ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುರಾಜ ಗುರುಸಾರ್ವಭೌಮ ಪ ಗುರುರಾಜ ತವ ಪಾದ ಸರಸಿಜಯುಗಲಕ್ಕೆ ಮೊರೆಪೊಕ್ಕ ಜನರನ್ನ ಪೊರೆ ಎಂದೇ ಅ.ಪ ಶರಣ ಪಾಲಕನೆಂಬೊ - ಬಿರುದು ಬೀರುತಲಿದೆ ಶರಣರ ಮರೆವೊದು ಥರವೇನೋ 1 ಸಾರಿದಜನರ‌ಘ ದೂರಮಾಡುವೆನೆಂಬೊ ಧೀರರ ವಚನವು ಸಾರುತಿದೆ 2 ದೂರದೇಶದಿ ಜನ - ಸಾರಿ ಬಂದರೆ ವಿ - ಚಾರಿಸಿ ಹರಕೆ ಪೊರೈಸುವೀ 3 ಕುಷ್ಟಾದಿ ಮಹರೋಗ ನಷ್ಟಮಾಡುತಲ - ಭಿಷ್ಟೇಯ ಪೂರ್ತಿಪ ಮಹ ಶ್ರೇಷ್ಠನೆ 4 ಆದಿವ್ಯಾಧಿ ಉ-ಪಾಧಿ ಸಂಘಗಳನ್ನು ಮೋದ ಸಲಿಸುವಿ 5 ಸತಿಜನರಿಗೆ ಅತಿ ಹಿತದಿಂದ ಸುತರನ್ನ ಸತತ ನೀಡುವಿ ಯತಿ ಕುಲನಾಥ 6 ಮತಿ ಹೀನ ಅತಿ ಮೂರ್ಖ ತತಿನಿನ್ನ ಭಜಿಸಲು ವಿತತ ಭಕುತಿ ಜ್ಞಾನ ನೀಡುವೀ 7 ಮೂಕ - ಬಧಿರ - ಪಂಗು - ಏಕೋಭಾವದಿ ಸೇವೆ ಏಕಮನದಿ ಮಾಡೆ ರಕ್ಷೀಪಿ 8 ಅವರ ಮನೋ ಬಯಕೆ ಹವಣಿಸಿ - ನೀಡುತ ಅವನಿಯೊಳಗೆ ನೀ ಮೆರೆಯುವೀ 9 ಅಂಧಜನಕೆÀ ಚಕ್ಷು - ವಂಧ್ಯಜನಕೆ ಸುತರು ಬಂದ ಬಂದವರರ್ಥ ಪೂರೈಸುವೀ 10 ಪರಮಂತ್ರ ಪರಯಂತ್ರ ಪರಕೃತ್ಯಪರಮಾಹಿ ಪರಿಪರಿ ವ್ಯಥೆಗಳ ಹರಿಸುವೀ 11 ದುರುಳಜನರ ಬಾಧೆ ಮೊರಳುಮಾಯದ ಮೊದ್ದು ಕಿರಳುಪದ್ರಗಳೆಲ್ಲ ಕಳೆಯುವೀ 12 ಕಾಮಿತ ಫಲಗಳ - ಕಾಮಿಪ ಜನರಿಗೆ ಪ್ರೇಮದಿ ನೀಡುವೊ ಧ್ವರಿ ನೀನೇ 13 ಅನ್ನ ವಸನ ಧನ - ಧಾನ್ಯ ಹೀನರಗಿನ್ನು ಮನ್ನಿಸಿ ನೀನಿತ್ತು ಸಲಹುವೀ 14 ಅಧಿಕಾರ ಕಳಕೊಂಡು ಬದಕಲಾರದ ಜನ ವದÀಗಿ ನಿನ್ನನು ಭಜಿಸೆ ಕರುಣಿಪೀ 15 ಮಾನವ ನಿನ್ನ ಸೇವೆ ಮಾಡುವನವ ಕೋವಿದನಾಗುವ ನಿಶ್ಚಯಾ 16 ಇನಿತೆ ಮೊದಲಾದ ಘನತರ ಮಹಿಮವು ಜನರಿಗೆ ಶಕ್ಯವೆ ಗುರುರಾಯಾ 17 ಸುರತರು ಸುರಧೇನು ವರಚಿಂತಾಮಣಿ ನೀನೆ ಶರಣವತ್ಸಲ ಬಹು ಕರುಣೀಯೇ 18 ದಿನ ದಿನ ಮಹಿಮವು ಘನ ಘನ ತೋರೋದು ಬಿನಗು ಮಾನವರಿಗೆ ತಿಳಿಯಾದೋ 19 ಕರುಣಾನಿಧಿಯೆ ನೀನು ಶರಣ ಮಂದಾರನೆ ಶರಣ ವತ್ಸಲ ನಿನಗೆ ಶರಣೆಂಬೆ 20 ವಸುಧಿತಳದಿ ನೀನೆ ವಶನಾಗೆ ಜನರಿಗೆ ವ್ಯಸನಗಳುಂಟೇನೊ ಪೇಳಯ್ಯಾ 21 ದುರಿತ ದುಷ್ಕøತವೆಲ್ಲ ದೂರದಲೋಡೋವು ಕರಿಯು ಸಿಂಹನ ಕಂಡತೆರನಂತೆ 22 ನಿನ್ನ ನಾಮದ ಸ್ಮರಣೆ ಘನ್ನ ರೋಗಗಳನ್ನು ಚೆನ್ನಾಗಿ ನಾಶನ ಮಾಳ್ಪೋದೋ 23 ರಾಘವೇಂದ್ರ ಗುರು ಯೋಗಿಕುಲಾಗ್ರಣಿ ವೇಗಾದಿ ಪೊರೆದೆನ್ನ ಪಾಲಿಪೆ 24 ಜನನಿ ಜನಕರು ತಮ್ಮ ತನಯರ ಪೊರೆದಂತೆ ದಿನದಿನ ನೀನೇವೆ ಸಲಹೂವಿ 25 ಅನಿಮಿತ್ತ ಬಾಂಧವ ಅನುಗಾಲ ನೀನಿರೆ ಜನರು ಮಾಡುವ ಬಾಧೆÉ ಎನಗೇನೋ 26 ಮನಸಿನೊಳಗೆ ನಿತ್ಯ ನೆನೆಯುತ ತವ ಪಾದ ವನಜ ಯುಗಳ ಮೊರೆ ಪೊಂದಿದೆ 27 ನಿನ್ನ ಮಹಿಮ ಶ್ರವಣ ನಿನ್ನ ಗುಣಕೀರ್ತನ ನಿನ್ನ ಮೂರ್ತಿಧ್ಯಾನ ನೀಡೈಯ್ಯಾ 28 ನಿನ್ನ ಉಪಾಸನ ನಿನ್ನ ದಾಸತ್ವವ ಚನ್ನಾಗಿ ಎನಗಿತ್ತು ಸಲಹೈಯ್ಯಾ 29 ನಿನ್ನನುಳಿದು ಈಗ ಮನ್ನಿಸಿ ಪೊರೆವಂಥ ಘನ್ನ ಮಹಿಮರನ್ನ ಕಾಣೆನೋ 30 ದಾತ ಗುರು ಜಗ ನ್ನಾಥ ವಿಠಲಗತಿ ಪ್ರೀತಿ ಪಾತ್ರನು ನೀನೆ ನಿಜವಯ್ಯೊ 31
--------------
ಗುರುಜಗನ್ನಾಥದಾಸರು
