ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಾಣ ಸಂಕರುಷಣಭವ ಜಗತ್ರಾಣ ಮುಖ್ಯಪ್ರಾಣ ಪ ತೃಣಜೀವರಾದಿ ಜಂಗಮಜಡದೊಳು ಪೂರ್ಣನಹುದೊ ಶ್ರೀಹರಿಪ್ರೇರಣೆಯಿಂದ ಅ.ಪ ಪ್ರಾಣ ನಿನ್ನಿಂದಲೆ ಸರ್ವರತ್ರಾಣ ಪ್ರವೃತ್ತಿಯೂ ನಿನ್ನಯ ಆಣತಿಯಂತಿರ್ಪುದಯ್ಯಾ ಮುಖ್ಯ ಪ್ರಾಣನೆ ತ್ರಿವಿಧಜೀವರೊಳನವರತದಿ ನೀ ನೆಲೆಸಿ ಏನೇನು ಮಾಳ್ಪಕರ್ಮಂಗಳೆಲ್ಲವು ನಿನ್ನಿಂದೈಯ್ಯಾ ಪ್ರಾಣೋಪಾನವ್ಯಾನೋದಾನಸಮಾನರ ತ್ರಾಣ ನಿನ್ನದೊ ಮುಖ್ಯಪ್ರಾಣದೇವನೆ ಪ್ರಾಣಿಗಳಲಿ ಪಂಚಪ್ರಾಣರೂಪದಲಿಹೆ ಪ್ರಾಣಿಕಾರ್ಯಕ್ಕೆಲ್ಲ ನೀನಾಧಾರನೋ 1 ಸ್ಥೂಲಶರೀರದೊಳು ಪಾಯೂಪಸ್ಥದಿ ಸ ಕಲಮಲಗಳಾದ್ಯಪಸರಣಾದಿಗಳಿಂದ ರಕ್ಷಣೆ ಎಲ್ಲಪಾನನಿಂದಲಿ ಮಾಡಿಸಬಲ್ಲೆ ಮುಖನಾಸಿಕನೇತ್ರದಿ ಎಲ್ಲಶ್ವಾಸಾದಿಗಳಾಡಿಸಬಲ್ಲೆ ಕಾಲಕಾಲಕುಶ್ವಾಸಪ್ರಣಯದಿಂದಲಿ ಎಲ್ಲಕಾಲದೊಳು ಪ್ರಾಣನೆಂಬರೋ ಎಲ್ಲ ಜೀವರೊಳು ನಿಂತು ನಡೆವೆ ಶ್ರೀ- ನಲ್ಲನಾಜ್ಞೆಯಂತನುವರ್ತಿಸುವೆಯೊ 2 ಎಪ್ಪತ್ತೆರಡು ಸಾವಿರವಿಹ ನಾಡಿ ಒಡಗೂಡಿ ಅನುದಿನ ಇಪ್ಪ ಈ ಜಡದೇಹವನೇ ನೋಡಿ ವ್ಯಾಪಿಸಿ ವ್ಯಾನನಿಂದ ರಸಗಳಾ ನಾಡಿಗೆ ಕೊಂಡೋಡಿ ತಪ್ಪದೆ ನಾಡಿಕಾರ್ಯವನೆಲ್ಲ ಕ್ರಮದಿ ಮಾಡಿ ಒಪ್ಪೆ ಉದಾನಸುಷುಮ್ನನಾಡಿಯೊ ಒಪ್ಪಿಸುವೆ ಸುಖದುಃಖಫಲವನು ಪಾಪಪುಣ್ಯದಂತೆ ಜೀವರಿಗೆ ಲೋಕವ ಪ್ರಾಪಿಸಿಕೊಡುವಿಯೊ ಆಜ್ಞೆಯಿಂ 3 ಭುಕ್ತವಾದನ್ನವೆ ಮೊದಲಾದ್ದೆಲ್ಲ ತತ್ತಸ್ಥಳಗಳಿಗೊಯ್ವಪ್ರಯುಕ್ತ ಪ್ರಾಣಾಪಾನರಮಧ್ಯಪ್ರಾದೇಶವಾದ ನಾಡಿಯಲಿದ್ದ ಸಮಾನವಾಯುವಿಂ ಶಕ್ತಿಯಸಕಲಾವಯವಕೀವ ಶಕ್ತಿಯಿಲ್ಲದತ್ಯಲ್ಪಜೀವರಿಗೆ ಶಕ್ತಿಯಿತ್ತು