ಶ್ರೀರಾಮ ಶ್ರೀರಾಮ ಶ್ರೀರಾಮ ಶ್ರೀರಾಮ
ಸರಸಿಜಾಸನ ಪುರಹರನನ್ನು ಮೊದಲು ನೀ
ಶರೀರದಿ ಪಡೆದೆ ಸರ್ವೇಶ | ಕೇಶವ
ಪರಮಪುರುಷನೆ ಕೈಪಿಡಿಯೊ1
ಅರಿವಿಗಾಶ್ರಯನೀನೆ ಸರ್ವಶಬ್ದವಾಚ್ಯ
ದುರಿತವಿದೂರ ಪರಮಾತ್ಮ | ನಾರಾಯಣ
ಕರುಣವಾರಿಧಿಯೆ ಕೈಪಿಡಿಯೊ 2
ಮಾಧವ ರಾಯನೀ ಒಲಿದು ಕೈಪಿಡಿಯೊ 3
ಸೂರ್ಯ ನೀವೊಲಿದೆಲ್ಲರ ಸಲಹುವೆ | ಎನ್ನಯ್ಯ
ಗೋವಿಂದ ನೀನೆ ಕೈಪಿಡಿಯೊ 4
ಆಪತ್ಭಾಂಧವನೇ ಕೈಪಿಡಿಯೊ 5
ಕಲುಷ ಪನ್ನಗಶಯನ ಕೈಪಿಡಿಯೊ 6
ಶಕ್ರಗೋಸುಗ ನೀನೆ ಶುಕ್ರ ಶಿಷ್ಯನ ಬೇಡಿ
ವಿಕ್ರಮದಿಂ ಭೂಯಳದೆ | ಅದ್ಭುತತ್ರಿ
ವಿಕ್ರಮ ಮೂರುತಿಯೆ ಕೈಪಿಡಿಯೊ 7
ಆಮಹಾವಟುರೂಪದಿಂದಲದಿತಿಯೊಳು
ವಾಮನ ಮೂರ್ತಿಯೆ ಕೈಪಿಡಿಯೊ 8 ತ್ವರಿತದಿ ಎನ್ನ ಕೈಪಿಡಿಯೊ 9
ಹೃಷಿಕೇಶ ನಿನ್ನ ಕಾಣರೊ | ಪಾಮರರು
ಋಷಿಗಣವಂದ್ಯ ಕೈಪಿಡಿಯೊ 10
ಶೋಭನಚರಿತಾಮರವಿನುತ | ನೆ ಪದ್ಮ
ನಾಭನೆ ಒಲಿದು ಕೈಪಿಡಿಯೊ 11 ನೀ ದಯದಲಿ ಯಶೋದಾದೇವಿಯಿಂದಲಿ
ಬೋಧರೂಪನೆ ಕಟ್ಟಿಸಿಕೊಂಡೆ | ಸ್ವಾಮಿ
ದಾಮೋದರ ಎನಗೊಲಿದು ಕೈಪಿಡಿಯೊ 12 ಹರನಲ್ಲಿ ನಿಂತು ಸಂಹರಿಸುವೆ ಜಗವನ್ನು
ಪರಮ ನಿಷ್ಕರುಣದಲಿ | ನೀ ಸಂ
ಕರ್ಷಣ ಮೂರುತಿಯೆ ಕೈಪಿಡಿಯೊ 13 ಭಾಸುರಗಾತ್ರ ದೇವಾಸುರ ಮನುಜರೆಂ-
ಬೀಸಮುದಾಯದೊಳಗಿರ್ಪೆ | ಸರ್ವಾತ್ಮ
ವಾಸುದೇವಾಖ್ಯ ಕೈಪಿಡಿಯೊ 14 ಸೂರಿ ಜನಾಶ್ರಯ
ವಿದ್ವದ್ಭೀರೀಡ್ಯಾ ಸುಗುಣಾಢ್ಯ | ನೀನೆ ಶ್ರೀ
ಪ್ರದ್ಯುಮ್ನ ಒಲಿದು ಕೈಪಿಡಿಯೊ 15
ಮುನಿಜನವಂದಿತ ಅನಿಮಿಷಸನ್ನುತ
ಖಗವಾಹ | ಗತ ಮೋಹ
ಅನಿರುದ್ಧ ಎನ್ನ ಕೈಪಿಡಿಯೊ 16 ಸರಸಿಜಭವ ಮೊದಲು ತೃಣಪರಿಯಂತವು
ಪುರುಷೋತ್ತಮ ನೀನೆ ಕೈಪಿಡಿಯೊ 17
ಮೋಕ್ಷದಾಯಕ ಸರ್ವಾಧ್ಯಕ್ಷ ಜೀವರಿಗೆಲ್ಲ
ಸಾಕ್ಷಿಯಾಗಿರುವೆಯೊ ಹೊರ ಒಳಗೆ | ಸ್ವಾಮಿ ಅ-
ಧೋಕ್ಷಜ ನೀನೆ ಕೈಪಿಡಿಯೊ 18
ಪರಮಸತ್ಪುರುಷನಾಗಿಹ ಪ್ರಹ್ಲಾದನ
ನರಸಿಂಹ ಮೂರುತಿಯೆ ಕೈಪಿಡಿಯೊ19 ಇಚ್ಛಾಮಾತ್ರದಿ ಸೃಷ್ಟಿ ಸ್ಥಿತಿಲಯಗೈಯ್ಯುವೆ
ನಿಚ್ಛಲನಾಗಿ ಜಗವನ್ನು | ನುಂಗುವೆ
ಅಚ್ಯುತ ಎನ್ನ ಕೈಪಿಡಿಯೊ 20 ನಿರ್ದಯನಾಗಿ ಕೊಲ್ಲುವೆ | ನೀನೆ ಜ-
ನಾರ್ಧನಸ್ವಾಮಿ ಕೈಪಿಡಿಯೊ 21
ವಿಧಿ ಚಂದ್ರಶೇಖರ ಮುಖ್ಯ
ಸಂದೋಹ ನಿನ್ನ ಪೊಗಳುವರು | ಅಯ್ಯ ಉ-
ಪೇಂದ್ರ ಮೂರುತಿಯೆ ಕೈಪಿಡಿಯೊ 22 ಕರುಣಸಾಗರ ನೀನೆ ಶರಣ ಜನೋದ್ಧಾರ
ಸಿರಿದೇವಿಯರಸ ಸರ್ವೇಶ | ಸರ್ವಗ ಸ್ವಾಮಿ
ಹರಿಯೆ ನೀ ಒಲಿದು ಕೈಪಿಡಿಯೊ 23
ಕಷ್ಟ ಎಂಬುವ ಬಲು ಉಷ್ಣ ಜಲದಿ ಬಿದ್ದು
ವಿಷ್ಣುವೆ ನಾನು ಮೊರೆಯಿಡುವೆ | ಕಾದುಕೊ
ಕೃಷ್ಣ ನೀ ಒಲಿದು ಕೈಪಿಡಿಯೊ 24 ವರಬಿಂಬಮೂರ್ತಿ ನೀನಯ್ಯಾ | ಸ್ವಾಮಿ ಶ್ರೀ
ಗುರುರಾಮವಿಠ್ಠಲಾನತಪಾಲ 25