ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆ ವೆಂಕಟಗಿರಿನಿಲಯನಂಘ್ರಿ ರಾ ಜೀವಯುಗಳಗಾನಮಿಸುವೆನು ಪ ಸೇವಿಪ ಜನರಿಗಮರ ತರುವೆನಿಸಿ ಧ ರಾವಲಯಾಖ್ಯ ದಿವಿಯೊಳೆಸವ ಅ.ಪ. ನಿಖಿಳ ಜಗತ್ತಿಗೆ ಪಾವನತರವೆಂದೆನಿಸುವುದು ಶ್ರೀ ವಿಧಿಭವ ಶಕ್ರಾದ್ಯರು ಆವನ ಸೇವಕ ಸೇವಕರೆನಿಸುವರು ತಾ ಉತ್ತಮ ಪುರುಷನೆನಿಸಿ ಜಗವ ಸ ದಾವಕಾಲ ಸಂತೈಸುವನು ಜೀವಾಂತರ್ಗತನಾಗಿ ವಿವಿಧ ವೇ ದಾವಳಿಯಿಂದ ತುತಿಸಿ ಕೊಂಬಾ 1 ಪಾತನೊಳಹಿಪ ವಿರೋಧಿಸೆ ತವಸ ತ್ವಾತಿಶಯನ ತೋರೆಂದೆನುತಾ ಜಾತರೂಪ ಶೈಲಾತ್ಮಜನಪ್ಪಿರೆ ವೀತಿ ಹೋತ್ರ ಸಖ ಕಿತ್ತೊಗೆಯೆ ವೀತ ಕರ್ನನಳವಳಿದು ವೇಗ ಧಾತ ಮಹಿಳೆ ತೀರ್ಥದಿ ಭೂ ಲಕ್ಷ್ಮೀಸ ಮೇತನಾಗಿ ಮೋದಿಸುತಿಪ್ಪೆ 2 ಭೂಸುರನೊರ್ವನು ತೊಂಡಮಾನ ಧರ ಣೀಶÀನ ನಿಲಯದೊಳುಳುಹಿ ಸತಿಯ ನೃಪತಿ ಮರೆಯೆ ನಿ ಶ್ವಾಸ ವನೈದಿದಳಾ ಸತಿಯು ಆ ಸಮಯದಿ ದ್ವಿಜವರ್ಯನು ಬೆಸಗೊಳೆ ಕ್ಲೇಶದಿ ಭೂಮಿಪ ಸಂಸ್ತುತಿಸೆ ಕೇಶವ ತಾನಸ್ಥಿಗಳ ತರಿಸಿ ಸು ವಾಸಿನಿ ಶಿಶು ಸಹ ಒಲಿದಿತ್ತಾ 3 ವೃದ್ಧ ಬ್ರಾಹ್ಮಣನು ತುತಿಸೆ ಸಲಿಲದೊಳ ಗದ್ದಿ ಕುಮಾರತ್ವವನಿತ್ತ ಅಧ್ವರವೆಸಗಿದ ಋಷಿಗಳ ಮಂತ್ರದ ಪದ್ದತಿ ತಿದ್ದಿಯಜ್ಞವ ಮಾಡ್ದ ಮಧ್ಯರಾತ್ರಿಯೊಳು ಬೆಸಗೊಂಡ ನೃಪನು ಪದ್ರವ ಕಳೆದಾಯುಧವಿತ್ತು ಮೃದ್ಭಾಂಡವ ರಚಿಸುವನಿಗೊಲಿದವನ ಚೋದ್ಯ ತೋಂಡಮಾನಗೆ ತೋರ್ದ 4 ಸಂಚಿತ ಕುಕರ್ಮಗಳ ಮನೆಯ ಮುರಿದು ಆಗಾಮಿ ಫಲಂಗಳ ಅನುಭವಕೀಯದೆ ಪ್ರಾರಬ್ದಾ ಮೂರ್ತಿ ಚಿಂ ತನೆ ಇತ್ತು ಸ್ವರೂಪಸುಖಾ ಅನುದಿನದಲಿ ವ್ಯಕ್ತಮಾಡಿಸಿ ಕೊ ಟ್ಟನಿಮಿತ್ತಾಪ್ತನೆನಿಸುತಿಪ್ಪ 5 ಏಕಮೇವ ರತ್ನಾಕರ ಮಂದಿರ ಆಕೂತಿಜ ಯಜ್ಞಾಕರನೇ ಲೊಕವಿಲಕ್ಷಣ ಸೂಕರಾತ್ಮ ಪಿ ವಿನುತ ಲಕ್ಷ್ಮೀ ಕಾಂತಾ ಗೋಕುಲ ಮಂದಿರ ಏಕಾಂತಿಗಳ ನಿ ರಾಕರಿಸಿದೆ ಲೋಕೈಕ ಸುಖ ಶೋಕ ರಹಿತ ನಿಜಲೋಕವಿತ್ತು ನಿ ರಾಕುಲ ಸುಖಗಳ ತಾ ಕೊಡುವಾ 6 ದಿನಪನೊಳಗೆ ವೃಜಿನಿ ವಸು ತಾ ಎಂ ದೆನಿಸಿ ಜಯಾಪತಿ ಪ್ರದ್ಯುಮ್ನ ಅನಿರುದ್ಧಾದಿ ಚತುರ್ಮೂತ್ರ್ಯಾತ್ಮಕ ತನಗೆ ತಾನೆ ಪೂಜಕ ಪೂಜ್ಯ ಅನುಪಮ ನಾಮದಿ ಕರೆಸುತಲಿಹ ತ ನ್ನನು ಈ ಪರಿಧೇನಿಸುತಿಪ್ಪ ಮನುಜರಿಗೊಲಿದು ಜಗನ್ನಾಥವಿಠ್ಠಲ ಜನನ ಮರಣಗಳ ಪರಿಹರಿಪಾ 7
--------------
ಜಗನ್ನಾಥದಾಸರು
ನಂಬಿದೆ ನಾಗರಾಜ ಹರಿಯ ಪಾ- ದಾಂಭೋಜಭಕ್ತಿಭಾಜ ಪ. ಶಂಭುಶಕ್ರಾದ್ಯರು ಹಂಬಲಿಪರು ನಿನ್ನ ತುಂಬಿದ ಜೀವಕದಂಬಾಭಿಮಾನಿಯೆ ಅ.ಪ. ಸಾವಿರ ಜಿಹ್ವೆಯೊಳು ಹರಿಯ ಸ್ತುತಿ ಗೈವೆ ನಿರತ ಕೃಪಾಳು ಶ್ರೀವಾಸುದೇವನ ಕರುಣ ನಿನ್ನಲ್ಲೆಷ್ಟು ದೇವೇಶನಾದರು ಯಾವನು ಬಣ್ಣಿಪ ಶ್ರೀವಧೂವರನ ಕಮಲಪದ ರಾ- ಜೀವ ಸೌಂದರ್ಯವನು ತನ್ನಯ ಸಾವಿರಾಕ್ಷಿಗಳಿಂದ ಕಾಣುತ ಕೇವಲಾನಂದಾಬ್ಧಿ ಮಗ್ನನೆ 1 ಶಿರವೊಂದರಲಿ ಬ್ರಹ್ಮಾಂಡ ಸಾಸವೆಯಂತೆ ಧರಿಸಿದೆ ಸುಪ್ರಚಂಡ ವರ ರಘುರಾಮನಾವರಜ ಲಕ್ಷ್ಮಣನಾದೆ ಹರಿ ಕೃಷ್ಣರಾಯನ ಪಿರಿಯನಾಗಿ ಅವ- ತರಿಸಿ ಭೂಭಾರವನುರೆ ಸಂ- ಹರಿಸಿ ವೇದ ಪುರಾಣ ತತ್ತ್ವವ ಶರಣಜನರಿಗೆ ಬೋಧಿಸುವ ಮಹಾ ಕರುಣಿ ಕಮಲಾಕಾಂತನ ಭಕ್ತನೆ 