ನಂಬಿದೆನು ಜಗದಂಬೆ ನಿನ್ನನು ಪಾಲಿಸು ಸರ್ವಾ-
ರಂಭಸೂತ್ರಳೆ ಇಂಬುದೋರಿನ್ನು ಪ.
ಅಂಬುಜಾಂಬಕಿ ಶುಂಭಮರ್ದಿನಿ
ಕಂಬುಗ್ರೀವೆ ಹೇರಂಬ ಜನನಿ ಶೋ-
ಣಾಂಬರಾವೃತೆ ಶಂಭುಪ್ರಿಯೆ ದಯಾ-
ಲಂಬೆ ಸುರನಿಕುರುಂಬಸನ್ನುತೆ ಅ.ಪ.
ಕ್ರೂರದೈತ್ಯವಿದಾರೆ ಮಹದಾಕಾರೆ ಮಂಗಲೇ ವಿಶ್ವಾ-
ಧಾರೆ ಕಲ್ಮಷದೂರೆ ಕದನಕಠೋರೆ ನಿಶ್ಚಲೆ ಪಾರಾ-
ವಾರ ಸಮಗಂಭೀರೆ ಸುಗುಣವಿಹಾರೆ ನಿರ್ಮಲೆ ರತಿಶೃಂ-
ಗಾರೆ ರಿಪುಸಂಹಾರೆ ತುಂಬುರು
ನಾರದಾದಿಮುನೀಂದ್ರ ನುತಚರ-
ಸೂರಿಜನ ಸುಮನೋರಥಪ್ರದೆ 1
ವಿಶಾಲಸುಗುಣಯುತೆ ಮುನಿಜನ-
ಲೋಲತರುಣಮರಾಳೆ ಸಚ್ಚರಿತೆ ನವಮಣಿ
ಮಾಲೆ ಮನ್ಮಥಲೀಲೆ ರಿಪುಶಿರಶೂಲೆ ಸಚ್ಚರಿತೆ ಹಿಮಗಿರಿ-
ಬಾಲೆ ನೀಲತಮಾಲವರ್ಣೆ ಕ-
ರಾಳಸುರಗಿ ಕಪಾಲಧರೆ ಸುಜ-
ನಾಳಿಪಾಲನಶೀಲೆ ಹಿಮಕರಮೌಳಿಶೋಭಿತೆ ಕಾಳಿಕಾಂಬಿಕೆÉ2
ಶೋಕಮೋಹಾನಾನೀಕದೂರೆ ಪಿನಾಕಿಸುಪ್ರೀತೆ ಕೋಟಿ ದಿ-
ಪರಾಕು ಶರಣಜನೈಕಹಿತದಾತೆ ಸುರನರ-
ಲೋಕಮಾತೆ ನಿರಾಕುಲಿತೆ ಸುವಿವೇಕಗುಣವ್ರಾತೆ ಮಾನಸ-
ವಾಕುಕಾಯದಿಂದ ಗೈದಾ
ನೇಕ ದುರಿತವ ದೂರಗೈದು ರ-
ಮಾಳಕಳತ್ರನ ಪಾದಭಕುತಿಯ ನೀ ಕರುಣಿಸು ಕೃಪಾಕರೇಶ್ವರಿ3
ಈಶೆ ಪಾಪವಿನಾಶೆ ಮಣಿಗಣಭೂರಿಪ್ರದೆ ಶಕ್ತಿವಿ-
ಲಾಸೆ ವಿಗತವಿಶೇಷೆ ಕೃತಜಯಘೋಷೆ ಸರ್ವವಿದೆ ಮನ್ಮನ-
ದಾಸೆಗಳ ಪೂರೈಸು ಸಜನರ ಪೋಷೆ ಕುಂದರದೆ ಶಂಕರೋ-
ಲ್ಲಾಸೆ ಯೋಗೀಶಾಶಯಸ್ಥಿತೆ
ವಾಸವಾರ್ಚಿತೆ ಶ್ರೀಸರಸ್ವತಿ
ದೋಷರಹಿತೆ ಮಹೇಶೆ ಸುಗುಣರಾಶಿ ಸುರತತಿದಾಸಜನಯುತೆ4
ಸಾಮಗಾನಪ್ರೇಮೆ ರಾಕ್ಷಸ ಭೀಮೆ ರುದ್ರಾಣಿ ಅರಳ-
ಗ್ರಾಮದೇವತೆ ಕ್ಷೇಮದಾಯಿನಿ ತಾಮರಸಪಾಣಿ ಪಶುಪತಿ-
ವಾಮಭಾಗ ಲಲಾಮೆ ಮಂಗಲಧಾಮೆ ಫಣಿವೇಣಿ ಜಯಜಯ
ಶ್ರೀಮಹಾಲಕ್ಷ್ಮಿ ನಾರಾಯಣಿ
ರಾಮನಾಮಾಸಕ್ತೆ ಕವಿಜನ-
ಸೋಮಶೇಖರಿ5