|| ಶ್ರೀ|| ಪದ್ಯ||
ಮುಂದೆ ತುಳುಜಾ ದೇವಿ ಬಂದು ನಿಂತಿರಲು ತ್ವರದಿಂದ
ನೋಡ್ಯನುಭೂತಿ ಬಂದಂಥ ದೇವಿಯ ಚಂದದ ಬಹು
ತೇಜವೆಂದು ತಿಳಿಯದೆ ಎನ್ನ ಮುಂದೆದುರಿಗೆ ಏನು
ಬಂದಿರುವುದೆಂದು ತ್ವರದಿಂದ ನಡುಗಿದಳು|| ಮುಂದ
ಆದೇವಿ ತಾ ಮುಂದಕ್ಕೆ ಕರೆಯುತಲೇ ಕುಂದರದನಿಯೇ
ಕೇಳು ಕುಂದು ನಿನ್ನಲ್ಲಿ ಇಲ್ಲ ಎಂದು ನಿನ್ನ ಭಕ್ತಿಗೆ ಚಂದಾಗಿ
ಅಭಯದ ಕೂಟ್ಟಂದಳೀಪರಿಯ||1
ಪದ ರಾಗ:ಕಾನಾಡ ಆದಿತಾಳ
ಬೇಡು ಬೇಕಾದ್ದು ಬ್ಯಾಗನೇ|| ಅನುಭೂತಿ|| ಬೇ||
ನೀಡುವೆ ನಾನು|| ಪ
ಮಾನಸ ದುಃಖವ್ಯಾಕಿದು || ನಿನ್ನ ಭಿಮಾನವೆಂಬುದು ನನ್ನದು||
ಮಾನಿತರೊಳ್ಹಗತಿ ಮಾನವಂತೆಯೇ ಮಾನುನಿ ಮಣಿ
ಅನುಮಾನವ ಬಿಟ್ಟು|| 1
ಎಷ್ಟು ಸ್ನೇಹವ ತೋರಲಿ|| ಬಂದೆ ಸಂತುಷ್ಟಳಾಗುತ ನಿನ್ನಲಿ||
ಶಿಷ್ಟಳೆ ನೀ ಕೇಳಸ್ಪಷ್ಟದಿ ನಿನಗೆ ದೃಷ್ಟಿಗೆ ಬೀಳಲು
ಕಷ್ಟಗಳುಂಟೆ|| 2
ಚಿಂತಿಸಿದಿ ಯಾಕೆನ್ನನು|| ಬಂದಂತಹ ಚಿಂತೆ ಎಲ್ಲಾನೂ ಕಳೆವೆನು||
ಸಂತೋಷದಲಿ ಅನಂತಾದ್ರೀಶನ ಚಿಂತನದಿಂದಿರು
ಚಿಂತೆಯನು ಬಿಟ್ಟು|| 3
ಆರ್ಯಾ
ಅತಿ ಹಿತ ವಚನವನು ಕೇಳಿ || ಅತಿ ಹರುಷಿತಳಾದಳಾಗ
ಆ ಬಾಲೆ ಹಿತವಾಯಿತು ಎನಗೆಂದು || ನತಿಸುತ
ಮಾತಾಡಿದಳು ಹೀಗೆಂದು|| 1
ಪದ ರಾಗ:ಮುಖಾರಿ ಆದಿತಾಳ
ತುಳುಜಾದೇವಿಯೇ|| ಪ
ನಮೋ ಎಂಬೆ ಮತ್ತು ಜಗದ್ಥಾತ್ತಿಯೆ || ಬಹುಪ್ರಮಿತಾ
ಹಿಮಾಚಲನ ಪುತ್ರಿಯೇ || ಸುಮಹಿಮ ಸುಂದರಗಾತ್ರಿಯೇ||
ಮನದಾ ಅಮಿತಾರೋಗಕ್ಕೆ ಮಹಾಮಾತ್ತಿಯೇ|| 1
