೂಡಿ 1 ರಾಮಪಾದಾಂಬುಜ ಸೇವಕ ಸೇತುವೆ ಪ್ರೇಮದಿ ಕಟ್ಟಿ ನಿಂತನು ರಣದಿ ನೇಮದಿಂದಲಿ ಸಂಜೀವನ ತಂದಾತ ವಾಹನನಾದ ತ್ರಿಧಾಮದೊಡೆಯಗೆ 2 ವಾತಾತ್ಮಜ ರಘುನಾಥಗೆ ನೀ ನಿಜ- ದೂತನೆನಿಸಿ ಬಹು ಪ್ರೀತಿಯಲಿ ಭೂತಳದೊಳು ಪ್ರಖ್ಯಾತಿಯ ಪಡೆದೆ ನಿ- ರ್ಭೀತನಾದ ಭೀಮೇಶಕೃಷ್ಣನ ಪ್ರಿಯ 3
--------------
ಹರಪನಹಳ್ಳಿಭೀಮವ್ವ