ಕಾಯಬೇಕೆನ್ನ ಲಕುಮಿ | ಕಮಲಾಯತಾಕ್ಷಿ
ಕಾಯಬೇಕೆನ್ನ ಲಕುಮಿ ಪ.
ಕಾಯಬೇಕೆನ್ನ ನೋಯುವೆ ಭವದಲಿ
ಕಾಯಜಪಿತನನು ಕಾಯದಿ ತೋರಿ ಅ.ಪ.
ಕ್ಷೀರವಾರಿಧಿ ತನಯೆ | ಶ್ರೀ ಹರಿಯ ಜಾಯೆ
ಪಾರುಗಾಣಿಸೆ ಜನನಿಯೆ
ತೋರೆ ನಿನ್ನ ಪತಿಯ ಪಾದವ ಮನದೊಳು
ಸೇರಿಸೆ ಸುಜನರ ಸಂಗದೊಳೀಗ1
ಮುಕ್ತಿದಾಯಕಿ ಸಿರಿಯೆ | ನೀ ಎನ್ನ ಕಾಯೆ
ಮುಕ್ತಿಮಾರ್ಗವ ನೀನೀಯೆ
ಶಕ್ತಿರೂಪೆ ನಿನ್ನ ಭಕ್ತಿಲಿ ಭಜಿಸುವೆ
ಮುಕ್ತರೊಡೆಯನೊಳು ಭಕ್ತಿಯ ನೀಡೆ 2
ಅಷ್ಟಭುಜದ ಶಕ್ತಿಯೆ | ಶ್ರೀ ಭೂಮಿ ದುರ್ಗೆ
ಅಷ್ಟ ಐಶ್ವರ್ಯದಾಯಿನಿಯೆ
ಶ್ರೇಷ್ಠ ಶ್ರೀಗೋಪಾಲಕೃಷ್ಣವಿಠ್ಠಲನೊಳು
ಪಟ್ಟವಾಳ್ವೆ ಜಗಸೃಷ್ಟಿ ಪ್ರಳಯದಿ 3