ತ್ವರಿತಾದಿಂದಲೇ ಬಂದಂಥಾಕಿಯೇ || ಎಂದು ತ್ವರಿತಾ
ತ್ವರಿತಾದೇವಿಯು ಎನಿಸು ವಾಕೆಯೆ|| ಮರೆತಿರಲಾರೆ ನಾ
ನಿನ್ನಕಿಯೇ || ಸ್ನೇಹಾಭರಿತಾಗಿ ಭಕ್ತರನ ಸಲಹವಾಕಿಯೇ|| 2
ಚಿಂತಿ ಮಾಡಲು ಬಂದು ನಿಂತಿಯೇ || ಎನಗೆ
ಚಿಂತಿಯು ಮಾಡಬ್ಯಾಡಂತಿಯೇ||
ಎಂಥಾಕಿ ನೀನು ದಯಾವಂತಿಯೇ || ವರದಾ
ನಂತಾದ್ರೀಶನ ಸಖನ ಕಾಂತಿಯೇ|| 3
ಆರ್ಯಾ
ಕರ ಮುಗಿದು|| 1
ಪದ ರಾಗ :ಆನಂದ ಭೈರವಿ
ವರಕೊಡು ಎನಗಿದು ತ್ವರಿತದಿ ತಾಯಿ||
ಮರೆಯ ದೆಂದೆಂದೂ ಹಗಲಿರುಳು ನೀ ಕಾಯಿ|| ಪ
ಮಂದ ಮತಿಯು ದೈತ್ಯ ಬಂದಿಹನೋಡು||
ಕೊಂದವನ ಎನಗಾನಂದವ ನೀಡು 1
ಮಾಡುವ ತಪಸ್ಸಿಗೆ ಕೇಡು ತಂದಿಹನು||
ಮಾಡಲಿನ್ನೇನು ನಿನಗೆ ಬೇಡಕೊಂಬುವೆನು|| 2
ಪತಿಯ ಸೇವಿಸುವಂಥ ಸತಿಯು ಬೇಡುವೆನೂ||
ಸತತಾನಂತಾದ್ರೀಶನಾ ಸ್ವøತಿಯು ಮಾಡುವೆನು|| 3
ಅನುಭೂತಿಯ ವಚನವನು || ಅನುಸರಿಸುತ ಬ್ಯಾಗಕೊಟ್ಟು
ಎನಗಿಲ್ಲೆಂತ್ಯಂದಳಾಗ ಜಗದಂಬಾ|| 1
ಮಾಡಿದಳು|| ಹುಂಕಾರ|| 2
ಒಗೆದಾನು ಯುದ್ಧದಲ್ಲಿ ಜಾಣಾ|| 3
ಸಾರಶಕ್ತಿಯನು ತೆಗೆದಾ
ಶೌರ್ಯದಿ ಮತ್ತಾಕೆಯಲ್ಲೇ ಒಗೆದಾ|| 4
ಎದೆಗ್ಹೊಡೆದಳು ಶೂಲದಲೆ||ಅದುರೂಪವು ಬಿಟ್ಟು||
ತನ್ನಕ ಪಟದಲೆ ಕುದುರೆಯ ರೂಪವ ಧರಿಸಿ|| ಒದರುತ
ನಿಂತಾಗ ಮುಂದ ಖ್ಯಾಕರಿಸಿ|| 5
ಗಾಢನೆ ಮಹಿಷಾಗಿ ಬಂದ ಬದಿಯ್ಮಲೇ 6
ತೋರುವ ಬಹುಬೆಟ್ಟಗಳ|| ಕೊಡಗಳಿಂದಲೇ ಕೊಡಗಳ್ಹಗಳು|
ಮಾಡುವ ವೃಷ್ಟಿಯದೆಷ್ಟು|| ಕಾಡುವ ಕಪಟದಿಂದ ಮತ್ತಿಷ್ಟು 7