ಜ್ಞಾನೇಂದ್ರಿಯ ವೃತ್ತಿಯ ವ್ಯಕ್ತಮಾಡಿ ಫಲವಿತ್ತು ಪೊರೆವೆಯೋ ಮುಕ್ತರೊಡೆಯನಿಗೆ ಅತ್ಯಂತ ಹಿತಕರ 4 ಪ್ರಾಣಾ ನೀ ಬಾಹ್ಯಾದಿತ್ಯನೊಳಿದ್ದು ಅಧ್ಯಾತ್ಮನೆನಿಸಿ ಕಣ್ಣೀನೊಳಾದಿತ್ಯನಲಿ ಬಂದು ಅಧಿಭೂತನೆನಿಸಿ ಕಣ್ಣೀನಭಿಮಾನಿಪ್ರಾಣನ ಸೇರಿ-ಅಧಿದೈವವೆಂದು ಎಣಿಪರೊ ಈ ವಿಧ ತ್ರಯಗತನೆಂದು ತೃಣ ಮೊದಲಾದ ಸರ್ವಜೀವರ ಪ್ರಾಣಪಂಚರೊಳು ಮುಖ್ಯಪ್ರಾಣನೆ ಫಣಿಗಿರೀಶ ಶ್ರೀ ವೆಂಕಟೇಶನ- ಪ್ಪಣೆಯಂತೆ ನೀ ನಿಯಾಮಕನಾಗಿಹೆ 5
--------------
ಉರಗಾದ್ರಿವಾಸವಿಠಲದಾಸರು
ಹನುಮ ಮಧ್ವಾಧಿಪತೇ ನಮೋ ನಮೋ ಪ ಹನುಮ ಮಧ್ವಾಧಿಪತೇ ಘನಶ್ರೇ ಷ್ಠನುಪಮಮುನಿವರನೆನಿಸಿದ ಅ.ಪ ಉದ್ಧರಿಸೆಂದು ಮರೆಬಿದ್ದ ಭಕ್ತನಂ ಮುದ್ದಿಟ್ಟೆತ್ತೆ ನಿರ್ಧಾರದಭಯವಿತ್ತು ಪದ್ಮನಾಭ ನಿಂದುದ್ಧರಿಸಿದಿ ಪರಿ ಶುದ್ಧಮೂರುತಿ ಪ್ರಸಿದ್ಧನೆನಿಸಿದಂಥ 1 ಶಕ್ತಿಯಿತ್ತ ಮಹ ಮೌಕ್ತಿಕ ಮಾಲೆಯ ಸುತ್ತಿ ಶಿಲೆಯ ಮೇಲೆತ್ತಿ ಹೊಡೆದು ಘನ ಭಕ್ತಿತೋರಿ ಹರಿಚಿತ್ತ ತೃಪ್ತಿಬಡಿಸ ತ್ಯುತ್ತಮ ನಿಜಭೃತ್ಯನೆನಿಸಿದಂಥ 2 ಸುದತಿ ಸೀತೆ ತನ್ನ ಸದಯನ ನೆನೆಯಲು ಎದೆಸೀಳಿ ತೋರಿಸಿ ಸದಮಲನಂಘ್ರಿಯ ಸದಮಲಾಂಗಿ ವ್ರತ ಮುದದಿ ತೀರಿಸಿ ನಿಜ ಸದಮಲ ಭಕ್ತ ನೀನಹುದುಹುದೆನಿಸಿದ 3 ಶ್ರೀಕರನಪ್ಪಣೆ ಪಡೆದು ಅಸಮಬಲ ದೇಕ ಕಾಲದ್ಹಾರಿ ಹುಡುಕಿ ಕಾಶಿಯಿಂ ಏಕಾಗ್ರಚಿತ್ತದಿ ತಂದು ಲಿಂಗ ಮೂ ಲೋಕ ಮೋಹನನಿಂ ಲೋಕಪೂಜ್ಯೆನಿಸಿದ 4 ಮೀರಿದ ಗರುಡನಪಾರ ಗರುವಮಂ ಸೂರಗೈದು ದ್ವಾಪರ ಯುಗದಿಅ ಪಾರ ಮಹಿಮ ಶ್ರೀ ಧೀರ ಶ್ರೀರಾಮನ ಚಾರುಚರಣ ಕಂಡು ನಿರುತನೆನಿಸಿದಂಥ 5
--------------
ರಾಮದಾಸರು