ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಸಕೇಳಲೈ ಸರಸಿಯೊಳಗೆ ತಾ ಸರಸವಾಡುತಾ ಕರಿವರನಿರೆÉ ಪರಮ ಭೀಕರ ಪ್ರಬಲ ನಕ್ರವು ಕರಿಯ ಕಾಲನು ಪಿಡಿದು ಸೆಳೆಯಿತು 1 ಚಕಿತನಾಗುತ ಚತುರ ದ್ವಿಪವರ ಮಕರಿ ವದನದಿಂ ಮುಕ್ತನಾಗಲು ಸಕಲ ಸಾಹಸಗೈದನಕ್ಕಟ ವಿಕಲವಾಯಿತಾ ಯತ್ನವೆಲ್ಲವು 2 ನಕ್ರ ಸೆಳೆತವು ಪ್ರಬಲವಾಗಲು ದಿಕ್ಕು ತೋರದೆ ಕೂಗಿಕೊಂಡನು ಮಿಕ್ಕ ಗಜಗಳು ಕೂಡಿ ಬಿಡಿಸಲು ಶಕ್ತಿಮೀರಿ ಸಾಹಸಗೈದುವು 3 ಆನೆಗಳು ಒಂದೆಡೆ ಎಳೆಯಲು ನೆಗಳು ಒಂದೆಡೆ ಎಳೆಯಲು ಏನನೆಂಬೆ ಹೋರಾಟವೀ ಪರಿ ಏನು ನಡೆದರೂ ವಿಫಲವಾಯಿತು 4 ಹಿಂಡು ಬಳಗಗಳೆಲ್ಲ ನೋಡುತ ದಂಡೆ ಮೇಲೆ ತಾವ್ ನಿಂತುಬಿಟ್ಟವು ಜೊಂಡು ಹುಲ್ಲು ತಾ ಪಿಡಿದು ತನ್ನಯ ಶುಂಡಾಲ ಗೆದ್ದನು 5 ನಕ್ರಬಾಧೆಯು ಬಿಡಿಸಲಾರಿಗೂ ಶಕ್ಯವಾಗದೆ ಹೋಯಿತಕ್ಕಟ ದಿಕ್ಕುಗೆಟ್ಟು ತಾ ದೈನ್ಯದಿಂದಲೇ ದುಃಖಪಡುತ ಭೋರಿಟ್ಟು ಕೂಗಿದ 6 ಉದಿಸಿತಾಗ ಸುಜ್ಞಾನವವನೊಳು ಸುದತಿ ಮಕ್ಕಳು ಸಲಹರೆಂಬುದು ಬದಲು ಬಯಸದ ಬಂಧು ಕರಿಗಿರಿ ಸದನನೆಂದು ತಾನಂಬಿ ನೆನೆದನು 7
--------------
ವರಾವಾಣಿರಾಮರಾಯದಾಸರು