ಶ್ರೀ ಪುರುಷೋತ್ತಮವಿಲಾಸ
62-2
ಆನಂದ ಜ್ಞಾನಮಯ ಅಖಿಲ ಗುಣ ಪರಿಪೂರ್ಣ ||
ಅನಘ ಲಕ್ಷ್ಮೀರಮಣ ಶರಣು ಜಗದೀಶ ಪ
ವನಜಾಸನಾದಿ ಸುರರಿಂದ ಆರಾಧಿತನೇ |
ವನಜಜಾಂಡದಿ ಜಗಜ್ಜನ್ಮಾದಿಪತೇ ಅಪ
ಅಮಿತ ಅನಂತ ಗುಣಕ್ರಿಯಾರೂಪ
ಅನಂತ ಶೀರ್ಷಾನಂತ ಉರುಸುಗುಣಪೂರ್ಣ||
ಅನಂತಾಕ್ಷ ಸರ್ವಜ್ಞ ಸಾಕ್ಷಿ ಸರ್ವಾಧ್ಯಕ್ಷ ||
ಅನಂತಪಾದನು ಅನಂತರೂಪಸರ್ವಸ್ಥ 1
ಸಹಸ್ರಪಾತ್ ಸತ್ಯಂ ಸತ್‍ಸೃಷ್ಟಿ ಜೀವನದ
ಸಹಸ್ರಾಕ್ಷಜ್ಞಾನಂ ಎರಡು ವಿಧಜ್ಞಾನ ||
ಸಹಸ್ರಶೀರ್ಷಾನಂತಂ ಆನಂದ ಆನಂದ
ಮಹಾಮಹಿಮ ಪೂರ್ಣಗುಣ ಪುರುಷನೀಬ್ರಹ್ಮ 2
ನಾಕಭೂಪಾತಾಳ ಜಗದಂತರ್ಬಹಿವ್ರ್ಯಾಪ್ತ ||
ಭಕುತರ ಸಮೀಪಸ್ಥ ಇತರರಿಗೆ ದೂರ ||
ಏಕಾತ್ಮ ಪರಮಾತ್ಮ ಪರಮ ಪುರುಷವಿಷ್ಣೋ
ನೀಕಾಲಗುಣ ದೇಶಾಪರಿಶ್ಚಿನ್ನ ಭೂಮನ್ 3
ಪ್ರಕೃತಿಶಚವ್ಯಕ್ತ - ಮಹದಾದಿ ತತ್ವಂಗಳಿಗೇ |
ಆಕಾಶ ಮೊದಲಾದ ಭೂತ ಪಂಚಕಕ್ಕೆ ||
ಸುಖಮಯನೇ ನೀಸರ್ವೆ ಚೇತನಾ ಚೇತನಕೆ |
ಏಕ ಆಶ್ರಯ ಅನಂತ ಶೀರ್ಷಾಕ್ಷಪಾದ 4
ಪರಮೇಶ ಅವಿಕಾರ ಸಮರ್ಥ
ಉರು ತೈಜಸಚ್ಛಕ್ತಿ ರೂಪವಷಟ್ಕಾರ
ಪ್ರಕ್ರತಿ ಸರ್ವದಿ ನೀನು ಸ್ವೇಚ್ಛೆಯಿಂ ತುಂಬಿರುವಿ |
ಪ್ರಕೃತಿ ಸರ್ವವು ನಿನ್ನಧೀನವೋ ಸ್ವಾಮಿ 5
ದ್ಯುಭ್ವಾದಿ ಜಗತ್ತಿಗೆ ಆಧಾರಾಧಿಷ್ಠಿತನು
ದುಭ್ವಾದಿಗಳವ್ಯಾಪ್ಯ ವ್ಯಾಪಕನು ನೀನು
ಸರ್ವಸ್ಥನಾಗಿ ನೀ ಸರ್ವವಶಿಯಾದುದರಿಂ
ಸರ್ವನೀನೇಂದೆನಿಸಿಕೊಂಬಿಯೋ ಸ್ವಾಮಿ 6
ಆಧಾರ ಆಧೇಯೆ ಅನಂತಾಲ್ಪಶಕ್ತಿಯು
ಅಧಿಷ್ಠಾನಾಷ್ಟಿತ ವ್ಯಾಪ್ಯ ವ್ಯಾಪಕವು
ಭೇದ ಈರೀತಿಯಲಿ ಸುಸ್ಪಷ್ಟವಾಗಿದೆಯು
ಇದಂಸರ್ವಂ ಉಕ್ತಿ ನಿನ್ ಸ್ವಾಮಿತ್ವ ಬೋಧಕವು 7
ಅಧೀನ ನಿನ್ನಲ್ಲಿ ಸ್ವಾಮಿ ಸರ್ವವಶಿಸರ್ವ |
ಓದುನವು ಕರ್ಮಫಲಭುಂಜಿಪ ಸಂಸಾರಿಗಳು
ಅದರಂತೆ ಮುಕ್ತರಸ್ವಾಮಿ ಆಶ್ರಯನು 8
ಇವು ಮಾತ್ರವೇ ನಿನ್ನ ಮಹಿಮೆಗಳು ಪರಮಾತ್ಮ ||
ಸರ್ವ ಈ ಚೇತನಾಚೇತನ ಪ್ರಪಂಚವು
ಸರ್ವೇಶ ನಿನ್ನಂಶ ಸಹೃದಯ ಕಿಂಚಿತ್ತು 9
ಒಡೆಯನಿನ್ನಮಿತ ಶಕ್ತಿಯೊದಂಶದಲೆ
ಜಡಜಗತ್ ಇರುವಿಕೆ ವಿಕಾರವುಸರ್ವ ||
ಜಡ ಭಿನ್ನರಲಿ ನಿನ್ನ ಸಾದೃಶ್ಯ ಅತಿ ಸ್ವಲ್ಪ
ಪಾದ ವೊಂದಂ ಶೃತ ಸುಪಾದನು 10
ಅಧೀನತ್ವದಿಂಜಗತ್ ಇದಂಸರ್ವಂ ಎಂದಂತೆ -
ಪಾದೋಸ್ಯ ವಿಶ್ವದಲಿ ಭಿನ್ನಾಂಶಜೇಯ ||
ಭಿನ್ನಜೀವರು ನಿನ್ನ
ಪಾದರಾಗಿತಿಹರೋ ಚಿತ್ಚೇತ್ಯಯಂತ 11
ಪೂರ್ಣಗುಣನಿಧಿ ಅನಘ ಜನ್ಮಾದಿಕರ್ತಅಜ
ಆವಣ್ನಯೋನಿತ ಪ್ರಾಪ್ಯ ಮಧ್ವಸ್ಥ ಶರಣು ||
ವನಜಭವಪಿತ ಶ್ರೀಶ ಪ್ರಸನ್ನ ಶ್ರೀನಿವಾಸ ನಮೋ
ಪರಮ ಪುರಷ 12