ಶ್ರೀರಂಗ ಶ್ಯಾಮಲಕೋಮಲಾಂಗ
ಕ್ರೂರರಕ್ಕಸಕುಲನಿವಾರಣ ನಾರದಾದಿವಂದ್ಯನೆ ಪ.
ಮಾಣಿಕ್ಯ ಮೌಕ್ತಿಕಹಾರ ಧೀರ ವಾಣೀಪತಿಪಿತ ವನಜನೇತ್ರನೆ
ವಾಣಿಬಾಹೋತ್ತಂಡನ ಚಾಣೂರಮರ್ದನ ಚಿದಾನಂದ
ವೇಣುನಾದಪ್ರಿಯದೇವನೆ ಇನಕುಲಾಂಬುಧಿಚಂದ್ರನೆ 1
ಅಕ್ರೂರ ಅಂಬರೀಷವರದ ನಕ್ರಬಂಧನ ನಾಗಸ್ತ್ರೀರಕ್ಷಕ
ಚಕ್ರಧರ ಮುಕುಂದನೆ ರುಕ್ಮಿಣೀವಲ್ಲಭ ವಾಸುದೇವ
ಶಕ್ರಶಶಿಧರಶೇಷಸನ್ನುತ ಸಕಲಲೋಕೋತ್ಪತ್ಯನೆ 2
ನಿತ್ಯಾನಂದನೆ ನಿಗಮಗೋಚರನೆ
ಮದನ ಶ್ರೀಗೋಪಾಲನೆ
ಕರ್ತು ಹೆಳವನಟ್ಟೆರಂಗನೆ ಕೃಪಾಂಗನೆ3