ಶೃಂಗಗಳಿಂದ ಹಿಡಿದಳು ದÉೈತ್ಯಬಾಯಿಬಿಡುವಾ|| 8
ಅವನ ಮುರದೊತ್ತಿ 9
ಕಡೆದಳು ಆಗವನ ಬಿಲ್ಲುಬಾಣದಲೆ|| 10
ದಾನವನು|| ಹುಟ್ಟಿದ ಸೈನ್ಯವು ಎಲ್ಲಾ|| ಪೆಟ್ಟು ಹಾಕುತ
ಬಂತು ಭೂತಗಳಿಗೆಲಾ||್ಲ 11
ತಡಿಯದೇ ಅವನ ಹುಡುಕುತಲಿ || ಕಡಿದಳು ಶಿರ
ಕಡೆದಳು ಮತ್ತವನ ಶಿರವು ಖಡ್ಗದಲೇ|| 12
ಸುರರು ಥಟ್ಟನೆ ಕರೆದರು ಪುಷ್ಪ ದೃಷ್ಟಿಯನು|| 13
ಪದ್ಯ ರಾಗ:ದೇಶಿ ಅಟತಾಳ, ಸ್ವರ ಷಡ್ಜ
ಓಡಿ xಟ್ಟನೆ ಹಿಡಿದರಾಗ|| 1
ಕುಕ್ಷಿಗಿಲ್ಲದಲೆ ಬುಭೂಕ್ಷಿತರದು ಎಲ್ಲಾ ಭಕ್ಷಣ ಮಾಡುವರು||
ಅಕ್ಷಯ ಬಲದಿಂದ ದಕ್ಷರು ಎಲ್ಲಾರು ರಾಕ್ಷಸರಾದರು|| 2
ಭೈರವಾದಿಗಳು ಎಲ್ಲಾರು ದೇವಿಯ ಪರಿಚಾರಕರಾದವರು
ಸೇರಿ ಸೈನ್ಯದಲ್ಲಿ ಅಪಾರ ಸಂಭ್ರಮದಲ್ಲಿ ಹಾರ್ಯಾಡುತಿರುವರು3
ಆ ತಾಳಮೊರದಂಥ ಬೇತಾಳ ಗಣಗಳು ಪ್ರೇತ ಪಿಶಾಚಿಗಳು||
ಯಮದೂತರಸಮರವರು|| 4
ರಕ್ತ ಪಾನವ ಮಾಡಿದರು|| 5
ದುರುಳರನೆಲ್ಲನು ಹೊರಳಿಸಿ ಹೊಟ್ಟೆಯ ಕರಳವ ಬಗಟಿದರು|
ಸರಳವಾದ ಆ ಕರಳ ಮಾಲೆಯ ಮಾಡಿ ಕೊರಳೊಗ್ಹಾಕಿದರು||6
ಹಾಕಿಕೊಂಡು ಕುಣಿದಾಡಿದರು||7
ಕಂಕಲಾದಿಗಳು ಭಯಂಕರರವರು ಅಸಂಖ್ಯಾಕರಾಸವರು||
ಶಾಂಕರೀ ದೇವಿಯ ಕಿಂಕರರಿಂಥ ಅಲಂಕಾರಗಳನಿಟ್ಟರು || 8
ಅವನಂತವ ಅರಿಯೇ ನಾನು|| 9
ಆರ್ಯಾ
ಬಲ್ಲಿದ ದೈತ್ಯದ ಕೊಂದು || ನಿಲ್ಲದೆ ಅನುಭೂತಿ ಬದಿಯಲೇ
ಬಂದು || ಅಲ್ಲಿಹಳು ಮಹಾಮಾಯಾ|| ಇಲ್ಲಿ ಗೆ
ಪೂರ್ಣಾಯಿತು ಎರಡು ಅಧ್ಯಾಯಾ || ಶ್ರೀ ಹರೇಪ್ರಸೀದ||