ಬಾರೆ ಸಖಿ ವಾರಿಜ ಮುಖಿ ಬಾರೆ ಬಾರೆ ಸಖಿ ಬಾರೆ ಕೋಪಿಸೋರೆ ಹೀಗೆ ಯಾರುಪದೇಶವುಮುರಾರಿಯ ಮುಖ್ಯ ಬಲರಾಮನ ಸಖಿಯೆಬಾರೆ ಬಾರೆ ವಾರಿಜ ಮುಖಿಯೆ ಪ. ಪುಟ್ಟ ಸುಭದ್ರಾ ನಿನಗೆ ಸಿಟ್ಯಾಕ ಒದಗಿತಇಟ್ಟ ಮುದ್ರಿಗಳು ತಡವಾಗಿಇಟ್ಟ ಮುದ್ರಿಗಳು ತಡವಾಗಿ ಮುಯ್ಯವಇಷ್ಟು ಹೊತ್ತನಾಗೆ ತರಬಹುದೆ 1 ಕೇಳೆ ಸುಭದ್ರಾ ಮುಯ್ಯಾ ಕಾಳ ರಾತ್ರಿಲೆ ತಂದುಭಾಳ ಕೋಪಿಸುವ ಬಗಿ ಹೇಳಭಾಳ ಕೋಪಿಸುವ ಬಗಿ ಹೇಳ ಮುತ್ತಿನ ತೋಳುತಾಯಿತವ ಕೊಡುವೆನ 2 ಧಿಟ್ಟ ಸುಭದ್ರಾ ಮುಯ್ಯಾ ಇಷ್ಟೊತ್ತ್ತಿನಾಗ ತಂದು ಸಿಟ್ಟು ಮಾಡಿದ ಬಗಿ ಹೇಳಸಿಟ್ಟು ಮಾಡಿದ ಬಗಿ ಹೇಳ ಮುತ್ತಿನ ಕಟ್ಟಾಣಿ ಕೊಡುವೆ ನಿನಗಿನ್ನು3 ಲೋಕನಾಯಕಿ ಕೃಷ್ಣ್ಣಿ ಕೋಪವ್ಯಾ ಕೊದಗಿತಹಾಕಿದ ಮುದ್ರಿ ತಡವಾಗಿ ಹಾಕಿದ ಮುದ್ರಿ ತಡವಾಗಿ ಮುಯ್ಯವ ಈ ಕಾಲದೊಳಗೆ ತರಬಹುದೆ4 ಕೆಂಡದಂಥವಳ ಗುಣ ಕಂಡೇವ ಸಭೆಯೊಳು ಚಂಡಿತನವನೆ ಬಿಡು ಕೃಷ್ಣಿಚಂಡಿತನವನೆ ಬಿಡು ಕೃಷ್ಣಿ ಮುತ್ತಿನ ದಂಡೆ ಕೊಡುವೆ ಬಿಡುಕೋಪ5 ಬೆಂಕಿಯಂಥವಳ ಗುಣ ಶಕ್ಯವೆ ವರ್ಣಿಸಲು ಶಂಕರಾದ್ಯರಿಗೆ ವಶವಲ್ಲಶಂಕರಾದ್ಯರಿಗೆ ವಶವಲ್ಲ ಮುತ್ತಿನ ವಂಕಿಯ ಕೊಡುವೆ ನಿನಗಿನ್ನು 6 ಸತಿಯು ಸುಭದ್ರೆ ನೀನು ಯತಿಯ ಬೆನ್ಹತ್ತಿದಾಗ ಅತಿಭೀತಿ ಎಲ್ಲಿ ಅಡಗಿತ್ತಅತಿಭೀತಿ ಎಲ್ಲಿ ಅಡಗಿತ್ತ ನಾವುನಿನ್ನ ಪತಿವ್ರತ ತನವ ಅರಿವೆನೆ7 ಮಿತ್ರೆಯರು ನಾವೆಲ್ಲ ತುಪ್ಪಅನ್ನವನುಂಡುಪುತ್ರರ ಸಹಿತ ಸುಖನಿದ್ರೆಪುತ್ರರ ಸಹಿತ ಸುಖನಿದ್ರೆ ಗೈವಾಗ ಮತ್ತ ನೀ ಮುಯ್ಯ ತರಬಹುದೆ8 ಲೋಲ ರಾಮೇಶನು ಹಾಲು ಅನ್ನವನುಂಡುಬಾಲರ ಸಹಿತ ಸುಖನಿದ್ರೆಬಾಲರ ಸಹಿತ ಸುಖನಿದ್ರೆ ಗೈವಾಗಮ್ಯಾಲೆ ಮುಯ್ಯ ತರಬಹುದೆ9
