ಬಿಗಿಯದಿರು ಬಿಗಿಯದಿರು ಎಲೆ ಮಾನವಾಧಿಗಿ ಧಿಗಿ ಧಿಗಿಯೆನುತ ನಿನಗೇಕೆ ಗರ್ವ ಅ
ವಿರಕ್ತಿಯಲಿ ಹನುಮನೆ ವಿವೇಕದಲಿ ವಸಿಷ್ಠನೆಶೂರತನದಲಿ ಶಂತನುತನಯನೇನೊಸ್ವರದಲಿ ತುಂಬುರನೆ ಗೀತದಲಿ ನಾರದನೆಪರಾಶರ ಮುನಿಯೆ ವ್ರತತಿ ಪಟ್ಟದಲ್ಲಿ 1
ಚೆಲುವಿನಲಿ ರಾಮನೆ ಸತ್ಯದಿ ಹರಿಶ್ಚÀ್ಚಂದ್ರನೆಛÀಲದಲ್ಲಿ ಋಷಿ ವಿಶ್ವಾಮಿತ್ರನೇನೋಬಲದಲ್ಲಿ ವಾಲಿಯೇ ಹಲಧರನೆ ಹಿರಣ್ಯಕನೆಬಿಲು ವಿದ್ಯದಲಿ ಪರಶುರಾಮನೇ ನೀನು 2
ತ್ಯಾಗದಲಿ ಕರ್ಣನೇ ಭೋಗದಲಿ ಶತಮಖನೆಯೋಗದಲಿ ಶುಕಸನಕ ಜನಕನೇನೋಭಾಗ್ಯದಲಿ ಬಲಿಚಕ್ರವರ್ತಿಯೋ ದಶಶಿರನೊದೀರ್ಘದಲಿ ಮೇರುವೇ ಮಂದರವೆ ನೀನು 3
ಶಕ್ತಿಯಲಿ ಕಾಲನೆ ಭುಕ್ತಿಯಲಗಸ್ತ್ಯನೆಮುಕ್ತಿ ಪಡೆವಲ್ಲಿ ಖಟ್ಟಾಂಗರಾಯನೇನೊ 4
ಶಾಪದಲಿ ಬ್ರಹ್ಮನೆ ತಾಪದಲಿ ಸೂರ್ಯನೆಕೋಪದಲಿ ಮಹೇಶನೇನೋ ನೀನುತಪದಲ್ಲಿ ಹನುಮನೆ ವ್ರತದಿ ರುಕ್ಮಾಂಗದನೆಕೃಪೆಯಲ್ಲಿ ಶ್ರೀ ಕೃಷ್ಣದೇವನೆ ನೀನು 5