ಪೊರೆಯುವಳು ದೇವಿ ಪೊರೆಯುವಳು||
ಕರುಣದಿಂದ ನಮ್ಮ ಪೊರೆಯುವಳು ಪ
ಶರಣರಿಗೊಲಿದವರಿಷ್ಟವ ಸಲಿಸುವ|
ಪರಮಪಾವನೆ ದೇವಿ ಪೊರೆಯುವಳು ಅ ಪ
ತೋಷದಿಂದಲವಳಾಶ್ರಿತ ಜನರಭಿ|
ಲಾಷೆಯ ಸಲಿಸುತ ಪೊರೆಯುವಳು||
ವಾಸವಾದಿ ಸುರವಂದಿತೆ ಶ್ರೀ ಪರ|
ಮೇಶ್ವರಿದೇವಿಯು ಪೊರೆಯುವಳು 1
ಮಹಿಷಾಸುರನನು ಮಹಿಯೊಳು ಕೆಡಹಿದ|
ಮಹಿಷಮರ್ದಿನಿದೇವಿ ಪೊರೆಯುವಳು||
ಮಹಿಮೆಯದೋರುತ ಖಳ ಧೂಮ್ರಾಕ್ಷನ|
ದಹಿಸುತ ಮಹಿಯನು ಪೊರೆದವಳು 2
ಚಂಡ ಮುಂಡ ಖಳ ತಂಡವಳಿಸಿ ಬ್ರ |
ಹ್ಮಾಂಡದ ಭಾರವ ಕಳೆದವಳು||
ರುಂಡವ ತರಿಯುತ ಚೆಂಡಾಡಿದ ಶ್ರೀ|
ಚಾಮುಂಡೇಶ್ವರಿ ಪೊರೆಯುವಳು 3
ಭಕ್ತರ ಪೊರೆಯಲು ರಕ್ತಬೀಜಾಖ್ಯನ|
ರಕ್ತ ಪಾನÀವನು ಗೈದವಳು||
ಯುಕ್ತಿಯಿಂದಲಾ ನಕ್ತಂಚರನನು|
ಶಕ್ತಿಸ್ವರೂಪಿಣಿ ತರಿದವಳು 4
ಶುಂಭ ನಿಶುಂಭರ ವಧಿಸಿದ ಶ್ರೀ ಜಗ|
ದಂಬಾದೇವಿಯು ಪೊರೆಯುವಳು||
ಅಂಬುಜಲೋಚನೆ ಶಂಭುಮನೋಹರೆ |
ಇಂಬುಗೊಡುತ ನಮ್ಮ ಪೊರೆಯುವಳು 5
ದುರುಳರ ಬಾಧೆಗೆ ಬೆದರುತ ಸುರತತಿ |
ಮೊರೆಯಿಡಲಭಯವನಿತ್ತವಳು||
ಅರುಣಾಸುರನ ಸಂಹರಿಸುತ ನಂದಿನಿ|
ನದಿಯೊಳು ಶರಣರಿಗೊಲಿದವಳು 6
ಪರಿಪರಿ ವಿಧದಲಿ ಧರಣಿಯ ಭಾರವ
ಪರಿಹರಿಸುತಲಿ ಪೊರೆದವಳು||
ಪರಮಕೃಪಾಕರಿ ಶ್ರೀ ಜಗದೀಶ್ವರಿ
ಶರಣರಾದ ನಮ್ಮ ಪೊರೆಯುವಳು 7
ಶಂಕರಿ ಶುಭಕರಿ ಕಿಂಕರಪ್ರಿಯಕರಿ||
ಪಂಕಜಲೋಚನೆ ಪೊರೆಯುವಳು||
ಶಂಖಚಕ್ರಾಂಕಿತೆ ಶ್ರೀ ದುರ್ಗಾಂಬಿಕೆ|
ಕಿಂಕರರೆಮ್ಮನು ಪೊರೆಯುವಳು 8
ಕೈಟಭಾದಿ ಖಳಸಂಕುಲವಳಿಸಿದ|
ನಿಟಿಲಾಂಬಕಿ ಶಿವೆ ಪೊರೆಯುವಳು||
ಜಟಾಮಕುಟ ಸುರತಟನೀಧರಸತಿ|
ಕಟಿಲಪುರೇಶ್ವರಿ ಪೊರೆಯುವಳು9