ಪಾಲಿಸು ಪಾಲಿಸು ಪಾರ್ವತಿ ತನಯನೆ ಫಾಲಚಂದ್ರಯುತನೆ
ಕಾಲ ಸಂಭಾವನಲೋಲುಪ ವಾರಿಜಾಸ್ಯನುತನೆ ಪ
ಸುಜನ ಗಜವದನಾ ಸುರಕುವಲಯ ದಿನಕರ ಧೂರ್ಜಟಿಸುತ ಗಣಪ 1
ಕಾಮಿತ ಫಲಗಳ ಪಡೆಯಲು ಸುಜನರು ನೇಮದಿ ಪೂಜಿಪರು
ಸಾಮಜ ವದನನೆ ಭಕ್ತರಭೀಷ್ಟವÀ ಪ್ರೇಮದಿ ಕರುಣಿಸುತ 2
ಗಾನಲೋಲ ವರತಾಂಡವ ಪ್ರೀತನೆ ಕೋಮಲಾಂಗ ಸತತಂ
ಧೇನುನಗರ ಸಂರಕ್ಷಣ ದಕ್ಷನೆ ಸಾನುರಾಗದಲನಿಶಂ 3
ಇಂದ್ರಾದಿ ದಿವಿಜರೆಲ್ಲ ಕುಂದುತ್ತ ದೈತ್ಯ ಭಯದಿಂ
ಸುಂದರಿ ನಿನ್ನ ಭಜಿಸೆ ನಿಂದೆಲ್ಲರನ್ನು ಪೊರೆದೆÀ 4
ಕಮಲಾಕ್ಷಿ ವಿಮಲಪಾಣಿ ಕಮಲಾಪ್ತ ಮುಖ್ಯರಮಣೆ
ಸುಮಶೋಭಮಾನವೇಣಿ ಕಮನೀಯ ದಿವ್ಯಪಾಣಿ 5
ಶಾಕಿನಿರೂಪೆ ದೇವಿ ಲೋಕೈಕ ವೀರ್ಯ ಧೈರ್ಯ
ಬೇಕಾದ ವರಗಳಿತ್ತು ಶ್ರೀಕಾರ ಶಕ್ತಿಯೆನ್ನ 6
ಜ್ಞಾನವು ಮೌನ ಜಯವುಂ ಧ್ಯಾನ ಸುಮಂಗಲತ್ವಂಮಾನ ಸುಪುತ್ರ ಹಿತಮಂ ಧೇನು ಪುರೀಶೆ ಕೊಟ್ಟು 7