ಭಕ್ತ ಜನೋದ್ಧಾರನ್ಯಾರೋ ದೇವನ್ಯಾರೋ ಪ
ನಿಜಮುಕ್ತಿ ದಾಯಕನೆ ಕೇಶವ ಪಾದತೋರೋ ಅ.ಪ
ಭಕ್ತಿ ಜ್ಞಾನ ವಿಚಾರಕೆನ್ನನು
ಹೊಕ್ತಿಗೊಳಿಸೆಂತೆಂದು ಬೇಡುವೆ
ಶಕ್ತಿರೂಪನು ತಾಳಿ ತಿರುಗಿ ವಿ
ರಕ್ತನಾದಾಂತ ಪರಾತ್ಮನೆ 1
ಬಾಲಕೃಷ್ಣನೆ ಬಾರೊ ಭಕ್ತನು
ಶೀಲ ಗೋಕುಲಪಾಲ ಶ್ರೀಹರಿ
ಆಲಿಸೆನ್ನಯ ಬಿನ್ನಪದ ನಿಜ
ನೀಲಮೇಘಶ್ಯಾಮ ರಂಗಾ 2
ಧರಣಿ ಚೆನ್ನಪುರೀಶ ನಿಮ್ಮಯ
ಚರಣ[ಧೂಳಿಯ]ಕುರುಹು ತೋರಿದ
ಗುರುವು ತುಲಶೀರಾಮನೆ ನಿಜ
ಪರಮತತ್ವವಿಲಾಸ ದೇವ 3