ಉದಯಾದ್ರೀಶ ವಿಠಲ ಮುದವನಿತ್ತವನೀಗೆಉದ್ಧರಿಸ ಬೇಕೆಂದು ಪ್ರಾಥಿಸುವೆ ಹರಿಯೇ ಪ
ಸದಯ ನೀನಿರೆದೇವ ಸಂಸ್ಕøತಿಯ ಶೃಂಖಲೆಗೆಬೆದರಿಕಿಲ್ಲವೊ ಇವಗೆ ನರಹರಿಯೆ ಸ್ವಾಮಿಅ.ಪ.
ಸ್ವಾಪದಲಿ ನಭದಲ್ಲಿ ರೂಪವನೆ ತೋರಿದ ಯೊಪಯೋನಿಧಿಯಾಗಿ ಮೆರೆವೆ ವೆಂಕಟೇಶ |ಆಪಯೋಜಾಸನ ವಿಷಾದ್ಯರಿಗೆ ನಿಲುಕದಅಪಾರ ತವಮಹಿಮೆ ನಾ ಪೇಳಲೊಶವೇ 1
ಸಾರನಿಸ್ಸಾರವೆನೆ ಜಗದೊಳಗೆ ನೀನೊಬ್ಬಸಾರತಮನೆಂದೆಂಬ ಪಾರಮಾರ್ಥಿಕವ |ತಾರತಮ್ಯ ಜ್ಞಾನ ಮೂರೆರಡು ಭೇಧಗಳಸಾರವನೆ ತಿಳಿಸಿ ಸಂಸಾರ ನಿಧಿ ದಾಟಿಸೋ 2
ಗರ್ವರಹಿತನು ಇವಗೆ ಕವನ ಶಕ್ತಿಯನಿತ್ತುಸರ್ವತ್ರ ಸರ್ವದಾ ಸರ್ವಕಾರ್ಯಗಳಲ್ಲಿಸರ್ವೇಶ ತವನಾಮ ಸ್ಮøತಿಯನ್ನೆ ಕರುಣಿಸುತದರ್ವಿ ಜೀವನಕಾಯೊ ಸರ್ವಾಂತರಾತ್ಮಾ 3
ಶ್ರೀದ ಶ್ರೀ ವೆಂಕಟನ ನೋಡಿದೆ ಎಂಬಂಥಮೋದದಾಯಕ ಪದವು ಉದಯ ವಿಠಲಾಂಕಿತವಾದಿರಾಜರ ಶಿಷ್ಯ ಪಾಡಿ ಪೂರೈಸುತಿರೆನೀದಯದಿ ತವರೂಪ ತೋರ್ದುದನು ಮರೆ ಮಾಡಿದೆ4
ಪಾವಮಾನಿಯ ಪ್ರೀಯ ಭಾವುಕರ ಪರಿಪಾಲಗೋವತ್ಸ ಧ್ವನಿ ಕೇಳಿ ಧಾವಿಸೀ ಬರುವಂತೆತೀವ್ರುಪಾಸನೆ ಇತ್ತು ಇವನ ಹೃತ್ಕಂಜದಲಿದೇವ ಗುರು ಗೋವಿಂದ ವಿಠಲ ತವರೂಪ ತೋರೊ5