ಇಲ್ಲಿ ಬಾರೋ ಹರಿ ತಾತ್ಸಾರ ಥರ
ಪರಿ ಪ.
ಬಿಲ್ಲಹಬ್ಬದ ನೆವನದಿಂದತಿ
ಮಲ್ಲಕಂಸಾದಿಗಳ ಮಡುಹಿದ
ಬಲ್ಲಿದನೆ ಲೋಕದಲಿ ಸರಿ ನಿನ-
ಗಿಲ್ಲ ಶ್ರೀ ಭೂನಲ್ಲ ಕೃಪೆಯಿಂದ ಅ.ಪ.
ಶ್ರೀ ಪಯೋಜಭವ ಶಿವ ಶಕ್ರಾದಿಗಳನ್ನು
ಕಾಪಾಡಿ ಖಳಕುಲವ ಖಂಡಿಪ ಸರ್ವ
ಭೂಪತಿ ತವ ಪಾದವ ನಂಬಿರಲೆನ್ನ
ದುರಿತ ಮ-
ಹಾಪಯೋಧಿಯೊಳಿಳಿಸಿದರೆ ಸುಜ-
ನಾಪವಾದವು ಬಿಡದು ನಿನ್ನ ಪ-
ದೇ ಪದೇ ಇನ್ನೆಷ್ಟು ಪೊಗಳಲಿ 1
ಕರ್ಮ ಕೊಡುವುದು ಫಲವೆಂಬ
ನುಡಿಯನುಭವಸಿದ್ಧವು ಆದರು ಜಗ
ದೊಡೆಯಗಾವದಸಾಧ್ಯವು ನೀ ಮಾಳ್ಪ ಚೋದ್ಯವು
ನುಡಿ ಮನೋಗತಿಗಳುಕವೆಂಬೀ
ಸಡಗರವು ವೇದ ಪ್ರಸಿದ್ಧವು
ನಡೆಯಲೇಳಲು ಶಕ್ತಿ ಕುಂದಿದ
ಬಡವನನು ಕೈಪಿಡಿದ ತವಕದೊಳ್ 2
ಬೆಟ್ಟದೊಡೆಯ ವೆಂಕಟೇಶ ನೀ ಗತಿ ಎಂದು
ಘಟ್ಯಾಗಿ ನಂಬಿರುವ ದಾಸನ ಕೈಯ
ಬಿಟ್ಟರೆ ಸರಿಯೆ ದೇವ ಸಜ್ಜನರ ಕಾವ
ಸಟ್ಟಸ ಶಿಗಡಿ ನೀರ ಸುರಿಸುತ
ಕಟ್ಟಿಕಟ್ಟಿಸುತದರ ಛಾಯ ದೊ -
ಳಿಟ್ಟ ಗದ್ದಿಗೆಯಲ್ಲಿ ಕುಳಿತು ಸ-
ಮೃಷ್ಟ ಸುಖವುಂಬರಸನಂದದಿ 3