--------------
ಗಲಗಲಿಅವ್ವನವರು
ಶ್ರೀಶನ ಸತಿಯರ ಹಾಸ್ಯವ ಮಾಡುತ ಸೋಸಿಲೆ ಕೋಲಹೊಯ್ದೇವ ಕೋಲ ಪ. ಧಿಟ್ಟೆ ನಾನೆಂಬೋದು ಸೃಷ್ಟಿಕರ್ತನೆ ಬಲ್ಲಗಟ್ಯಾಗಿ ನಿನ್ನ ಗುಣಗಳಗಟ್ಯಾಗಿ ನಿನ್ನ ಗುಣಗಳ ವರ್ಣಿಸಲು ಸಿಟ್ಟು ಬಂದಿತು ಸಭೆಯೊಳು1 ಗಂಡನ ಬಳಗವ ಕಂಡರೆ ನಿನಗಾಗದುಲೆಂಡರ ಮನೆಗೆ ನಡೆದ್ಹೋಗಿಲೆಂಡರ ಮನೆಗೆ ನಡೆದ್ಹೋಗಿ ಸೇರಿದ್ದುಪಂಡಿತರು ಕಂಡು ನಗುತಾರೆ 2 ಘಟ್ಯದೆಗಾರಳು ಪೆಟ್ಟಿಗಂಜುವಳಲ್ಲಎಷ್ಟು ಧೈರ್ಯವೆ ಎಲೆನಾರಿಎಷ್ಟು ಧೈರ್ಯವೆ ಎಲೆನಾರಿ ನಿನ್ನ ಕೂಡಕೃಷ್ಣ ಕಡಿ ಬೀಳೋ ತೆರನಂತೆ 3 ಮುದದಿಂದಲೆ ದ್ವಾರಕಾಸದನದೊಳಗ್ಹೋಗಿಕದನವ ಹೂಡಿ ಕೆಡಿಸುವೆಕದನವ ಹೂಡಿ ಕೆಡಿಸುವೆ ನಿನ್ನಗುಣಕೆಮದನನಯ್ಯನೆಂತು ಮನಸೋತ4 ಹಲವು ರಾಯರ ಗೆದ್ದ ಬಲುಧೀರರೆಲ್ಲನಿನ್ನ ಬಲೆಯೊಳು ಬಿದ್ದು ಬಳಲೋರುಬಲೆಯೊಳು ಬಿದ್ದು ಬಳಲೋರು ಇದ ಕಂಡುಬಲರಾಮ ತಾನು ನಗುತಾನ5 ಸುರರು ಜರಿದು ನಾರಿಹರಿಯು ಗುಣಪೂರ್ಣ ನೆನುತಲೆಹರಿಯು ಗುಣಪೂರ್ಣ ನೆನುತಲೆ ಮಲ್ಲಿಗೆಸರವ ಹಾಕಿದಿಯೆ ಕೊರಳಿಗೆ 6 ಕೇಳೆ ರುಕ್ಮಿಣಿ ನಿನ್ನ ಭಾಳ ಚಾಪಲ್ಯ ನೋಡಿಹೇಳ ಕೇಳದಲೆ ಹಿರಿಯರಹೇಳ ಕೇಳದಲೆ ಹಿರಿಯರ ಕೃಷ್ಣಯ್ಯಭೋಳೆ ತನದಿಂದ ಮದುವ್ಯಾದ 7 ಗಂಡನ ಎದುರಿಗೆ ಗಂಡುಗಚ್ಚಿಯ ಕಟ್ಟಿಗಂಡಸಿನಂತೆ ಧನುವೆತ್ತಿಗಂಡಸಿನಂತೆ ಧನುವೆತ್ತಿ ಕಾದಿದಬಂಡುಗಾರತಿಯೆನಿನ ತಂಗಿ8 ಅಕ್ಕ ತಂಗಿಯರ ಶೌರ್ಯ ಶಕ್ಯವೆ ವರ್ಣಿಸಲುನಕ್ಕು ನಾರಿ ಸರಿಯವರುನಕ್ಕು ನಾರಿ ಸರಿಯವರು ರಾಮೇಶಗೆತಕ್ಕವರೇನೆ ಮಡದಿಯರು ಕೋಲ9