2 ಲಕ್ಷ್ಮೀನಾರಾಯಣನ ನಿದ್ರಾಸ್ಪದ ರಕ್ಷಿಸು ಕೃಪೆಯಿಂದೆನ್ನ ಸಾಕ್ಷಾದಚಲರೂಪ ನಿನ್ನೊಳು ನೆಲಸಿದ ಪಕ್ಷಿವಾಹನ ಜಗದಧ್ಯಕ್ಷ ಶ್ರೀನಿವಾಸ ಮೋಕ್ಷ ಮಾರ್ಗಪ್ರದರ್ಶಿ ಸತತ ಮು- ಮುಕ್ಷು ಜನಮನಹರ್ಷ ನಿರ್ಜರ- ಪಕ್ಷ ಸುಫಲಪ್ರದ ಸದಾ ನಿರ- ಪೇಕ್ಷ ಗುರುವರ ರಾಕ್ಷಸಾಂತಕ 3
--------------
ತುಪಾಕಿ ವೆಂಕಟರಮಣಾಚಾರ್ಯ
ನಂಬಿದೆ ನಾಗರಾಜ ಹರಿಯ ಪಾ-ದಾಂಭೋಜಭಕ್ತಿಭಾಜ ಪ.ಶಂಭುಶಕ್ರಾದ್ಯರು ಹಂಬಲಿಪರು ನಿನ್ನತುಂಬಿದ ಜೀವಕದಂಬಾಭಿಮಾನಿಯೆ ಅ.ಪ.ಸಾವಿರ ಜಿಹ್ವೆಯೊಳು ಹರಿಯ ಸ್ತುತಿಗೈವೆನಿರತಕೃಪಾಳುಶ್ರೀವಾಸುದೇವನ ಕರುಣ ನಿನ್ನಲ್ಲೆಷ್ಟುದೇವೇಶನಾದರು ಯಾವನು ಬಣ್ಣಿಪಶ್ರೀವಧೂವರನ ಕಮಲಪದ ರಾ-ಜೀವ ಸೌಂದರ್ಯವನು ತನ್ನಯಸಾವಿರಾಕ್ಷಿಗಳಿಂದ ಕಾಣುತಕೇವಲಾನಂದಾಬ್ಧಿ ಮಗ್ನನೆ 1ಶಿರವೊಂದರಲಿ ಬ್ರಹ್ಮಾಂಡ ಸಾಸವೆಯಂತೆಧರಿಸಿದೆ ಸುಪ್ರಚಂಡವರರಘುರಾಮನಾವರಜ ಲಕ್ಷ್ಮಣನಾದೆಹರಿಕೃಷ್ಣರಾಯನ ಪಿರಿಯನಾಗಿ ಅವ-ತರಿಸಿ ಭೂಭಾರವನುರೆ ಸಂ-ಹರಿಸಿ ವೇದ ಪುರಾಣ ತತ್ತ್ವವಶರಣಜನರಿಗೆ ಬೋಧಿಸುವ ಮಹಾಕರುಣಿ ಕಮಲಾಕಾಂತನ ಭಕ್ತನೆ 2ಲಕ್ಷ್ಮೀನಾರಾಯಣನ ನಿದ್ರಾಸ್ಪದರಕ್ಷಿಸು ಕೃಪೆಯಿಂದೆನ್ನಸಾಕ್ಷಾದಚಲರೂಪ ನಿನ್ನೊಳು ನೆಲಸಿದಪಕ್ಷಿವಾಹನ ಜಗದಧ್ಯಕ್ಷ ಶ್ರೀನಿವಾಸಮೋಕ್ಷ ಮಾರ್ಗಪ್ರದರ್ಶಿ ಸತತ ಮು-ಮುಕ್ಷು ಜನಮನಹರ್ಷ ನಿರ್ಜರ-ಪಕ್ಷ ಸುಫಲಪ್ರದ ಸದಾ ನಿರ-ಪೇಕ್ಷ ಗುರುವರ ರಾಕ್ಷಸಾಂತಕ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