ಅಪ್ರಾಕೃತ ಕಾಯಾ ಪ
ಶ್ರೀಕರಾರ್ಚಿತಪಾದ ಲೋಕೇಶ ವಂದಿತ ಅ-
ವ್ಯಾಕೃತಾಕಾಶದೊಡೆಯನೆ ವಾಸುಕೀಶಯನ ಸರ್ವೇಶ ನೀನೆ
ಪ್ರಾಕೃತ ಸಜ್ಜಮಜ್ಜನ
ಕಾರ್ಯಕೆ ಕಾರಣನಯ್ಯ ಏಕೋ ನಾರಾಯಣ ಅ.ಪ
ಪ್ರಳಯಕಾಲದಿ ಜೀವರ ನಿಲಯಾ ಕಲ್ಪಿಸಿ ತತ್ತ
ನಾಲ್ಕುವಿಧಗಳ ರೂಪಗಳನು ಧರಿಸಿ ಪ್ರಳಯದೊಳಿಂಬಿಟ್ಟು
ಎಳೆಸಿದ ಕಟಾಕ್ಷವೀಕ್ಷಣದಿಂದಲಿ 1
ಅಳವು ಇಲ್ಲದ ಸೃಷ್ಟಿಯನೆಸಗಿದೇ
ಸಾಧುಜೀವರು ತಮ್ಮ ಸಾಧನ ಪೊರೈಸಿ
ಸ್ವದೇಹದೊಳು ಬಂದ ಮೋದದಿಂದಲಿ ನೋಡಿ
ಬಾಧಿಪ ಲಿಂಗಭಂಗವೈದಿಹ ಪ್ರಾರಬ್ಧನಾಶನವಿಹ ವಿ-
ವಿಧ ಸುಜೀವರ ಮೋದಪಡಿಸಿ ನಿ-
ಉದರದೊಳಿಟ್ಟ್ಯಯ್ಯ ಸದಮಲಮೂರುತಿ
ಅದುಭುತಮಹಿಮ ಶ್ರೀ ವಾಸುದೇವನೆ2
ಸಂಚಿತ ನೀಗಿ ಪ್ರಾರಬ್ಧ ಶೇಷ
ಭೋಗ ಉಳ್ಳವರೆಲ್ಲ ಆಗದೆ ಪೂರ್ಣ ಸಾಧನೆ
ನೀಗದೆ ಲಿಂಗಭಂಗ ಆಗ ಬಿಂಬನ್ನ ನೋಳ್ಪರ
ನಾಗಶಯನ ನಿನ್ನಂಗದೊಳಿಂಬಿಟ್ಟೆ
ಜಾಗುಮಾಡದೆ ನೀನಾಗಲೆ ಜೀವರ ಭೋಗವ ತರಲು
ಭಾಗವಗೈಸಿ ಭೂಭಾಗದ ಸಾಧನ ಮಾಳ್ಪ ಜೀವಗಣ
ಭಾಗವ ಕಾಯ್ದೆ ಸಂಕರುಷಣ ಮೂರುತೆ 3
ನಿತ್ಯಸಂಸಾರಿಗಳಿಗೆ ಇತ್ತೆ ನಿನ್ನುದರದೊಳು
ಮುಕ್ತರೊಡೆಯ ದೇವ ಶಕ್ತನಹುದೋ ನೀ
ಮೊತ್ತ ಮೊದಲು ನೀನಿತ್ತು ಪೊರೆದೆ ಬರಲಿತ್ತ ಕಾರಣ ಪ್ರ-
ಸುತ್ತಿ ಸುತ್ತಿರುವೆ ಬಿತ್ತರಿಸಲೇನನಿರುದ್ಧಮೂರುತೇ 4
ಅಣುವಿಗೆ ಅಣುವಾಗಿ ಘನತೆ ಘನತಮನಾಗಿ
ತೃಣಜೀವರಾದಿ ಬ್ರಹ್ಮಗಣರೆಲ್ಲರೊಳು
ಗಣನೆ ಇಲ್ಲದ ಕಾರ್ಯ ಕ್ಷಣಬಿಡದಲೆ ನಡೆಸಿ
ಎಣೆಯಿಲ್ಲದಿಹ ಸುಗುಣ ಸಾಂದ್ರನೆ
ಪ್ರಣವದೊಳು ಪ್ರತಿಪಾದ್ಯನಾಗಿಹೆ ತ್ರಿಗುಣರಹಿತ ಮುಖ್ಯ
ಪ್ರಾಣಾಂತರ್ಗತ ಪ್ರಣತಕಾಮದ ಪೂರ್ಣ ಸಂಪೂರ್ಣ5
ಮುಕ್ತಾಮುಕ್ರಾಶ್ರಯ ಭಕ್ತಪರಾಧೀನ
ಶಕ್ತಾನೆ ಸರ್ವವೇದೋಕ್ತ ಮಹಿಮಾತೀತ
ಉಕ್ತನಾಗಿಹೆ ಪುರುಷಸೂಕ್ತಾದೊಳಪ್ರಮೇಯ
ಶಕ್ತಿಯನರಿಯರು ಅಜಭವಾದ್ಯರು
ಶಕ್ತನೆ ಜೀವನ್ಮುಕ್ತರೌಘ
ಸಕ್ತರಾಗಿ ನಿನ್ನ ಸ್ತೋತ್ರವ ಮಾಳ್ಪರು 6
ಶ್ರೀಶಾ ಸರ್ವೋತ್ತಮ ವಾಸ ವೈಕುಂಠಾಧೀಶ
ವಾಸವಾದಿ ವಂದಿತ ಭಾಸುರಾಂಗನೆ
ವಿಶ್ವಾಸ ನಿನ್ನೊಳಿಟ್ಟ ದಾಸ ಜನರ ಕಾಯ್ವ
ಈಶಾವ್ಯಾಸಮಿದಂಸರ್ವಂ ಎಂದೆಂದು ಎಂದು
ಉಸುರುವ ವೇದಗಳ್ ಏಸುಕಾಲಕು ಸಾಕಲ್ಯದಿ ವರ್ಣಿಸ
ಲೀಶ ಕೋಟಿ ಪ್ರವಿಷ್ಟೆಗೆ ಅಸದಳ 7
ಅಂಗಜಪಿತ ರಂಗ ಮಂಗಳಾಂಗನೆ ಮಾ-
ತಂಗವರದ ದೇವ ಗಂಗಾಜನಕ ಕಾಳಿಂಗನಾ ಮದ ಮೆಟ್ಟಿ
ಭಂಗಾಗೈಸಿದ ಭುಜಂಗಶಯನ ಎನ್ನಂತಾ-
ರಂಗದಿ ನಿಲ್ಲೋ ಇಂಗಿತ ಬಲ್ಲೆ ಶ್ರೀರಂಗಶಾಯಿ ಸಾ-
ರಂಗಪಾಣಿ ಕೃಪಾಂಗ ಎನ್ನಯ ಭವಭಂಗಗೈಸಿ ಸ-
ತ್ಸಂಗವೀಯೋ ಯದುಪುಂಗವ ಮಂಗಳಮೂರುತಿ ಶೌರೇ8
ಕಾಲ ಜಾಲವ ತಂದೆ ಪಾಲಿಪ ಸಲಹಿಪ ಕರ್ತ ನೀನಲ್ಲದಿ-
ನ್ನಿಲ್ಲವಯ್ಯ ಶ್ರೀ ವೇಂಕಟೇಶ ಪ್ರಭೋ 9