--------------
ಗಲಗಲಿಅವ್ವನವರು
ಸಖಿ ನೋಡ ದ್ವಾಪರ ಯುಗವ ದ್ವಾಪರಯುಗವ ಅಪಾರ ಭಾಗ್ಯವ ಶ್ರೀಪತಿ ಇವರಿಗೊಲಿದಿರುವ ಸಖಿ ಪ. ಪಾದ ಬಲ್ಲಷ್ಟು ಬಲಗೊಂಡುಗೊಲ್ಲರ ಅರಸು ಜನಿಸಿದ ಗೊಲ್ಲರ ಅರಸು ಜನಿಸಿದ ಯುಗ ಧರ್ಮಎಲ್ಲವಿಸ್ತಾರ ರಚಿಸುವೆ ಸಖಿ 1 ಅಕ್ಕ ದ್ವಾಪರ ಧರ್ಮ ಶಕ್ಯವೆ ವರ್ಣಿಸಲುಲಕುಮಿದೇವಿಗೆ ವಶವಲ್ಲಲಕುಮಿದೇವಿಗೆ ವಶವಲ್ಲ ಯುಗಧರ್ಮತಕ್ಕಷ್ಟು ಹೇಳಿ ರಚಿಸುವೆ ಸಖಿ2 ಭೂಪ ದ್ವಾಪರದಲ್ಲೆ ಪಾಪಿ ಒಬ್ಬನಿಲ್ಲತಾಪಕೋಪಗಳು ಮೊದಲಿಲ್ಲತಾಪಕೋಪಗಳು ಮೊದಲಿಲ್ಲ ಧರೆ ಮ್ಯಾಲೆ ತಾಪಸ ಜನವೇ ಹರವಿತ್ತು ಸಖಿ 3 ಅಕ್ಷಯ ದ್ರವ್ಯವಲಕ್ಷ್ಯವಿಲ್ಲದಲೆ ಕೊಡುವೋರುಲಕ್ಷ್ಯವಿಲ್ಲದಲೆ ಕೊಡುವೋರು ರಂಗನ ರಕ್ಷೆಯ ಮಾಡಿಜೈಸೋರು ಸಖಿ 4 ಕೃಷ್ಣನ ಪಾದದಲೆ ನಿಷ್ಠೆಯುಳ್ಳವರನ್ನುದೃಷ್ಟಿಲೆ ನೋಡಿ ಸಹಿಸದೆದೃಷ್ಟಿಲೆ ನೋಡಿ ಸಹಿಸದೆ ಧರೆಮ್ಯಾಲೆ ಪುಟ್ಟಿದನಾಗ ಕಲಿಬಂದು ಸಖಿ5 ಸತ್ಯಶೌಚ ಆಚಾರ ಉತ್ತಮ ಧರ್ಮತತ್ವವಿಚಾರ ಮೊದಲಿಲ್ಲತತ್ವವಿಚಾರ ಮೊದಲಿಲ್ಲ ಧರೆ ಮ್ಯಾಲೆ ದೈತ್ಯಮಯವಾಗಿ ಜಡದಿತು ಸಖಿಯೆ 6 ಹರಿಗುರುಗಳರಿಯದ ಪರಮ ಪಾಮರಜನ ಧರೆಯ ಮೇಲಾಗ ಜನಿಸಿತುಧರೆಯ ಮೇಲಾಗ ಜನಿಸಿತು ರಾಮೇಶನಪರಮ ಭಕ್ತರನ ದಣಿಸಿತು ಸಖಿಯೆ 7
--------------
ಗಲಗಲಿಅವ್ವನವರು