ರಂಗಾ ಮನೆಗೆ ಬಂದ ಪರಮ ಮಂಗಳದಾಯಿ
ಹಿಂಗಿತು ದಾರಿದ್ರ್ಯವಿನ್ನು ಶೃಂಗಾರ ಭುಜಂಗ ಶಾಯಿ ಪ.
ಪದ್ಮನಾಭ ಸಿರಿನಲ್ಲಕೃಷ್ಣ ತನ್ನ ಪಾದ
ಪಲ್ಲವೆ ಶರಣೆಂದು ನಿಲ್ಲೆ ಧೈರ್ಯದಿ
ಮೆಲ್ಲ ಮೆಲ್ಲಕಾಗಿ ತನ್ನ ವಲ್ಲಭೆಯ ಕೂಡಿ ಎನ್ನ
ಸೊಲ್ಲ ಲಾಲಿಸುತ ಕಂಸದಲ್ಲಣ ತಡವಿಲ್ಲದಂತೆ 1
ಆರುವೆನನೆಂಬ ಹುಣ ಘೋರಭಾವದಿಂದಲುಂಡು
ಗಾರುಮಾಳ್ಪ ಸಮಯದಲ್ಲಿ ಚೀರುತಿರುವುದ
ಮಾರಜನಕ ಲಾಲಿಸಿ ಕೃಪಾರಸದಿ ಸಲಹಿ ನಿಜ ಪಾ
ದಾರವಿಂದ ಯುಗ್ಮವನ್ನು ತೋರಿ ತಿರುಗಿ ಕಳುಹಿದಂಥ 2
ಭಕ್ತಾಭರಣನೆಂಬ ಬಿರುದ ವ್ಯಕ್ತವಾಗಿ ತೋರಿ ಸರ್ವೋ
ದ್ವøಕ್ತ ಮಹಿಮ ತನ್ನೊಳ್ಪರಮಾ ಮತಿಯನಿತ್ತು
ಮಾಯಾ ಶಕ್ತಿಯರಸ ವೆಂಕಟೇಶ
ನಿತ್ಯ ಮುಕ್ತ ರಮೆಯ ಕೂಡಿ ನಗುತ 3